ವಿಟಮಿನ್ B12

ಪರಿಚಯ:
ವಿಟಮಿನ್ ಬಿ 12 (ಕೋಬಾಲಾಮಿನ್ ಎಂದೂ ಸಹ ಕರೆಯಲಾಗುತ್ತದೆ) ನೀರಿನಲ್ಲಿ ಕರಗುವ ಗುಣವುಳ್ಳ ವಿಟಮಿನ್ ಆಗಿದ್ದು, ಮೂಳೆಯ ಮಜ್ಜೆಯಲ್ಲಿ ಕೆಂಪು ರಕ್ತ ಕಣಗಳ ರಚನೆಗೆ ಸಹಾಯ ಮಾಡಲು, ಚರ್ಮ ಮತ್ತು ಅಂಗಾಂಶಗಳನ್ನು ಗುಣಪಡಿಸಿ ಪುನರುತ್ಪಾದಿಸಲು ಹಾಗೂ ದೇಹದ ರೋಗ ನಿರೋಧಕ ಶಕ್ತಿಯ ಹೆಚ್ಚಳದ ಸಲುವಾಗಿ ಕರುಳಿನಲ್ಲಿ ಹೀರಿಕೊಳ್ಳಲ್ಪಡುತ್ತದೆ

ದೈನಂದಿನ ಜೀವನದಲ್ಲಿ ಅಗತ್ಯವಿರುವ ಪ್ರಮಾಣ

ವಯಸ್ಸು ಶಿಫಾರಸು ಮಾಡಲಾಗುವ ಪ್ರಮಾಣ
ಜನನದಿಂದ  6 ತಿಂಗಳುಗಳವರೆಗೆ 0.4 mcg
ಶಿಶುಗಳು 7–12 ತಿಂಗಳು 0.5 mcg
ಮಕ್ಕಳು 1–3 ವರ್ಷ 0.9 mcg
ಮಕ್ಕಳು 4–8 ವರ್ಷ 1.2 mcg
ಮಕ್ಕಳು 9–13 ವರ್ಷ 1.8 mcg
ಹದಿಹರೆಯದವರು 14–18 ವರ್ಷ 2.4 mcg
ವಯಸ್ಕರು 2.4 mcg
ಹದಿಹರೆಯದ ಗರ್ಭಿಣಿಯರು ಮತ್ತು ಮಹಿಳೆಯರು 2.6 mcg
ಹಾಲೂಡಿಸುವ (ಸ್ತನ್ಯಪಾನ) ಹದಿಹರೆಯದರು ಮತ್ತು ಮಹಿಳೆಯರು 2.8 mcg

ಮೂಲಗಳು
1. ನೈಸರ್ಗಿಕ:
2. ಮೊಟ್ಟೆ
3. ಮೊಸರು
4. ಹಾಲು
5. ಪನ್ನೀರ್
6. ಮಾಂಸ (ಕೋಳಿ)
ಸಸ್ಯಾಹಾರಿಗಳಿಗೆ/ ಸಸ್ಯಾಹಾರ ಪಥ್ಯದಲ್ಲಿರುವವರೆಗೆ ವಿಟಮಿನ್12 ಆಹಾರದ ಮೂಲಗಳು ಸೀಮಿತವಾಗಿರಬಹುದು. ಹಾಗಾಗಿ, ಪೂರಕಗಳನ್ನು ತೆಗೆದುಕೊಳ್ಳುವ ಮೂಲಕ ದೇಹಕ್ಕೆ ಸಾಕಷ್ಟು ವಿಟಮಿನ್ ಬಿ ಸೇರಿಸುವುದು ಬಹಳ ಮುಖ್ಯ. ವಿಟಮಿನ್ ಬಿ 12 ನೊಂದಿಗೆ ಕಾಳುಗಳು ಮತ್ತು ಧಾನ್ಯಗಳನ್ನು ಸಹ ಸೇವಿಸಬಹುದು.

