Dr C P Ravikumar

ಫೆನೊಬಾರ್ಬಿಟೋನ್

ಪೋಷಕರ ಅಥವಾ ರೋಗಿಯ ಮಾಹಿತಿ ಕೈಪಿಡಿ

ಡಾ ಸಿ ಪಿ ರವಿ ಕುಮಾರ್

ಸಲಹೆಗಾರ – ಪೀಡಿಯಾಟ್ರಿಕ್ ನ್ಯೂರಾಲಜಿ

MRCPCH, ಪೀಡಿಯಾಟ್ರಿಕ್ಸ್‌ನಲ್ಲಿ CCT (U.K.)

ಪೀಡಿಯಾಟ್ರಿಕ್ ಎಪಿಲೆಪ್ಸಿಯಲ್ಲಿ ಫೆಲೋ & ನರವಿಜ್ಞಾನ (ಲಂಡನ್)

ಬ್ರ್ಯಾಂಡ್ ಹೆಸರು:

ಸಿರಪ್ ಮತ್ತು ಮಾತ್ರೆ: ಗಾರ್ಡೆನಲ್

ಜೆನೆರಿಕ್ Vs ಬ್ರ್ಯಾಂಡೆಡ್ ಔಷಧಿಗಳು

ಫೆನೊಬಾರ್ಬಿಟೋನ್ ಎಂಬುದು ಅಪಸ್ಮಾರದ ಹಲವಾರು ವಿಭಿನ್ನ ಸೆಳೆವು(ಫಿಟ್ಸ್‌) ಗಳನ್ನು ನಿಯಂತ್ರಿಸಲು ಬಳಸುವ ಹಳೆಯ ಔಷಧಿಗಳಲ್ಲಿ ಒಂದು. ಇದು ಪರಿಣಾಮಕಾರಿಯಾಗಿದ್ದು, ಇದನ್ನು ವಿವಿಧ ರೀತಿಯ ಸೆಳೆವುಗಳ ಚಿಕಿತ್ಸೆಯಲ್ಲಿ ಬಳಸಲಾಗಿದೆ. ನಿದ್ರಾಜನಕತೆ ಮತ್ತು ದೀರ್ಘಕಾಲೀನ ಬಳಕೆಯಿಂದ ಉಂಟಾಗುವ ಅಡ್ಡಪರಿಣಾಮ ಇದರ ಮುಖ್ಯ ಅನಾನುಕೂಲ.

ಫೆನೊಬಾರ್ಬಿಟೋನ್ ಸೆಳೆವನ್ನು ನಿಯಂತ್ರಿಸಲು ತುರ್ತು ಸಮಯದಲ್ಲಿ ಬಳಸುವ ಪ್ರಮುಖ ಔಷಧವಾಗಿದೆ, ಅದರಲ್ಲೂ ವಿಶೇಷವಾಗಿ ನವಜಾತ ಶಿಶುವಿಗೆ ಉಂಟಾಗುವ ಸೆಳೆತದ ಚಿಕಿತ್ಸೆಯಲ್ಲಿ. ಆದರೆ, ದೀರ್ಘಕಾಲೀನ ಬಳಕೆಗಾಗಿ ಈ ಔಷಧಿಯ ಬದಲಾಗಿ ಹೊಸ ಔಷಧಿಗಳನ್ನು ಬಳಸಲಾಗುತ್ತದೆ.

ನನ್ನ ಮಗು ಈ ಔಷಧಿ ತೆಗೆದುಕೊಳ್ಳುವುದು ಏಕೆ ಮುಖ್ಯ?

ಫಿಟ್ಸ್ ಬರುವುದನ್ನು ಕಡಿಮೆ ಮಾಡಲು ಅಥವಾ ಸಂಪೂರ್ಣವಾಗಿ ತಡೆಯಲು ನಿಮ್ಮ ಮಗುವು ನಿಯಮಿತವಾಗಿ ಫೆನೊಬಾರ್ಬಿಟೋನ್ ಔಷಧಿ ತೆಗೆದುಕೊಳ್ಳುವುದು ತುಂಬಾ ಮುಖ್ಯ.

ನಿಮ್ಮ ಮಗುವಿಗೆ ಫೆನೊಬಾರ್ಬಿಟೋನ್ ನೀಡುವುದನ್ನು ದಿಢೀರನೆ ನಿಲ್ಲಿಸಬೇಡಿ. ಇದರಿಂದ ಮಗುವಿನ ಫಿಟ್ಸ್ ಹೆಚ್ಚಾಗಬಹುದು.

