ಡಾ. ಸಿ.ಪಿ. ರವಿಕುಮಾರ್

ಕನ್ಸಲ್ಟೆಂಟ್ – ಪೀಡಿಯಾಟ್ರಿಕ್ ನ್ಯೂರೋಲಜಿ

ಈಗಲೇ ಸಂಪರ್ಕಿಸಿ

ಡಾ. ಸಿ.ಪಿ. ರವಿಕುಮಾರ್ ಅವರು ಒಬ್ಬ ಪೀಡಿಯಾಟ್ರಿಕ್ ನ್ಯೂರಾಲಜಿಸ್ಟ್ (ನರರೋಗತಜ್ಞ) ಆಗಿದ್ದು, ಸಂಕೀರ್ಣ ನರವೈಜ್ಞಾನಿಕ ಸಮಸ್ಯೆಗಳನ್ನು ನಿಭಾಯಿಸುವಲ್ಲಿಅವರು 20 ವರ್ಷಗಳ ಅನುಭವ ಹೊಂದಿದ್ದಾರೆ. ಅದಲ್ಲದೇ, ಇವರು ತಮ್ಮ ಪ್ರಾಕ್ಟೀಸ್ ಅವಧಿಯನ್ನು ಪೀಡಿಯಾಟ್ರಿಕ್ಸ್ ಕ್ಷೇತ್ರಕ್ಕೆ ಮೀಸಲಾಗಿಟ್ಟಿದ್ದರು ಎಂಬುದು ಗಮನಾರ್ಹ. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂಬಿಬಿಎಸ್ ಪದವಿ ಪಡೆದ ಇವರು, 2013ರಲ್ಲಿ ಯುನೈಟೆಡ್ ಕಿಂಗ್‍ಡಮ್‍ನ ರಾಯಲ್ ಕಾಲೇಜ್ ಆಫ್ ಪೀಡಿಯಾಟ್ರಿಕ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು. ಡಾ. ರವಿ ಅವರು ಲಂಡನ್‍ನಲ್ಲಿರುವ ಪ್ರತಿಷ್ಠಿತ ಎವೆಲಿನಾ ಚಿಲ್ಡ್ರನ್ಸ್ ಹಾಸ್ಪಿಟಲ್ ಮತ್ತು ಸೇಂಟ್ ಜಾರ್ಜ್ ಹಾಸ್ಪಿಟಲ್, ಬ್ರೈಟನ್‍ನ ರಾಯಲ್ ಅಲೆಕ್ಸಾಂಡ್ರಾ ಚಿಲ್ಡ್ರನ್ಸ್ ಹಾಸ್ಪಿಟಲ್ ಮತ್ತು ಯುನೈಟೆಡ್ ಕಿಂಗ್‌ಡಮ್‌ನ ನ್ಯಾಷನಲ್ ಸೆಂಟರ್ ಫಾರ್ ಯಂಗ್ ಎಪಿಲೆಪ್ಸಿಗಳಲ್ಲಿ ಕ್ಲಿನಿಕಲ್ ನ್ಯೂರಾಲಜಿ ತರಬೇತಿ ಪಡೆದರು ಹಾಗೂ ಬಾಲ್ಯದಲ್ಲಿ ಕಾಣಿಸಿಕೊಳ್ಳುವ ನರವೈಜ್ಞಾನಿಕ ಸಮಸ್ಯೆಗಳ ಚಿಕಿತ್ಸೆಯಲ್ಲಿ ಪರಿಣಿತಿ ಪಡೆದರು. ಇವರು ಸ್ಪೆಷಲಿಸ್ಟ್ ರಿಜಿಸ್ಟ್ರಾರ್ ಮತ್ತು ಕನ್ಸಲ್ಟೆಂಟ್ ಪೀಡಿಯಾಟ್ರಿಶಿಯನ್ ಆಗಿಯೂ ಕೆಲಸ ಮಾಡಿದ್ದಾರೆ ಹಾಗೂ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕಾಂಪ್ಲೆಕ್ಸ್ ಎಪಿಲೆಪ್ಸಿ ವಿಷಯದಲ್ಲಿ ಪೋಸ್ಟ್-ಸಿಎಸ್ಎಸ್‍ಟಿ ಪೂರ್ಣಗೊಳಿಸಿದ್ದಾರೆ. ಸದ್ಯ ಬೆಂಗಳೂರಿನ ಆಸ್ಟರ್ ಸಿಎಂಐ ಮತ್ತು ಆಸ್ಟರ್ ಆರ್‌ವಿ ಆಸ್ಪತ್ರೆಯಲ್ಲಿ ಕನ್ಸಲ್ಟೆಂಟ್ ಪೀಡಿಯಾಟ್ರಿಕ್ ನರರೋಗ ತಜ್ಞರಾಗಿ ಕೆಲಸ ಮಾಡುತ್ತಿದ್ದಾರೆ.

