Dr C P Ravikumar

ಪರವಾನಗಿಯಿರುವ v/s ಪರವಾನಗಿ ಇಲ್ಲದ ಔಷಧಿಗಳು ಪೋಷಕರ ಅಥವಾ ರೋಗಿಗಳ ಮಾಹಿತಿ ಕೈಪಿಡಿ ನೀವು ಈಗಾಗಲೇ ಜೆನೆರಿಕ್ v/s ಬ್ರಾಂಡೆಡ್ ಔಷಧಿಗಳನ್ನು ಕುರಿತ ನಮ್ಮ ಕೈಪಿಡಿಯನ್ನು ಓದಿದ್ದೀರಿ ಎಂದು ಭಾವಿಸುತ್ತೇವೆ. ಈ ಕೈಪಿಡಿಯು ಔಷಧಿ ಪ್ರಕ್ರಿಯೆಯು ಪರಿಕಲ್ಪನೆ ಯಿಂದ ಶುರುವಾಗಿ ನಿಮ್ಮ ಕೈ ಸೇರುವಲ್ಲಿ ಒಳಗೊಂಡಿರುವ ಹಂತಗಳ ಬಗ್ಗೆ ನಿಮಗೆ ಸರಿಯಾದ ಮಾಹಿತಿಯನ್ನು ನೀಡುತ್ತದೆ. ಔಷಧಿಗಳ ಆವಿಷ್ಕಾರವು ದಶಕಗಳಷ್ಟು ಸಮಯ ಮತ್ತು ತುಂಬಾ ಹಣವನ್ನು ಬೇಡುವ ಬಹಳ ದೀರ್ಘವಾದ ಪ್ರಕ್ರಿಯೆ. ಔಷಧಿಯು ಅಂತಿಮವಾಗಿ ಪ್ರಾಯೋಗಿಕ ಪರೀಕ್ಷೆಯ ಹಂತದಲ್ಲಿ ಪರಿಣಾಮಕಾರಿಯಾಗಿಯೆಂದು ಕಂಡುಬಂದಲ್ಲಿ ಪುರಾವೆಗಳನ್ನು ಆಧರಿಸಿ ಪರವಾನಗಿ ಪ್ರಾಧಿಕಾರವು ರೋಗಕ್ಕೆ ಚಿಕಿತ್ಸೆ ನೀಡಲು ಪರವಾನಗಿ ನೀಡಬಹುದು. ಇದರರ್ಥ, ರೋಗದ ಚಿಕಿತ್ಸೆಗೆ ಔಷಧವು ಅನುಮತಿ ಪಡೆದು ಅರ್ಹವಾಗಿದೆ ಎಂದು. ಪರವಾನಗಿಯನ್ನು ಅನೇಕ ನಿಯಮಗಳು ಮತ್ತು ಷರತ್ತುಗಳ ಮೇಲೆ ನೀಡಲಾಗುತ್ತದೆ (Terms and Conditions -T & C) (ಉದಾಹರಣೆಗೆ, ಔಷಧಿಯನ್ನು ಯಾವ ದೇಶದಲ್ಲಿ ಮಾರಾಟ ಮಾಡಬಹುದು, ಯಾವ ವಯಸ್ಸಿನವರು ಈ ಔಷಧಿಯನ್ನು ಬಳಸಬಹುದು, ಶಿಫಾರಸು ಮಾಡಲಾದ ಡೋಸೇಜ್ (ಔಷಧಿಯ ಪ್ರಮಾಣ), (ಟ್ಯಾಬ್ಲೆಟ್ ಅಥವಾ ದ್ರವ ರೂಪ ಅಥವಾ ಕ್ಯಾಪ್ಸುಲ್ (ಸಂರಕ್ಷಕಗಳು ಇತ್ಯಾದಿಗಳನ್ನು ಒಳಗೊಂಡಂತೆ ಯಾವ್ಯಾವ ಅಂಶಗಳನ್ನು ಬಳಸಲಾಗಿದೆ ಇತರೆ). ಈ ನಿಯಮಗಳು ಮತ್ತು ಷರತ್ತುಗಳನ್ನು ಗಣನೆಗೆ ತೆಗೆದುಕೊಳ್ಳದೆ ಔಷಧಿಯನ್ನು