ಪೂರಕಗಳು:
ವಿಟಮಿನ್ ಬಿ 12 ಪೂರಕಗಳು, ಮಾತ್ರೆಗಳು ಮತ್ತು ಇಂಟ್ರಾಮಸ್ಕುಲರ್ ಚುಚ್ಚುಮದ್ದಿನ ರೂಪದಲ್ಲಿ ಲಭ್ಯವಿದ್ದು, ಇದನ್ನು ಪ್ರತ್ಯೇಕವಾಗಿ ಅಥವಾ ಮಲ್ಟಿವಿಟಾಮಿನ್ ಅಥವಾ ಬಿ ಕಾಂಪ್ಲೆಕ್ಸ್ ಮಾತ್ರೆಯೊಂದಿಗೆ ತೆಗೆದುಕೊಳ್ಳಲಾಗುತ್ತದೆ.

ವಿಟಮಿನ್ B12ನ ಸೇವೆನೆಯಿಂದಾಗುವ ಆರೋಗ್ಯದ ಲಾಭಗಳು

1. ವಿಟಮಿನ್ ಬಿ 12, ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಕೆಂಪು ರಕ್ತ ಕಣಗಳ ರಚನೆಗೆ ಸಹಾಯ ಮಾಡುತ್ತದೆ. ಇದು ದೇಹದ ಎಲ್ಲಾ ಜೀವಕೋಶಗಳು ಮತ್ತು ಅಂಗಾಂಶಗಳಿಗೆ ಆಮ್ಲಜನಕವನ್ನು ಒಯ್ಯುತ್ತದೆ ಮತ್ತು ಸೆಲ್ಯುಲಾರ್ ಚಟುವಟಿಕೆ ಮತ್ತು ಚಯಾಪಚಯ ಕ್ರಿಯೆಗೆ ಸಹಾಯ ಮಾಡುತ್ತದೆ. ಬಿ 12 ನ ಕೊರತೆಯು ಮ್ಯಾಕ್ರೋಸೈಟ್ಗಳು ಎಂದು ಕರೆಯಲ್ಪಡುವ ರಕ್ತದಲ್ಲಿನ ಕೆಂಪು ರಕ್ತ ಕಣಗಳ ಅಸಹಜ ರೂಪಗಳಿಗೆ ಕಾರಣವಾಗುತ್ತದೆ. ವಿಟಮಿನ್ ಬಿ 12ನ ಕೊರತೆಯಿಂದ ಉಂಟಾಗುವ ಸ್ಥಿತಿಯನ್ನು ಮೆಗಾಲೊಬ್ಲಾಸ್ಟಿಕ್ ರಕ್ತಹೀನತೆ ಎನ್ನಲಾಗುತ್ತದೆ.

2. ಇದು ನರಗಳ ಮೇಲೆ ರಕ್ಷಣಾತ್ಮಕ ಲೇಪನವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಸಂವೇದನೆಗಳನ್ನು ರವಾನಿಸಲು ಪ್ರಚೋದನೆಗಳ ವಹನಕ್ಕೆ ಸಹಾಯ ಮಾಡುವ ಮೈಲಿನ್ ಪೊರೆಗಳ ರಚನೆಯಲ್ಲಿಯೂ ಸಹ ಸಹಾಯ ಮಾಡುತ್ತದೆ. ಆದ್ದ ರಿಂದ, ವಿಟಮಿನ್ ಬಿ 12 ನ ಕೊರತೆಯು ಸ್ನಾಯು ನೋವು, ಜುಮ್ಮೆನಿಸುವಿಕೆ, ಮರಗಟ್ಟುವಿಕೆ, ಇತ್ಯಾದಿ ನರರೋಗ ಮನೋವೈದ್ಯಕೀಯ ಲಕ್ಷಣಗಳಿಗೆ ಕಾರಣವಾಗುತ್ತದೆ.

3. ವಿಟಮಿನ್ ಬಿ, ದೇಹದ ಪ್ರತಿರಕ್ಷಣಾ ಕಾರ್ಯದಲ್ಲಿ ಸಹಾಯ ಮಾಡುತ್ತದೆ.

4. ಇದು ದೇಹದ ಜೀವಕೋಶಗಳಲ್ಲಿ ಡಿಎನ್‌ಎ ರಚನೆಗೆ ಸಹಕಾರಿ.

5. ವಿಟಮಿನ್ ಬಿ. 12 ರಕ್ತದಲ್ಲಿನ ಹೋಮೋಸಿಸ್ಟೈನ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ರುಜುವಾತು ಪಡಿಸಿವೆ. ಇದು ಹೃದ್ರೋಗ ಅಥವಾ ಇಸ್ಕೆಮಿಕ್ ಪಾರ್ಶವಾಯು ರೋಗಿಗಳಿಗೆ ಪ್ರಯೋಜನಕಾರಿ.

