ಸೆಳವಿನ ನಿರ್ವಹಣಾ ಸಾಧನಗಳಲ್ಲಿ ಸುಧಾರಣೆಗಳು/ ಪ್ರಗತಿಗಳು
ಸಾಮಾನ್ಯವಾಗಿ ನಮ್ಮ ಪ್ರೀತಿಪಾತ್ರರಿಗೆ ಸೆಳೆವಿನ ಸಮಸ್ಯೆಯಿದೆ ಎಂಬುದು ತಿಳಿದುಬಂದಾಗ ನಾವು ಸಹಜವಾಗಿ ಆತಂಕಗೊಳ್ಳುತ್ತೇವೆ. ಅದರಲ್ಲೂ ಮಕ್ಕಳಲ್ಲಿ ಈ ಸಮಸ್ಯೆಯಿದ್ದಲ್ಲಿ, ಅದು ಮತ್ತಷ್ಟು ನೋವನ್ನುಂಟು ಮಾಡುವುದಂತು ನಿಜ. ಆದರೆ, ಇಂತಹ ಕಠಿಣ ಸಂದರ್ಭಗಳಲ್ಲಿಯೇ ಸಮಸ್ಯೆಯನ್ನು ನಿರ್ವಹಿಸಲು ಸಂಶೋಧನೆಗಳು, ಸ್ಕ್ಯಾನ್ ಗಳು ಮತ್ತು ಇತರೆ ಮಾರ್ಗಗಳು ಸಹ ಇವೆಯೆಂದು ನಮಗೆ ತೋರುತ್ತದೆ. ಅವುಗಳಲ್ಲಿ ಮುಖ್ಯವಾದುದು ತಂತ್ರಜ್ಞಾನದ ಕೊಡುಗೆ. ತಂತ್ರಜ್ಞಾನವು ವೇಗವಾಗಿ ಪ್ರಗತಿ ಹೊಂದುತ್ತಿದ್ದು, ಸೆಳೆವನ್ನು ನಿಯಂತ್ರಿಸುವ ಮಾರ್ಗಗಳು ಸಹ ಸುಧಾರಣೆಗೊಳಪಡುತ್ತಲೇ ಇರುತ್ತವೆ. ಈ ಅಂಶವು ರೋಗಿಗಳು ಮತ್ತು ಅವರ ಪೋಷಕರಿಗೆ ಒಂದು ಮಟ್ಟಿಗಿನ ನೆಮ್ಮದಿಯನ್ನು ನೀಡಿದೆ.
1. ಸ್ಮಾರ್ಟ್ ಫೋನ್ ಅಪ್ಲಿಕೇಶನ್ ಗಳು
– ಪ್ರಸ್ತುತ ಸೆಳೆವಿನ ಸಮಸ್ಯೆಯುಳ್ಳ ವ್ಯಕ್ತಿಯ ದೈನಂದಿನ ನಿರ್ವಹಣೆಗೆ ಹಲವು ಮೊಬೈಲ್ ಅಪ್ಲಿಕೇಶನ್ ಗಳು ಲಭ್ಯವಿದ್ದು, ಕೆಲವು ಅಪ್ಲಿಕೇಶನ್ ಗಳು ವಿದ್ಯುನ್ಮಾನದ (Electronic) ದಿನಚರಿಯಂತೆ ಕಾರ್ಯನಿರ್ವಹಿಸುತ್ತದೆ. ಎಪಿಲೆಪ್ಸಿ ಜರ್ನಲ್ (Epilepsy journal) ವು ಒಂದು ಪ್ರಸಿದ್ಧ ಅಪ್ಲಿಕೇಶನಾಗಿದ್ದು, ಇದು ದಿನವೊಂದರಲ್ಲಿ ಸೆಳೆವು ಎಷ್ಟು ಬಾರಿ ಉಂಟಾಯಿತು?, ಅದರ ಅವಧಿ, ಪ್ರವೃತ್ತಿ ಮತ್ತು ಸೆಳೆವನ್ನು ಪ್ರಚೋದಿಸುವ ಸಂಭವನೀಯ ಅಂಶಗಳನ್ನು ಗಮನಿಸಲು ನೆರವಾಗುತ್ತದೆ. ಸೆಳೆವಿನ ನಿಯಂತ್ರಣಕ್ಕಾಗಿ ಸೇವಿಸುವ ಔಷಧಿಗಳು, ಸಂಬಂಧಿಸಿದ ಅಪಾಯಕಾರಿ ಅಂಶಗಳನ್ನು ದಿನಚರಿಯಲ್ಲಿ ನಿರ್ವಹಿಸುವುದು ಸಹ ವಿದ್ಯುನ್ಮಾನ ರೂಪದಲ್ಲಿ ದಾಖಲೆಯನ್ನು ಕಾಪಿಡಲು ಸಹಾಯ ಮಾಡುತ್ತದೆ. ಅಗತ್ಯವಿದ್ದಲ್ಲಿ, ಇದನ್ನು ವೈದ್ಯರೊಂದಿಗೂ ಸಹ ಹಂಚಿಕೊಳ್ಳಬಹುದು. ,