ಫೆನೊಬಾರ್ಬಿಟೋನ್ ಯಾವ ರೂಪದಲ್ಲಿ ಲಭ್ಯವಿದೆ?

ದ್ರವ ಹಾಗೂ ಮಾತ್ರೆಗಳ ರೂಪದಲ್ಲ ಲಭ್ಯವಿದೆ.

ಫೆನೊಬಾರ್ಬಿಟೋನ್ ಅನ್ನು ಯಾವಾಗ ನೀಡಬೇಕು?

ಗಂಭೀರ ಅಡ್ಡಪರಿಣಾಮವನ್ನು ಕಡಿಮೆ ಮಾಡುವ ಉದ್ದೇಶದಿಂದ ಸಾಮಾನ್ಯವಾಗಿ ಮಲಗುವ ವೇಳೆಗೆ, ದಿನಕ್ಕೆ ಎರಡು ಬಾರಿ ಬಳಸುವಂತೆ ಸೂಚಿಸಬಹುದು. ಉದಾಹರಣೆಗೆ, ಬೆಳಗ್ಗೆ 7 ರಿಂದ 8 ಗಂಟೆ ನಡುವೆ ಅಥವಾ ಸಂಜೆ 7 ರಿಂದ 8 ಗಂಟೆ ನಡುವಿನ ಸಮಯದಲ್ಲಿ ನೀಡಬಹುದು. ಆದರೆ, ಕನಿಷ್ಟ 10-12 ಗಂಟೆಗಳ ಅಂತರವಿರಲಿ.

ಪ್ರತಿದಿನ ನಿಗದಿತ ಸಮಯಕ್ಕೆ ಔಷಧಿ ನೀಡಬೇಕು. ಇದರಿಂದ ಔಷಧಿ ಕೊಡುವುದು ರೂಢಿಯಾಗಿ ಮರೆತು ಹೋಗುವ ಸಂಭವಗಳು ಕಡಿಮೆಯಾಗುತ್ತವೆ.

ಔಷಧಿ ಕೊಡುವುದನ್ನು ಮರೆತರೆ ಏನು ಮಾಡಬೇಕು?

ಮಾತ್ರೆಗಳು: ಒಂದು ವೇಳೆ ನಿಮಗೆ ಆರು ಗಂಟೆಗಳ ಒಳಗಾಗಿ ನೆನಪಾದರೆ ನಿಮ್ಮ ಮಗುವಿಗೆ ತಪ್ಪಿ ಹೋದ ಡೋಸ್ ನೀಡಿ. ಆರು ಗಂಟೆಗಳ ನಂತರ ನೆನಪಾದರೆ ತಪ್ಪಿಹೋದ ಡೋಸ್ ನೀಡಬೇಡಿ. ನಿಯಮಿತವಾಗಿ ನಿಗದಿತ ಡೋಸ್ ನೀಡುವ ಸಮಯದವರೆಗೂ ಕಾಯಿರಿ.

ಯಾವುದೇ ಕಾರಣಕ್ಕೂ ಎರಡು ಡೋಸ್ ಫೆನೊಬಾರ್ಬಿಟೋನ್ ನೀಡಬೇಡಿ

ಔಷಧಿಯ ಒಂದು ಡೋಸ್ ತೆಗೆದುಕೊಂಡ 30 ನಿಮಿಷಗಳ ಒಳಗೆ ನಿಮ್ಮ ಮಗು ವಾಂತಿ ಮಾಡಿಕೊಂಡರೆ ಮತ್ತೆ ಇನ್ನೊಂದು ಡೋಸ್ ನೀಡಿ; ಒಂದು ವೇಳೆ ಮಗು ಎರಡನೇ ಡೋಸ್ ತೆಗೆದುಕೊಂಡ 30 ನಿಮಿಷಗಳ ನಂತರ ವಾಂತಿ ಮಾಡಿಕೊಂಡರೆ ಮತ್ತೊಮ್ಮೆ ಅದನ್ನು ನೀಡುವುದು ಬೇಡ.

ಔಷಧಿಯ ಪ್ರಮಾಣ ಎಷ್ಟಿರಬೇಕು?