ಪರಿಸರದಿಂದ ಮಕ್ಕಳ ಅಭಿವೃದ್ಧಿಯ ಮೇಲೆ ಆಗುತ್ತಿರುವ ಪರಿಣಾಮದ ಕುರಿತು, ಡಾ. ರವಿಯವರು ಹಲವಾರು ಸಮಾವೇಶಗಳಲ್ಲಿ ಮಾತಾಡಿದ್ದಾರೆ. ಉದಯೋನ್ಮುಖ ತಜ್ಞರೊಂದಿಗೆ ಜ್ಞಾನವನ್ನು ಹಂಚಿಕೊಳ್ಳುವುದು ಮುಖ್ಯ ಎಂದು ಬಲವಾಗಿ ನಂಬಿರುವ ಡಾ.ರವಿಯವರು, ಅವರಿಗೆ ವ್ಯಾಪಕವಾಗಿ ಟ್ರೈನಿಂಗ್ ಕೊಡುವ ಕೆಲಸದಲ್ಲಿ ತೊಡಗಿದ್ದಾರೆ ಹಾಗೂ ಕೆಲವು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸಂದರ್ಶಕ ಅಧ್ಯಾಪಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜಕ್ಕೆ ಒಳಿತನ್ನು ಬಯಸುವ ಮನಸ್ಸಿರುವ ಇವರು, ‘ಬ್ರೈನ್ ಚೈಲ್ಡ್ ಟ್ರಸ್ಟ್’ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಮಕ್ಕಳ ನರವಿಜ್ಞಾನಿಗಳು ಮತ್ತು ಡೆವಲಪ್ಮೆಂಟಲ್ ಪೀಡಿಯಾಟ್ರಿಶಿಯನ್‍ಗಳು, ಲಾಂಗ್ವೇಜ್ ಥೆರಪಿಸ್ಟ್, ಫಿಸಿಯೋಥೆರಪಿಸ್ಟ್, ಆಕ್ಯುಪೇಷನಲ್ ಥೆರಪಿಸ್ಟ್ ಮತ್ತು ಶೈಕ್ಷಣಿಕ ಮನೋವಿಜ್ಞಾನಿಗಳ ಜೊತೆಗೂಡಿ ಕೆಲಸ ಮಾಡಲು ನೆರವಾಗುವಂತಹ ಒಂದು ಸಮಗ್ರ ಶಿಶು ಕೇಂದ್ರವನ್ನು ಅಭಿವೃದ್ಧಿಪಡಿಸುವುದು ಹಾಗೂ ಆ ಮೂಲಕ ಪ್ರತಿಯೊಬ್ಬ ಅಸಮರ್ಥರನ್ನೂ “ಸಮರ್ಥ”ರನ್ನಾಗಿಸಲು ನೆರವಾಗುವುದೇ ಈ ಸಂಸ್ಥೆಯ ಗುರಿ ಮತ್ತು ಉದ್ದೇಶವಾಗಿದೆ.