ವಿಟಮಿನ್ ಬಿ ಕೊರತೆಯಿಂದ ಉಂಟಾಗುವ ಪರಿಣಾಮಗಳು
ಅ. ಪೌಷ್ಠಿಕಾಂಶದ ಕೊರತೆ
ವಿಟಮಿನ್ ಬಿ 12 ಕೊರತೆಗೆ ಸಾಮಾನ್ಯ ಕಾರಣ ಕಡಿಮೆ ಆಹಾರ ಸೇವನೆ. ಸಾಮಾನ್ಯವಾಗಿ ಇದು ಸಸ್ಯಾಹಾರಿಗಳು ಅಥವಾ ಸಂಪೂರ್ಣವಾಗಿ ಸಸ್ಯಆಹಾರದಲ್ಲಿ ಮೇಲೆ ಅವಲಂಬಿತವಾಗಿರುವ ಜನರಲ್ಲಿ ಕಂಡುಬರುತ್ತದೆ.

ಆ. ವಿಟಮಿನ್ ಹೀರಿಕೊಳ್ಳುವ ಸಾಮರ್ಥ್ಯ ಕಡಿಮೆಯಿರುವುದು
ದೇಹವು ವಿಟಮಿನ್ ಬಿ 12 ಅನ್ನು ಸಾಕಷ್ಟು ಹೀರಿಕೊಳ್ಳಬೇಕಾದರೆ, ಉದರದಲ್ಲಿ ಆಂತರಿಕ ಅಂಶ (ಐಎಫ್) ನ ಅಗತ್ಯವಿರುತ್ತದೆ. ಆದರೆ, ಕೆಲವರಿಗೆ ಉದರದಲ್ಲಿ ಇದರ ಉತ್ಪಾದನೆಯಾಗದಂತಹ ಅಪರೂಪದ ಕಾಯಿಲೆಯಿರುತ್ತದೆ. ಇದರಿಂದಾಗಿ ಅವರಿಗೆ ಆಹಾರದ ಮೂಲಗಳು ಅಥವಾ ಪೂರಕಗಳಿಂದ ಅಗತ್ಯವಾದ ಪ್ರಮಾಣದ ವಿಟಮಿನ್ ಬಿ 12 ಅನ್ನು ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದನ್ನು ಪೆರ್ನಿಯಸ್ ರಕ್ತಹೀನತೆ ಎಂದು ಕರೆಯಲಾಗುತ್ತದೆ.
ಇನ್ನು ಕೆಲವರು ಕ್ರೋನ್ಸ್, ಉದರದ ಕಾಯಿಲೆ, ಇತ್ಯಾದಿ ಕರುಳಿನ ಮೇಲೆ ಪರಿಣಾಮ ಬೀರುವ ಸಮಸ್ಯೆಗಳನ್ನು ಹೊಂದಿರುತ್ತಾರೆ. ಇದು ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಬಿ 12 ಹೀರಿಕೊಳ್ಳುವುದನ್ನು ತಡೆಯುತ್ತದೆ.