ನಿಮ್ಮ ಮಗುವಿಗೆ ಎಷ್ಟು ಪ್ರಮಾಣದಲ್ಲಿ ಫೆನೊಬಾರ್ಬಿಟೋನ್ ನೀಡಬೇಕು ಎಂಬುದನ್ನು ವೈದ್ಯರು ನಿರ್ಧರಿಸುತ್ತಾರೆ. ನೀಡಬೇಕಾದ ಔಷಧಿಯ ಪ್ರಮಾಣವನ್ನು ಸಾಮಾನ್ಯವಾಗಿ ಔಷಧಿ ಚೀಟಿಯಲ್ಲಿ ಬರೆದಿರಲಾಗುತ್ತದೆ.

ಪ್ರಾರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಫೆನೊಬಾರ್ಬಿಟೋನ್ ನೀಡಿ. ಕೆಲವು ದಿನಗಳು ಅಥವಾ ವಾರಗಳ ನಂತರ ಔಷಧಿಯ ಪ್ರಮಾಣವನ್ನು ಸ್ವಲ್ಪ ಸ್ವಲ್ಪವೇ ಹೆಚ್ಚಿಸುತ್ತಾ ಹೋಗಬೇಕಾಗುತ್ತದೆ. ನಿಮ್ಮ ವೈದ್ಯರ ಸಲಹೆಯನ್ನು ಪಾಲಿಸಿ. ಇದರಿಂದ ನಿಮ್ಮ ಮಗು ಔಷಧಿಗೆ ಹೊಂದಿಕೊಳ್ಳುತ್ತದೆ. ನಂತರ ಏನು ಮಾಡಬೇಕೆಂಬುದನ್ನು ನಿಮ್ಮ ವೈದ್ಯರು ವಿವರಿಸುತ್ತಾರೆ.

ಎಷ್ಟು ಔಷಧಿ ಕೊಡಬೇಕೆಂದು ನಿಮ್ಮ ವೈದ್ಯರು ಸೂಚಿಸುತ್ತಾರೋ ಅದನ್ನು ಪಾಲಿಸುವುದು ಮುಖ್ಯ.

ನಿಮ್ಮ ಮಗು ಫಿಟ್ಸ್ ನಿಂದ ಮುಕ್ತವಾದರೆ ಅಥವಾ ಯಾವುದೇ ಅಡ್ಡಪರಿಣಾಮಗಳು ಇಲ್ಲವೆಂದರೆ ಔಷಧಿಯ ಪ್ರಮಾಣ ಸರಿಯಾಗಿದೆ ಎಂದರ್ಥ.

ಔಷಧಿಯನ್ನು ಹೇಗೆ ನೀಡಬೇಕು? “ಔಷಧಿಗಳನ್ನು ನೀಡುವುದು”

ಮಾತ್ರೆಗಳು: ಇದನ್ನು ಒಂದು ಲೋಟ ನೀರು, ಜ್ಯೂಸ್ ಅಥವಾ ಹಾಲಿನೊಂದಿಗೆ ನುಂಗಬೇಕು. ಅಥವಾ ಇವುಗಳನ್ನು ಪುಡಿಮಾಡಿ ನೀರು, ರಸ ಅಥವಾ ಸಣ್ಣ ಪ್ರಮಾಣದ ಮೊಸರಿನೊಂದಿಗೆ ಸೇವಿಸಬಹುದು.

ದ್ರವ ಅಥವಾ ಸಿರಪ್: ಸಿರಂಜ್ ಅಥವಾ ಔಷಧಿ ಚಮಚದಿಂದ ಸರಿಯಾದ ಪ್ರಮಾಣದ ಔಷಧಿಯನ್ನು ಅಳತೆ ಮಾಡಿಕೊಳ್ಳಿ. ಇದನ್ನು ಔಷಧಿ ಅಂಗಡಿಗಳಲ್ಲಿ ಖರೀದಿಸಬಹುದು. ಅಡುಗೆಮನೆಯಲ್ಲಿ ಬಳಸುವ ಟೀ ಚಮಚವನ್ನು ಬಳಸಬೇಡಿ. ಇದರಿಂದ ಸರಿಯಾದ ಅಳತೆ ಸಿಗುವುದಿಲ್ಲ.

ಇದರಿಂದ ಏನಾದರೂ ಅಡ್ಡಪರಿಣಾಮಗಳಾಗುವ ಸಾಧ್ಯತೆ ಇದೆಯೇ? “ಅಡ್ಡಪರಿಣಾಮಗಳು”

ನಮ್ಮ ಮಕ್ಕಳ ಆರೋಗ್ಯ ಉತ್ತಮಪಡಿಸಲು ನಾವು ಔಷಧಿಗಳನ್ನು ಬಳಸುತ್ತೇವೆ. ಆದರೆ, ಕೆಲವೊಮ್ಮೆ ಅವು ಅನಗತ್ಯ ಪರಿಣಾಮಗಳನ್ನು(ಅಡ್ಡಪರಿಣಾಮಗಳು) ಉಂಟು ಮಾಡಬಹುದು.