ಗುರಿ

ಪ್ರಪಂಚದಾದ್ಯಂತದ ನರವೈಜ್ಞಾನಿಕ ಅಥವಾ ಬೆಳವಣಿಗೆಯ ಸಮಸ್ಯೆಗಳಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸೆ ಮತ್ತು ಆರೈಕೆಗಾಗಿ ಮಕ್ಕಳ ಸಮಗ್ರ ನರವೈಜ್ಞಾನಿಕ ಆರೈಕೆಯನ್ನು ಸಾಕಾರಗೊಳಿಸುವುದು.

ಇವರ ಪರಿಣಿತಿ

ಬಾಲ್ಯಾವಸ್ಥೆಯ ಅಪಸ್ಮಾರ (ಎಪಿಲೆಪ್ಸಿ)
ಅಪಸ್ಮಾರ (ಎಪಿಲೆಪ್ಸಿ)ಯ ನಿರ್ವಹಣೆ
ಕಿಟೋ ಡಯೆಟ್ ನಿರ್ವಹಣೆ
ವೇಗಸ್ ನರದ ಪ್ರಚೋದ
ನರವೈಜ್ಞಾನಿಕ ಸಮಸ್ಯೆಗಳು

ಬೆಳವಣಿಗೆಯಲ್ಲಿ ವಿಳಂಬ
ನವಜಾತ ಶಿಶುಗಳಲ್ಲಿ ಕಾಣಿಸಿಕೊಳ್ಳುವ ತಲೆನೋವು
ಆಟಿಸಂ
ಎ‍ಡಿಎಚ್‍ಡಿ

ವೃತ್ತಿಯ ಕಡೆಗೊಂದು ಪಕ್ಷಿನೋಟ

ಸದಸ್ಯತ್ವಗಳು

 • ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್
  ಡಾ. ರವಿ ಅವರು ಭಾರತದ ಐಎಪಿ ನ್ಯೂರಾಲಜಿ ವಿಭಾಗದ ಕಾರ್ಯನಿರ್ವಾಹಕ ಸದಸ್ಯರಾಗಿದ್ದಾರೆ ಮತ್ತು ಐಎಪಿ ನ್ಯೂರಾಲಜಿ ಮತ್ತು ನ್ಯೂರೋ-ಡೆವಲಪ್‌ಮೆಂಟ್‌ ಉಪವಿಭಾಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
 • ಅಸೋಸಿಯೇಷನ್ ​​ಆಫ್ ಚೈಲ್ಡ್ ನ್ಯೂರಾಲಜಿಸ್ಟ್ಸ್ ಆಫ್ ಇಂಡಿಯಾ
  ನರಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳ ಆರೈಕೆಯಲ್ಲಿ ತೊಡಗಿರುವ ವೃತ್ತಿಪರ ವೈದ್ಯರ ಈ ವ್ಯಾಪಕ ಜಾಲದಲ್ಲಿ ಡಾ. ರವಿ ಅವರೂ ಕೂಡ ಸದಸ್ಯರಾಗಿದ್ದಾರೆ.
 • ಇಂಡಿಯನ್ ಅಕಾಡೆಮಿ ಆಫ್ ನ್ಯೂರಾಲಜಿ
  ನ್ಯೂರಾಲಾಜಿಕಲ್‌ ಆರೈಕೆಗಾಗಿ ಉತ್ತಮ ಚಿಕಿತ್ಸಾ ವಿಧಾನಗಳನ್ನು ರಚಿಸಲು ಸಂಶೋಧನೆ ಮತ್ತು ಅಭಿವೃದ್ಧಿಗೆ ಅರ್ಪಿಸಿಕೊಂಡಿರುವ ಈ ಹೆಸರಾಂತ ಸಂಸ್ಥೆಯಲ್ಲಿ ಡಾ. ರವಿ ಅವರು ಸಕ್ರಿಯ ಸದಸ್ಯರಾಗಿದ್ದಾರೆ.