ಸೂಚಿಸಿದಾಗ, ಅದನ್ನು ಪರವಾನಗಿ ಪಡೆಯದ ಅಥವಾ ಆಫ್ ಲೈಸೆನ್ಸ್ ಔಷಧ/ ಪ್ರಿಸ್ಕ್ರಿಪ್ಷನ್ ಎಂದು ಕರೆಯಲಾಗುತ್ತದೆ ಈ ಪರಿಸ್ಥಿತಿ ಉಂಟಾಗುವ ಕೆಲವು ಸಾಮಾನ್ಯ ಸನ್ನಿವೇಶಗಳು ೧. ಪೀಡಿಯಾಟ್ರಿಕ್/ ಮಕ್ಕಳು: ಸಾಮಾನ್ಯವಾಗಿ, ಹೆಚ್ಚಿನ ಔಷಧಿಗಳನ್ನು ವಯಸ್ಕರಲ್ಲಿ ಮೇಲೆ ಪ್ರಾಯೋಗಿಕ ಪರೀಕ್ಷೆ ನಡೆಸಿ ತಯಾರಿಸಲಾಗುತ್ತದೆ. ಹಾಗೂ ಹಲವು ವರ್ಷಗಳ ಬಳಕೆಯ ನಂತರ ಮತ್ತು ಅದರ ಫಲಿತಾಂಶದ (ಸಕಾರಾತ್ಮಕ ಪರಿಣಾಮ) ಆಧಾರದ ಮೇಲೆ, ಇದನ್ನು ಮಕ್ಕಳಲ್ಲಿ ಬಳಸಲು ಅನುಮತಿ ನೀಡಲಾಗುತ್ತದೆ. ಈ ಆವಿಷ್ಕಾರ ಹಾಗೂ ಪ್ರಾಯೋಗಿಕ ಪರೀಕ್ಷೆಗಳು ಸಮಾಜದಲ್ಲಿ ರೋಗವು ಎಷ್ಟು ಸಾಮಾನ್ಯವಾಗಿದೆ ಮತ್ತು ಔಷದಿಯ ಲಭ್ಯತೆಯ ಸುಲಭತೆಯನ್ನು ಅವಲಂಬಿಸಿ ಹಲವು ವರ್ಷಗಳು ಅಥವಾ ದಶಕಗಳನ್ನು ತೆಗೆದುಕೊಳ್ಳುತ್ತದೆ. ಇದು ಸ್ವಯಂಚಾಲಿತ ಪ್ರಕ್ರಿಯೆಯಲ್ಲ, ಮಕ್ಕಳ ಔಷಧಿಗೆ ಪರವಾನಗಿ ಪಡೆಯಲು ಬಯಸುವ ಕಂಪನಿಯು ಸಾಕಷ್ಟು ಹಣ ಮತ್ತು ಸಮಯವನ್ನು ವ್ಯಯಿಸಬೇಕಾಗುತ್ತದೆ. ಆದ್ದರಿಂದ, ಎಲ್ಲರೂ ಈ ಕಾರ್ಯಕ್ಕೆ ಕೈ ಹಾಕದಿರಬಹುದು! ಕೆಲವೊಮ್ಮೆ, ವೈದ್ಯರು, ಪರವಾನಗಿಗಾಗಿ ಕಾಯದೆ ಔಷಧವನ್ನು ವಯಸ್ಕರ ಮೇಲೆ ಪ್ರಯೋಗಿಸಿ ಅವರ ಅನುಭವದ ಆಧಾರದ ಅದನ್ನು ಬಳಸಬೇಕಾಗಬಹುದು. ಇದು ಸಾಮಾನ್ಯ ಪದ್ಧತಿ ಮತ್ತು ವಿಶೇಷವೇನೆಂದರೆ, ಮಕ್ಕಳಿಗೆಂದು ಕಂಡು ಹಿಡಿಯಲಾಗಿರುವ ಹೆಚ್ಚಿನ ಔಷಧಿಗಳು ಪರವಾನಗಿ ಹೊಂದಿಲ್ಲ ಅಥವಾ ಮಕ್ಕಳ ಮೇಲೆ ಬಳಸಲು ಪರವಾನಗಿ ಪಡೆದಿರುವುದಿಲ್ಲ. ಇದು ಮಕ್ಕಳ ಮೇಲೆ ನಡೆಸಲಾಗುವ ಒಂದು ಪ್ರಾಯೋಗಿಕ ಸವಲಾಗಿದೆ. ಮತ್ತು ಪರವಾನಗಿ ಪಡೆಯದ ಔಷಧಿಗಳನ್ನು ಸಹ ಶಿಫಾರಸು ಮಾಡಲು ಆರೋಗ್ಯ ಅಧಿಕಾರಿಗಳು ತಮ್ಮ ನಿರ್ದೇಶನಗಳಲ್ಲಿ ಅನುಮತಿ ನೀಡಿದ್ದಾರೆ. 