ನಿಮ್ಮನ್ನು ಚಿಂತೆಗೀಡುವ ಅಡ್ಡಪರಿಣಾಮಗಳು

ಅಸಾಧಾರಣ ನಿದ್ರೆ ಅಥವಾ ವರ್ತನೆಯ ಬದಲಾವಣೆಯು ಸಾಮಾನ್ಯವಾಗಿ ಕಂಡು ಬರುವ ಅಡ್ಡಪರಿಣಾಮಗಳಾಗಿದ್ದು, ಇದು ವ್ಯಕ್ತಿಯಲ್ಲಿ ಚಡಪಡಿಕೆ ಮತ್ತು ತಳಮಳಕ್ಕೆ ಕಾರಣವಾಗುತ್ತದೆ.

ಔಷಧಿಯು ಏಕಾಗ್ರತೆಯ ಮೇಲೂ ಪರಿಣಾಮ ಬೀರಬಹುದು.

ಫಿನೊಬಾರ್ಬಿಟೋನ್ ಔಷಧಿಯನ್ನು ವರ್ಷಾನುಗಟ್ಟಲೆ ಬಳಸಿದರೆ, ಅದು ಗ್ರಹಿಕಾ ಶಕ್ತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಅಪಸ್ಮಾರ ಹೊಂದಿರುವ ಮಕ್ಕಳು ಗ್ರಹಿಕಾ ಸಮಸ್ಯೆಗಳೊಂದಿಗೆ ಇತರ ಸಮಸ್ಯೆಗಳನ್ನು ಹೊಂದಿರಬಹುದು. ಅಂತಹ ಸಂದರ್ಭಗಳಲ್ಲಿ ಗ್ರಹಿಕಾ ಶಕ್ತಿಯ ಮೇಲೆ ಈ ಔಷಧದ ಪರಿಣಾಮವನ್ನು ತಿಳಿಯುವುದು ಕಷ್ಟ.

ಯಕೃತ್ತಿನ ಕಾಯಿಲೆ: ಯಾವುದೇ ನಿಮ್ಮ ಮಗು ಪ್ರತಿ ಕೆಲವು ಗಂಟೆಗಳಿಗೊಮ್ಮೆ ವಾಂತಿ ಮಾಡುತ್ತಿದ್ದರೆ, ಅಥವಾ ಹೊಟ್ಟೆ ನೋವು, ತುಂಬಾ ನಿದ್ರೆ, ಕಾಮಾಲೆ ಉಂಟಾದರೆ (ಚರ್ಮ ಅಥವಾ ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ) ಅಥವಾ ಸಾಮಾನ್ಯಕ್ಕಿಂತ ಹೆಚ್ಚು ಬಾರಿ ಫಿಟ್ಸ್ ಗೆ ಒಳಗಾಗುತ್ತಿದ್ದರೆ, ಅವರನ್ನು ನಿಮ್ಮ ವೈದ್ಯರಿಗೆ ತೋರಿಸಿ ಅಥವಾ ನೇರವಾಗಿ ಆಸ್ಪತ್ರೆಗೆ ಕರೆದೊಯ್ಯಿರಿ.

ಕೆಲವೊಮ್ಮೆ ಫೆನೊಬಾರ್ಬಿಟೋನ್, ರಕ್ತಸ್ರಾವ ಉಂಟಾದಾಗ ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುವ ಪ್ಲೇಟ್‌ಲೆಟ್‌ಗಳನ್ನು ಕಡಿಮೆ ಮಾಡಿಬಿಡುತ್ತದೆ. ಇದು ವಿರಳವಾದರೂ ನಿಮ್ಮ ಮಗುವಿಗೆ ಮೂಗೇಟುಗಳು ಅಥವಾ ರಕ್ತಸ್ರಾವವಾಗಿದ್ದರೆ, ವೈದ್ಯರನ್ನು ಸಂಪರ್ಕಿಸಿ. ಅವರು ಮಗುವಿನ ರಕ್ತಪರೀಕ್ಷೆಗೆ ವ್ಯವಸ್ಥೆ ಮಾಡುತ್ತಾರೆ.