 • ಇಂಟರ್ನ್ಯಾಷನಲ್ ಚೈಲ್ಡ್ ನ್ಯೂರಾಲಜಿ ಅಸೋಸಿಯೇಷನ್
  ಇದು ನರವೈಜ್ಞಾನಿಕ ಸಮಸ್ಯೆಗಳಿರುವ ಮಕ್ಕಳ ಆರೈಕೆ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶ ಹೊಂದಿರುವ ಚೈಲ್ಡ್‌ ನ್ಯೂರಾಲಜಿಸ್ಟ್‌ಗಳ ಅಂತರರಾಷ್ಟ್ರೀಯ ಸಂಘವಾಗಿದ್ದು, ಡಾ. ರವಿಯವರು ಇದರ ಸದಸ್ಯರಾಗಿದ್ದಾರೆ.
 • ಇಂಡಿಯನ್ ಎಪಿಲೆಪ್ಸಿ ಸೊಸೈಟಿ
  ಎಪಿಲೆಪ್ಸಿ ಆರೈಕೆ ತಜ್ಞರನ್ನು ಒಳಗೊಂಡಿರುವ ಈ ವೃತ್ತಿಪರ ಸಂಸ್ಥೆ, ಎಪಿಲೆಪ್ಸಿ ರೋಗಿಗಳ ಆರೈಕೆ ಗುಣಮಟ್ಟ ಹೆಚ್ಚಿಸುವ ಹಾಗೂ ಅದರ ಬಗ್ಗೆ ಅರಿವು ಮೂಡಿಸುವ ಉದ್ದೇಶ ಹೊಂದಿದೆ. ಡಾ. ರವಿಯವರು ಇದರ ಭಾಗವಾಗಿದ್ದಾರೆ.
 • ಇಂಡಿಯನ್ ಎಪಿಲೆಪ್ಸಿ ಅಸೋಸಿಯೇಷನ್
  ನರಸಂಬಂಧಿ ಖಾಯಿಲೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಸಿಗುವಂತೆ ಮಾಡುವ ಉದ್ದೇಶವುಳ್ಳ ಈ ಸಂಘಟನೆಯಲ್ಲಿ, ಡಾ. ರವಿಯವರು ಅತ್ಯಂತ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
 • ನ್ಯಾಷನಲ್ ನಿಯೋನಾಟಲ್ ಫೋರಮ್ ಆಫ್ ಇಂಡಿಯಾ (ಎನ್‌ಎನ್‌ಎಫ್)
  ಡಾ. ರವಿ ಅವರು, ನವಜಾತ ಶಿಶುಗಳ ಆರೈಕೆ ಗುಣಮಟ್ಟ ಹೆಚ್ಚಿಸುವ ಕೆಲಸದಲ್ಲಿ ತೊಡಗಿರುವ ಶಿಶುತಜ್ಞರ ಈ ಅಖಿಲ ಭಾರತ ತಂಡದ ಭಾಗವಾಗಿದ್ದಾರೆ.
 • ಬ್ರಿಟಿಷ್ ಪೀಡಿಯಾಟ್ರಿಕ್ ನ್ಯೂರಾಲಜಿ ಅಸೋಸಿಯೇಷನ್ (ಬಿಪಿಎನ್ಎ)
  ರವಿಯವರು 2016 ರಿಂದ ಬಿಪಿಎನ್ಎಯ ವಿವಿಧ ತರಬೇತಿ ಕಾರ್ಯಕ್ರಮಗಳಾದ PET, CHAT ಮತ್ತು ಟ್ರೈನ್ ದಿ ಟ್ರೈನರ್ ಪ್ರೋಗ್ರಾಮ್‌ಗಳ ಬೋಧಕರಾಗಿದ್ದಾರೆ.