ವಿಟಮಿನ್ ಬಿ 12 ಕೊರತೆಯುಳ್ಳ ವ್ಯಕ್ತಿಗಳಲ್ಲಿ ಈ ಕೆಳಗಿನ ಸಮಸ್ಯೆಗಳುಂಟಾಗಬಹುದು
1.ಮೆಗಾಬ್ಲಾಸ್ಟಿಕ್ ಅನಿಮಿಯಾದ ಲಕ್ಷಣಗಳಾದ ದೌರ್ಬಲ್ಯ, ಕಿರುತಲೆನೋವು, ಉಸಿರಾಟದ ತೊಂದರೆ, ಮಸುಕಾದ ಚರ್ಮ ಮತ್ತು ಕಣ್ಣುಗಳು. ಮೂಳೆ ಮಜ್ಜೆಯಲ್ಲಿ ಪ್ಯಾನ್ಸಿಟೊಪೆನಿಯಾ ಉತ್ಪಾದನೆಯಲ್ಲಿನ ನಿಗ್ರಹದಿಂದಾಗಿ ಬಿಳಿ ಮತ್ತು ಕೆಂಪು ರಕ್ತ ಕಣಗಳು ಮತ್ತು ಪ್ಲೇಟ್‌ಲೆಟ್ ಸಂಖ್ಯೆಯಲ್ಲಿ ಇಳಿಕೆಯಾಗಿರುವುದು ರಕ್ತ ಪರೀಕ್ಷೆಗಳಲ್ಲಿ ತಿಳಿದುಬರಬಹುದು
2.ಮೈಲೋಪತಿ, ನರರೋಗ, ಬುದ್ಧಿಮಾಂದ್ಯತೆ ಮತ್ತು ವಿರಳವಾಗಿ ಕಂಡುಬರುವ ಆಪ್ಟಿಕ್ (ನರದಿಂದ ಕಣ್ಣಿಗೆ) ನರ ಕ್ಷೀಣತೆಯನ್ನು ಒಳಗೊಂಡಿರುವ ನ್ಯೂರೋಸೈಕಿಯಾಟ್ರಿಕ್ ಸಮಸ್ಯೆಗಳು ಕಾಣಿಸಿಕೊಳ್ಳುವುದು
ಎಸ್‌ಎಸಿಡಿ- ಬೆನ್ನುಹುರಿಯ ಸಬಾಕ್ಯೂಟ್ ಕಂಬೈನ್ಡ್ ಡೀಜನರೇಷನ್ ಸ್ಥಿತಿಯು ಸಾಮಾನ್ಯವಾಗಿ ಸ್ಪಾಸ್ಟಿಕ್ ಪ್ಯಾರಾಪರೆಸಿಸ್, ಎಕ್ಸ್ಟೆನ್ಸರ್ ಪ್ಲಾಂಟರ್ ರೆಸ್ಪಾನ್ಸ್, ಹಾಗೂ ಸ್ಥಾನ ಮತ್ತು ಕಂಪನಗಳನ್ನು ಗ್ರಹಿಸುವ ಸಾಮರ್ಥ್ಯ ದುರ್ಬಲವಾಗಿರುವುದು ಮತ್ತು ನರರೋಗಕ್ಕೆ ಸಂಬಂಧಿಸಿದ ಇತರೆ ಸಮಸ್ಯೆಗಳನ್ನು ಒಳಗೊಂಡಿರುತ್ತದೆ. ಇದರಿಂದಾಗಿ ಸ್ಟಾಕಿಂಗ್ ರೀತಿಯ ಮರಗಟ್ಟುವಿಕೆ (ತುದಿಗಳಲ್ಲಿ ಮರಗಟ್ಟುವಿಕೆ), ಕಾಲುಗಳು ತೀವ್ರವಾಗಿ ಗಟ್ಟಿಯೆನಿಸುವುದು ಹಾಗೂ ಪಾದಗಳಲ್ಲಿ ಎಳೆತಗಳಂತಹ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಚಲನೆ ಮತ್ತು ಸಂವೇದನೆಯನ್ನು ನಿಯಂತ್ರಿಸುವ ನರಗಳು ಹಾನಿಗೊಳಗಾಗುವುದೇ ಇದಕ್ಕೆ ಮುಖ್ಯ ಕಾರಣ.
3. ಶಿಶುಗಳು ಮತ್ತು ಮಕ್ಕಳಲ್ಲಿ ಕುಂಠಿತ ಬೆಳವಣಿಗೆ, ಚಲನೆಯ ತೊಂದರೆಗಳು, ನಿಧಾನಗತಿಯ ಬೆಳವಣಿಗೆಗಳು ಮತ್ತು ಕಾಮಾಲೆಯ ಲಕ್ಷಣಗಳು ಕಂಡು ಬರಬಹುದು.
4. ಹೃದಯದ ಬಡಿತ ವೇಗವಾಗಿರುವುದು ಅಥವಾ ಟಾಕಿಕಾರ್ಡಿಯಾ ಸ್ಥಿತಿ
5. ಜ್ಞಾಪಕ ಶಕ್ತಿ ನಷ್ಟ, ಮನಸ್ಥಿತಿಯಲ್ಲಿ ಬದಲಾವಣೆ, ಖಿನ್ನತೆ, ಭಾವೋದ್ರೇಕಗೊಳ್ಳುವುದು
6. ಮಲಬದ್ಧತೆ ಅಥವಾ ಅತಿಸಾರದಂತಹ ಗ್ಯಾಸ್ಟ್ರೊ-ಕರುಳಿನ ಸಮಸ್ಯೆಗಳು
7.ಅಂಗ್ಯುಲರ್ ಸ್ಟೊಮಾಟಿಟಿಸ್ ಮತ್ತು ಚೀಲೋಸಿಸ್ (ಬಾಯಿಯ ಮೂಲೆಗಳಲ್ಲಿ ಉರಿಯೂತ)
8. ಮ್ಯಾಕ್ರೊಗ್ಲೋಸಿಯಾ (ಉಬ್ಬಿರುವ, ವಿಸ್ತರಿಸಿದ ನಾಲಿಗೆಯು ಹಲ್ಲುಗಳ ವಿರುದ್ಧದ ಸ್ಥಾನದಲ್ಲಿ ಒತ್ತುವುದು)
9. ಒಸಡುಗಳಲ್ಲಿ ರಕ್ತಸ್ರಾವ

