
ಡಾ. ರವಿ ಬಗ್ಗೆ:
ನಮಸ್ತೆ! ನಾನು ಡಾ. ರವಿ, ನ್ಯೂರಲಾಜಿಕಲ್ ಮತ್ತು ಹೆಲ್ತ್‌ಕೇರ್ ಕ್ಷೇತ್ರದಲ್ಲಿ 20ಕ್ಕೂ ಹೆಚ್ಚು ವರ್ಷಗಳ ವೈವಿಧ್ಯಮಯ ಅನುಭವ ಹೊಂದಿರುವ ಕ್ಲಿನಿಕಲ್ ಪೀಡಿಯಾಟ್ರಿಕ್ ನರರೋಗ ತಜ್ಞ. ನಾನು ಇದುವರೆಗೆ 1000ಕ್ಕೂ ಹೆಚ್ಚು ಮಕ್ಕಳಿಗೆ ಚಿಕಿತ್ಸೆಯನ್ನು ಕೊಟ್ಟಿದ್ದು, ಗಂಭೀರ ನರವೈಜ್ಞಾನಿಕ ಸಮಸ್ಯೆಗಳಿಂದ ಉಂಟಾದ ಅಂಗವೈಕಲ್ಯಗಳನ್ನು ನಿವಾರಿಸಲು ಅವರಿಗೆ ನೆರವಾಗಿದ್ದೇನೆ.
ಡಾ. ರವಿ ಅವರು ನಮ್ಮ ಮಗುವಿನ ಚಿಕಿತ್ಸೆಯ ಸಂದರ್ಭದಲ್ಲಿ ತುಂಬಾ ಸಹಾಯ ಮಾಡಿದ್ದಾರೆ. ಅವರ ಕ್ರಿಯಾಶೀಲತೆ ಮತ್ತು ಸಕಾಲಿಕ ಸಲಹೆ ನಮ್ಮ ಮಗುವಿಗೆ ಬರಬಹುದಾಗಿದ್ದ ಗಂಭೀರ ಸಮಸ್ಯೆಗಳನ್ನು ತಡೆಯಲು ನೆರವಾಗಿದೆ. ನಮ್ಮ ಮಗುವಿನ ನಗುವೇ ಅವರು ನಮಗೆ ಕೊಟ್ಟ ಅಮೂಲ್ಯ ಉಡುಗೊರೆ!
ನಿಮ್ಮ ಮಗುವನ್ನು ಇನ್ನೊಬ್ಬ ಪೋಷಕನಂತೆ ನೋಡಿಕೊಳ್ಳುವ ವೈದ್ಯರು ಸಿಗುವುದು ತುಂಬಾ ಅಪರೂಪ. ನಮ್ಮ ಮಗಳ ಆರೈಕೆ ಮಾಡುವಾಗ ಡಾ. ರವಿಯವರು ತೋರಿದ ತಾಳ್ಮೆ ಮತ್ತು ಅವರು ನಮಗೆ ನಿರಂತರವಾಗಿ ಕೊಟ್ಟ ಭರವಸೆ ಮತ್ತು ಬೆಂಬಲ, ನಮ್ಮ ಚಿಂತೆಯನ್ನು ದೂರ ಮಾಡಿದವು! ಆಕೆಯ ಸಮಸ್ಯೆಯನ್ನು ಬೇಗನೆ ಮತ್ತು ನಿಖರವಾಗಿ ಕಂಡು ಹಿಡಿದಿದ್ದಕ್ಕಾಗಿ ನಾವು ಅವರಿಗೆ ಯಾವಾಗಲೂ ಋಣಿಯಾಗಿರುತ್ತೇವೆ.
ಡಾ.ರವಿ ಅವರಿಗೆ ಇರುವ ಅರಿವು ಮತ್ತು ಅನುಭವ, ನಮ್ಮಂತಹ ವೃತ್ತಿಪರರಿಗೆ ಬಹಳ ಅಮೂಲ್ಯ. ಗಂಭೀರ ಪ್ರಕರಣಗಳಲ್ಲಿ ಅವರು ಪಡೆದ ಅನುಭವಗಳು, ರೋಗಿಯಲ್ಲಿ ಕಾಣಿಸಿಕೊಳ್ಳುವ ಹಲವಾರು ಸಮಸ್ಯೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಮಗೆ ನೆರವಾಗುತ್ತಿವೆ. ವೈದ್ಯರಾದ ನಮಗೆ, ಅವರ ತಿಳುವಳಿಕೆಯಿಂದ ಸಿಗುತ್ತಿರುವ ಬೆಂಬಲ ನಿಜವಾಗಿಯೂ ಅತ್ಯಮೂಲ್ಯ.
ಡಾ. ರವಿ ಅವರ ವರ್ಕ್‍ಶಾಪ್‍ಗಳನ್ನು ನಾವು ತುಂಬಾ ಇಷ್ಟ ಪಡುತ್ತೇವೆ. ಸಂಕೀರ್ಣ ವಿಷಯಗಳನ್ನೂ ಸಹ ಅವರು ಸಲೀಸಾಗಿ ವಿವರಿಸಿ, ನಮ್ಮ ಹಲವಾರು ಸಂದೇಹಗಳಿಗೆ ನಗುನಗುತ್ತಲೇ ಉತ್ತರಿಸುತ್ತಾರೆ. ನನ್ನ ಪ್ರಕಾರ, ಎಲ್ಲಾ ನ್ಯೂರಾಲಜಿ ವಿದ್ಯಾರ್ಥಿಗಳು ಒಮ್ಮೆಯಾದರೂ ಅವರ ಟ್ರೈನಿಂಗ್ ಸೆಷನ್‍ನಲ್ಲಿ ಪಾಲ್ಗೊಳ್ಳಬೇಕು!
ಕನ್ಸಲ್ಟಿಂಗ್ ಸ್ಥಳಗಳು
ನಮ್ಮೊಡನೆ ಮಾತಾಡಲು/ಸಂಪರ್ಕಕ್ಕೆ:
ಸಮಾಲೋಚನೆಗಾಗಿ ಅಥವಾ ನಮ್ಮ ಜೊತೆ ಕೆಲಸ ಮಾಡಲು, ಅಥವಾ ಯಾವುದೇ ಪ್ರಶ್ನೆಗಳನ್ನು ಕೇಳಲು, ದಯವಿಟ್ಟು ಇಲ್ಲಿನ ವಿವರಗಳನ್ನು ತುಂಬಿ. ನಾನು ನಿಮಗೆ ಉತ್ತರ ನೀಡುತ್ತೇನೆ!