ನಿಮ್ಮ ಮಗುವಿಗೆ ದೇಹದಲ್ಲಿ ದದ್ದುಗಳು ಉಂಟಾದರೆ, ಔಷಧಿ ನೀಡುವುದನ್ನು ನಿಲ್ಲಿಸಿ ಮತ್ತು ತಕ್ಷಣ ವೈದ್ಯರಿಂದ ಸಲಹೆ ಪಡೆಯಿರಿ.

ಕೆಲವೊಮ್ಮೆ, ಈ ಮೇಲೆ ಪಟ್ಟಿ ಮಾಡಿದ ಅಡ್ಡಪರಿಣಾಮಗಳನ್ನು ಹೊರತುಪಡಿಸಿ ಇತರೆ ಅಡ್ಡಪರಿಣಾಮಗಳು ಸಹ ಉಂಟಾಗಬಹುದು. ಅಂತಹ ಅಸಾಮಾನ್ಯವಾದುದು ನಿಮ್ಮ ಗಮನಕ್ಕೆ ಬಂದರೆ ಮತ್ತು ಈ ಕುರಿತು ನಿಮಗೆ ಯಾವುದೇ ಅನುಮಾನಗಳಿದ್ದಲ್ಲಿ,/ ಆತಂಕವಿದ್ದಲ್ಲಿ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಇಷ್ಟೆಲ್ಲಾ ಅಡ್ಡಪರಿಣಾಮಗಳ ಹೊರತಾಗಿಯೂ, ಪೊನೊಬಾರ್ಬಿಟೋನ್ ಉತ್ತಮ ಅಪಸ್ಮಾರ ನಿರೋಧಕ ಔಷಧವಾಗಿದ್ದು, ಮಗುವಿನ ವರ್ತನೆ, ಎಚ್ಚರಿಕೆ ಮತ್ತು ಕಲಿಕಾ ಸಾಮರ್ಥ್ಯದ ಮೇಲೆ ಕಡಿಮೆ ಪರಿಣಾಮ ಬೀರುತ್ತದೆ.

ಫೆನೊಬಾರ್ಬಿಟೋನ್ ನೀಡುವ ಸಮಯದಲ್ಲಿ ಇತರೆ ಸಾಮಾನ್ಯ ಔಷಧಿಗಳನ್ನು ನೀಡಬಹುದೇ?

• ಪ್ಯಾರಾಸಿಟಮೆಲ್ ಅಥವಾ ಇಬುಪ್ರೊಫೆನ್‌ವುಳ್ಳ ಔಷಧಿಗಳು, ಆಂಟಿಬಯಾಟಿಕ್ಸ್ ಅಥವಾ ಇತರೆ ಸಾಮಾನ್ಯ ಔಷಧಿಗಳನ್ನು ನಿಮ್ಮ ಮಗುವಿಗೆ ನೀಡಬಹುದು. ಆದರೆ, ಪ್ರತಿಜೀವಕ ಅಂಶಗಳನ್ನೊಳಗೊಂಡ ಔಷಧಿ ಮತ್ತು ಮೆಡಿಕಲ್ ಸ್ಟೋರ್ ನಲ್ಲಿ ಕೊಂಡ ಇತರೆ ಔಷಧಿಗಳನ್ನು ನೀಡುವ ಮುನ್ನ ವೈದ್ಯರ ಸಲಹೆ ಪಡೆಯಿರಿ.

• ನಿಮ್ಮ ಮಗುವಿಗೆ ಬೇರೆ ಔಷಧಿಗಳನ್ನು ನೀಡುವ ಮೊದಲು ನಿಮ್ಮ ವೈದ್ಯರನ್ನೊಮ್ಮೆ ಸಂಪರ್ಕಿಸಿ. ಅದು ಗಿಡಮೂಲಿಕೆ ಅಥವಾ ಪೂರಕ ಔಷಧಿಗಳಾಗಿದ್ದರೂ ವೈದ್ಯರ ಸಲಹೆ ಇಲ್ಲದೆ ಮುಂದುವರೆಯಬೇಡಿ.