ಕೋಬಾಲಮಿನ್ ಅತಿಯಾದ ಸೇವನೆ:
ವಿಟಮಿನ್ ಬಿ 12 ನ ಸೇವನೆಯಿಂದ ಯಾವುದೇ ಅಡ್ಡಪರಿಣಾಮಗಳುಂಟಾಗುವುದಿಲ್ಲ

ಇತರೆ ಔಷಧಿಗಳೊಂದಿಗೆ ವಿಟಮನ್ ಬಿ 12 ಸೇವನೆ
ಈ ಕೆಳಗಿನ ನಮೂದಿಸಿರುವ ಕೆಲವು ಔಷಧಿಗಳ ಸೇವನೆಯು ಕರುಳಿನಿಂದ ವಿಟಮನ್ ಬಿ 12 ಹೀರಿಕೊಳ್ಳುವುದನ್ನು ಕಡಿಮೆ ಮಾಡುತ್ತದೆ.
ಅ. ಕ್ಲೋರಂಫೆನಿಕಲ್ ನಂತಹ ಆಂಟಿಬಯೋಟಿಕ್ಸ್
ಆ. ಪೆಪ್ಟಿಕ್ ಹುಣ್ಣುಗಳಿಗೆ ಚಿಕಿತ್ಸೆ ನೀಡಲು ಬಳಸುವ ರಾನಿಟಿಡಿನ್ ನಂತಹ ಆಂಟಾಸಿಡ್ಗಳು
ಇ. ಮಧುಮೇಹ ಚಿಕಿತ್ಸೆಯಲ್ಲಿ ಬಳಸುವ ಮೆಟ್ಫಾರ್ಮಿನ್ ಔಷಧಿ

ರೋಗನಿರ್ಣಯ
1. ದೇಹದಲ್ಲಿ ವಿಟಮಿನ್ ಬಿ 12 ಕೊರತೆಯನ್ನು ತಿಳಿಯಲು ಸೀರಮ್ ಅಥವಾ ರಕ್ತದ ಮಟ್ಟವನ್ನು ಪರೀಕ್ಷಿಸಲಾಗುತ್ತದೆ. ಇದಕ್ಕೆ ಅನುಗುಣವಾಗಿ, ಬಿ 12 ಕೊರತೆಯಿದ್ದಲ್ಲಿ ಸೀರಮ್ ಹೋಮೋಸಿಸ್ಟೈನ್ ಮತ್ತು ಸೀರಮ್ ಲ್ಯಾಕ್ಟೇಟ್ ಡಿಹೈಡ್ರೋಜಿನೇಸ್ ಮಟ್ಟಗಳು ಸಹ ಹೆಚ್ಚು ಎಂದು ತಿಳಿದುಬಂದಿದೆ. ಬಾಹ್ಯ ರಕ್ತ ಪರೀಕ್ಷೆಯು (ಅಂದರೆ ಸೂಕ್ಷ್ಮದರ್ಶಕದ ಅಡಿಯಲ್ಲಿರುವ ಸ್ಲೈಡ್‌ನಲ್ಲಿ ರಕ್ತವನ್ನು ನೋಡುವುದು) ಮೆಗಾಲೊಬ್ಲಾಸ್ಟಿಕ್ ರಕ್ತಹೀನತೆಯನ್ನು ಸೂಚಿಸುವ ಮ್ಯಾಕ್ರೋಸೈಟ್ಗಳು ಎಂದು ಕರೆಯಲ್ಪಡುವ ದೊಡ್ಡ, ಕೆಂಪು ರಕ್ತ ಕಣಗಳನ್ನು ತೋರಿಸುತ್ತದೆ.
2.ಟಿ 2 ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (ಎಂಆರ್ಐ), ಪರೀಕ್ಷೆಯು ಎಸ್‌ಎಸಿಡಿಯನ್ನು ಸೂಚಿಸುವ ಬೆನ್ನುಹುರಿಯ ಹಿಂಭಾಗದ ಮತ್ತು ಪಾರ್ಶ್ವದ ಗಾಯಗಳನ್ನು ಸೂಕ್ಷ್ಮವಾಗಿ ತೋರಿಸುತ್ತದೆ.