2009 ರಲ್ಲಿ ಟಾಮ್ಲಿನ್ ಎಸ್ ಮತ್ತು ಇತರರು ನಡೆಸಿದ ಅಧ್ಯಯನ ವರದಿಯ ಪ್ರಕಾರ, ಮಕ್ಕಳಗಾಗಿ ಬಳಸುವ ಸುಮಾರು 50% ಔಷಧಿಗಳನ್ನು ಆ ವಯಸ್ಸಿನವರ ಮೇಲೆ ಅಧ್ಯಯನ ನಡೆಸಿ ಪ್ರಯೋಗ ಮಾಡಲಾಗಿಲ್ಲ. ಅಂದರೆ, ಆ ಔಷಧಿಗಳನ್ನು ಮಕ್ಕಳಿಗೆ ನೀಡಲು ಯಾವುದೇ ಪರವಾನಗಿ ಪಡೆದಿಲ್ಲ. 2007 ರಲ್ಲಿ ಯುರೋಪಿಯನ್ ಯೂನಿಯನ್ ಮತ್ತು ಯುನೈಟೆಡ್ ಕಿಂಗ್‌ಡಮ್ ದೇಶಗಳು ಕ್ಲಿನಿಕಲ್ ಪ್ರಯೋಗಗಳಲ್ಲಿ ಮಕ್ಕಳನ್ನು ಒಳಗೊಂಡು ನಂತರದಲ್ಲಿ ಔಷಧಿಗಳ ಬಳಕೆಗೆ ಪರವಾನಗಿ ಪಡೆಯಲು ಫಾರ್ಮಾ ಕಂಪನಿಗಳಿಗೆ ನಿರ್ದೇಶನ ನೀಡಿತು. ನಿಯಮಗಳು ಮತ್ತು ನಿಬಂಧನೆಗಳನ್ನು ಬದಿಗಿಟ್ಟು ನೋಡಿದರೆ, ನಮ್ಮ ಮಕ್ಕಳು ಹೊಸ ಔಷಧದ ಪ್ರಯೋಗದಲ್ಲಿ ಪಾಲ್ಗೊಳ್ಳಲು ನಮ್ಮಲ್ಲಿ ಎಷ್ಟು ಮಂದಿ ಸಮ್ಮತಿಸುತ್ತೇವೆ? ಹೆಚ್ಚಿನ ಬಾರಿ ನಮ್ಮ ಉತ್ತರವು ಇಲ್ಲ, ಬೇಡಎಂಬುದೇ ಆಗಿರುತ್ತದೆ. ಪ್ರಸ್ತುತ ಪರಿಸ್ಥಿತಿ ಬದಲಾಗಲು ವರ್ಷಗಳೇ ತೆಗೆದುಕೊಳ್ಳುತ್ತದೆ. ೧. ಪರವಾನಗಿ ಪಡೆಯದ ದೇಶಗಳಲ್ಲಿ ಬಳಸುವ ಔಷಧಿಗಳು: ನರವಿಜ್ಞಾನ ಕ್ಷೇತ್ರದಲ್ಲೂ ನೀಡಬಹುದಾದ ಸಾಮಾನ್ಯ ಉದಾಹರಣೆಯೆಂದರೆ, ವಿಗಾಬಟ್ರಿನ್ (ಸಬ್ರಿಲ್). ಈ ಔಷಧವನ್ನು ಭಾರತದಲ್ಲಿ ಬಳಸಲು ಪರವಾನಗಿ ಪಡೆದಿಲ್ಲ ಅಥವಾ ಈ ಔಷಧವು ಇಲ್ಲಿ ತಯಾರಿಸಲ್ಪಟ್ಟಿಲ್ಲ, ಆದರೂ ಇದು ನಮ್ಮ ದೇಶಕ್ಕೆ ಅತ್ಯಗತ್ಯ ಔಷಧವಾಗಿದೆ. ೨. ನಿರ್ದಿಷ್ಟ ಕಾಯಿಲೆಯ ಚಿಕಿತ್ಸೆಗಾಗಿ ಪರವಾನಗಿ ಪಡೆದ ಔಷಧಿಯು ವರ್ಷಗಳು