• ಅಪಸ್ಮಾರಕ್ಕೆ ಚಿಕಿತ್ಸೆ ನೀಡಲು ಬಳಸುವ ಇತರೆ ಔಷಧಿಗಳು, ಫೆನೊಬಾರ್ಬಿಟೋನ್ ನಷ್ಟೇ ಉತ್ತಮವಾಗಿ ಕಾರ್ಯ ನಿರ್ವಹಿಸಬಹುದು ಅಥವಾ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು. ಅಡ್ಡಪರಿಣಾಮಗಳ ಬಗ್ಗೆ ನಿಮಗೆ ಆತಂಕವಾದರೆ ಅಥವಾ ನಿಮ್ಮ ಮಗುವಿಗೆ ಹೆಚ್ಚು ಬಾರಿ ಫಿಟ್ಸ್ ಬರುತ್ತಿದ್ದರೆ, ವೈದ್ಯರನ್ನು ಸಂಪರ್ಕಿಸಿ.

ಫೆನೋಬಾರ್ಬಿಟೋನ್ ಮತ್ತು ಗರ್ಭಧಾರಣೆ

• ಫೆನೊಬಾರ್ಬಿಟೋನ್ ಭ್ರೂಣದ ಮೇಲೆ ಗಮನಾರ್ಹ ಪರಿಣಾಮ ಬೀರುವುದರಿಂದ, ಗರ್ಭಾವಸ್ಥೆಯಲ್ಲಿ ಈ ಔಷಧಿಯನ್ನು ಬಳಸದಂತೆ ಸೂಚಿಸಲಾಗಿದೆ.

• ಫೆನೋಬಾರ್ಬಿಟೋನ್ ತೆಗೆದುಕೊಳ್ಳುವ ಮಹಿಳೆಯರು ಅಥವಾ ಹುಡುಗಿಯರಲ್ಲಿ ಅವರಉ ಸೇವಿಸುವ ಗರ್ಭನಿರೋಧಕ ಮಾತ್ರೆ ಕಡಿಮೆ ಪರಿಣಾಮಕಾರಿಯಾಗಬಹುದು. ಹಾಗಾಗಿ, ಪರ್ಯಾಯ ಗರ್ಭನಿರೋಧಕ ವಿಧಾನಗಳನ್ನು ಪರಿಗಣಿಸುವುದು ಉತ್ತಮ.

ಔಷಧಿಯನ್ನು ಎಲ್ಲಿ ಸಂರಕ್ಷಿಸಿ ಇಡಬೇಕು?

ಔಷಧಿಯನ್ನು…

• ಸೂರ್ಯನ ಕಿರಣ ಮತ್ತು ಉಷ್ಣತೆಯಿಂದ ದೂರವಿರುವಂತೆ ಕಬೋರ್ಡ್ ನಲ್ಲಿ ಇಡಿ. ಇದನ್ನುಫ್ರಿಡ್ಜ್ ನಲ್ಲಿ ಇಡುವ ಅವಶ್ಯಕತೆ ಇಲ್ಲ.

• ಮಕ್ಕಳ ಕಣ್ಣಿಗೆ ಕಾಣಿಸದಂತೆ ಅಥವಾ ಅವರ ಕೈಗೆಟುಕದಂತೆ ನೋಡಿಕೊಳ್ಳಿ.

• ತಂದ ಬಾಕ್ಸ್ ನಲ್ಲಿಯೇ ಇಡಿ.

ಸಂಪೂರ್ಣ ಮಾಹಿತಿಗಾಗಿ ಉತ್ಪಾದಕರ ಮಾಹಿತಿ ಕೈಪಿಡಿಯನ್ನು ನೋಡಿ.

ಉಲ್ಲೇಖಗಳು:

  1. ಐಎಪಿ ಡ್ರಗ್ ಫಾರ್ಮುಲರಿ ವೆಬ್ ಅಪ್‌ಡೇಟ್ 2020 (3) ಆವೃತ್ತಿ 58, https://www.iapdrugformulary.com/Home
  2. ಗ್ರಾಹಕ ಔಷಧಿಗಳ ಮಾಹಿತಿ (ಸಿಎಮ್ಐ), https://www.tga.gov.au/consumer-medicines-information-cmi
  3. ಬ್ರಿಟಿಷ್ ಮಕ್ಕಳ ರಾಷ್ಟ್ರೀಯ ಫಾರ್ಮುಲರಿ (ಬಿಎನ್‌ಎಫ್‌ಸಿ)
  4. ಅಮೆರಿಕಾನ್ ಆಹಾರ ಮತ್ತು ಔಷಧಿಗಳ ಆಡಳಿತ, ಯುಎಸ್ಎ; https://www.fda.gov
Picture of Dr C P Ravikumar

Dr C P Ravikumar

CONSULTANT – PEDIATRIC NEUROLOGY
Aster CMI Hospital, Bangalore