ಚಿಕಿತ್ಸೆ

ಪೌಷ್ಠಿಕಾಂಶದ ಕೊರತೆಯಿರುವ ರೋಗಿಗಳಿಗೆ ವಿಟಮಿನ್ ಬಿ 12 ಪೂರಕಗಳನ್ನು ನೀಡಬಹುದು. ಅಂದರೆ, ಆಹಾರದ ಮೂಲಗಳ ಮೂಲಕ ಸಾಕಷ್ಟು ವಿಟಮಿನ್ ಸೇವಿಸದವರು, ತೀವ್ರವಾದ ಕೊರತೆಯುಳ್ಳವರು ಅಥವಾ ಕರುಳಿನ ಒಳಪದರದಿಂದ ವಿಟಮಿನ್ ಅನ್ನು ಹೀರಿಕೊಳ್ಳುವಲ್ಲಿ ತೊಂದರೆ ಇರುವವರು (ಮಾಲಾಬ್ಸರ್ಪ್ಷನ್, ಕ್ರೋನ್ಸ್ ಕಾಯಿಲೆ, ಇತ್ಯಾದಿ) ವಿಟಮಿನ್‌ನ ಇಂಟ್ರಾಮಸ್ಕುಲರ್ ಇಂಜೆಕ್ಷನ್ ಮೂಲಕ ಪೂರಕಗಳನ್ನು ತೆಗೆದುಕೊಳ್ಳಬೇಕಾಗಬಹುದು ಆದರೆ, ದೇಹವು ಇದನ್ನು ಬಹಳ ಕಾಲ ಸಂಗ್ರಹಿಸಿಡುವುದಿಲ್ಲ., ಆದ್ದರಿಂದ, ಭವಿಷ್ಯದಲ್ಲಿ ದೇಹದಲ್ಲಿ ಇದರ ಕೊರತೆಯನ್ನು ತಪ್ಪಿಸಲು ರೋಗಿಗಳು ದೇಹದಲ್ಲಿ ವಿಟಮಿನ್ ಬಿ 12 ಮಟ್ಟವನ್ನು ಆಗಾಗ್ಗೆ ಪರೀಕ್ಚಿಸಿಕೊಳ್ಳಬೇಕಾಗುತ್ತದೆ.
ಮೇಲಿನ ಮಾಹಿತಿಯು ಅರಿವು ಮತ್ತು ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರವೇ ಹೊರತು ಯಾವುದೇ ಸ್ಥಿತಿಯ ರೋಗನಿರ್ಣಯ ಅಥವಾ ಚಿಕಿತ್ಸೆಗೆ ಬಳಸಲಾಗುವುದಿಲ್ಲ. ಯಾವುದೇ ಸಂದೇಹ ಅಥವಾ ಪ್ರಶ್ನೆಗಳಿದ್ದಲ್ಲಿ ದಯವಿಟ್ಟು ವೈದ್ಯರನ್ನು ಸಂಪರ್ಕಿಸಿ

ಉಲ್ಲೇಖಗಳು
1.https://ods.od.nih.gov/factsheets/VitaminB12-Consumer/
2.https://www.webmd.com/diet/vitamin-b12-deficiency-symptoms-causes#1-4
3.https://www.ncbi.nlm.nih.gov/pmc/articles/PMC4575440/