ಉರುಳಿದಂತೆ ಮತ್ತೊಂದು ಆ ಕಾಯಿಲೆಗೆ ಚಿಕಿತ್ಸೆ ನೀಡಲು ಅಥವಾ ಗುಣಪಡಿಸಲು ಪ್ರಯೋಜನಕಾರಿ ಎಂದು ಕಂಡು ಬಂದ ಸನ್ನಿವೇಶಗಳಲ್ಲಿ ಫಾರ್ಮಾ ಕಂಪನಿಯು ಕಾನೂನು ಪ್ರಕ್ರಿಯೆಯ ಮೂಲಕ ಹೋಗಲು ಮತ್ತು ಪರವಾನಗಿ ಪಡೆಯಲು ಮುಂದಾಗುವ ಮೊದಲು, ವೈದ್ಯರು ಈ ಔಷಧಿಯನ್ನು ರೋಗಿಗೆ ಶಿಫಾರಸು ಮಾಡಬೇಕಾಗಬಹುದು. ಇದನ್ನು “ಡ್ರಗ್ ರೀ-ಪರ್ಪೋಸಿಂಗ್” ಎಂದು ಕರೆಯಲಾಗುತ್ತದೆ. ಉದಾಹರಣೆಗೆ, ಅಪಸ್ಮಾರ ಚಿಕಿತ್ಸೆಗಾಗಿ ಗ್ಯಾಬಪೆಂಟಿನ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಆದರೆ, ಈ ಔಷಧಿಯು ಪರಿಣಾಮಕಾರಿ ನೋವು ನಿವಾರಕ ಎಂದು ಸಹ ಕಂಡುಬಂದಿದೆ. ಹಾಗಾಗಿ, ಇಂದು, ಗ್ಯಾಬೆನ್ಟಿನ್ ಅನ್ನು ಅಪಸ್ಮಾರ ಚಿಕಿತ್ಸೆಗಿಂತ ಹೆಚ್ಚಾಗಿ ನೋವು ನಿವಾರಕ ಔಷಧವಾಗಿ ಬಳಸಲಾಗುತ್ತದೆ.

ಸಂಪೂರ್ಣ ಮಾಹಿತಿಗಾಗಿ ಉತ್ಪಾದಕರ ಮಾಹಿತಿ ಕೈಪಿಡಿಯನ್ನು ನೋಡಿ. ಉಲ್ಲೇಖಗಳು: 1. ಐಎಪಿ ಡ್ರಗ್ ಫಾರ್ಮುಲರಿ ವೆಬ್ ಅಪ್‌ಡೇಟ್ 2020 (3) ಆವೃತ್ತಿ 58, https://www.iapdrugformulary.com/Home 2. ಗ್ರಾಹಕ ಔಷಧಿಗಳ ಮಾಹಿತಿ (ಸಿಎಮ್ಐ), https://www.tga.gov.au/consumer-medicines-information-cmi 3. ಬ್ರಿಟಿಷ್ ಮಕ್ಕಳ ರಾಷ್ಟ್ರೀಯ ಫಾರ್ಮುಲರಿ (ಬಿಎನ್‌ಎಫ್‌ಸಿ) 4. ಅಮೆರಿಕಾನ್ ಆಹಾರ ಮತ್ತು ಔಷಧಿಗಳ ಆಡಳಿತ, ಯುಎಸ್ಎ; https://www.fda.gov
Picture of Dr C P Ravikumar

Dr C P Ravikumar

CONSULTANT – PEDIATRIC NEUROLOGY
Aster CMI Hospital, Bangalore