ಸೀಜ್ ಅಲಾರ್ಮ್ ಎಂಬುದು ಆಪಲ್ ವಾಚ್ ಮತ್ತು ಆಪಲ್ ಸ್ಮಾರ‍್ಟ್ ಪೋನ ಗೆ ಲಿಂಕ್ ಆಗಿರುವ ಅಪ್ಲಿಕೇಶನ್ ಆಗಿದ್ದು, ಇದು ರೋಗಿಗಳ ಸಾಮಾನ್ಯ ವಿವರಗಳು ಮತ್ತು ಆರೋಗ್ಯ ಸ್ಥಿತಿಗಳು ಸೇರಿದಂತೆ ವ್ಯಕ್ತಿಯಲ್ಲಿ ಸೆಳೆವಿನ ಲಕ್ಷಣಗಳಿದ್ದಲ್ಲಿ, ವಾಚ್ನಲ್ಲಿನ ಚಲನೆ ಮತ್ತು ಹೃದಯ ಬಡಿತದ ಸೌಲಭ್ಯಗಳನ್ನು ಬಳಸಿಕೊಂಡು, ಅದರ ಮಾಹಿತಿಯನ್ನು ಜಿಪಿಎಸ್ ಲೊಕೇಷನ್ ಸಮೇತ ಮೊದಲೇ ದಾಖಲಿತ ಸಂಪರ್ಕಗಳಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸುತ್ತದೆ.
2. ರಿಮೋಟ್ ಮಾನಿಟರಿಂಗ್ಗಾಗಿ ಧರಿಸಬಹುದಾದ ಸಾಧನಗಳು
ಆಪಲ್ ವಾಚ್ ಮತ್ತು ಸಾಫ್ಟ್‌ವೇರ್ ಅಪ್ಲಿಕೇಷನೆ್ ಗಳಿಗೆ ಹಚ್ಚು ನಿರ್ದಿಷ್ಟವಾದ ಪರ್ಯಾಯವೆಂದರೆ, ಸೆಳೆವಿಗೆ ಕಾರಣವಾಗಬಹುದಾದ ನರವೈಜ್ಞಾನಿಕ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ವ್ಯಕ್ತಿಗತವಾಗಿ ಸಾಧನಗಳನ್ನು ತಯಾರಿಸುವುದು. ಗಡಿಯಾರ ಅಥವಾ ಕಂಕಣ ವಿನ್ಯಾಸದಲ್ಲಿ ಮಾಡಲಾಗಿರುವ ಮತ್ತು ಮತ್ತು ತೊಡಲು ಹೆಚ್ಚು ಅನುಕೂಲಕರವಾಗಿರುವ ಗಡಿಯಾರವನ್ನು ಸೆಳೆವಿನ ಲಕ್ಷಣಗಳುಳ್ಳ 6 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳ ಸಕ್ರಿಯ ಮೇಲ್ವಿಚಾರಣೆಗಾಗಿ ಬಳಸಲು ಅನುಮೋದಿಸಲಾಗಿದೆ. ಎಪಿ ವಾಚ್ ಅನ್ನು ಯುಎಸ್ಎಯ ಜಾನ್ಸ್ ಹಾಪ್ಕಿನ್ಸ್ ಇನ್ಸ್ಟಿಟ್ಯೂಟ್ನಲ್ಲಿ ಪ್ರಯೋಗಗಳಲ್ಲಿ ಬಳಸಲಾಗಿದೆ ಮತ್ತು ಸ್ಮಾರ್ಟ್ ಮಾನಿಟರ್ ವಾಚ್ ಸೆಳವಿನ ಸಮಸ್ಯೆಯುಳ್ಳ ಮಕ್ಕಳ ಪೋಷಕರು/ ವ್ಯಕ್ತಿಗಳ ಆರೈಕೆದಾರರಿಗೆ ಉತ್ತಮ ಸಾಧನವಾಗಿದೆ.
3. ಸೆಳವಿನ ಪತ್ತೆಗಾಗಿ ಹಾಸಿಗೆ ಸಾಧನಗಳು
ಇವು ಸಂವೇದನಾಶೀಲ ಗುಣವನ್ನು ಹೊಂದಿದ್ದು, ಅಳವಡಿಸಿಕೊಳ್ಳಲು ಸುಲಭವಾಗಿರುತ್ತದೆ. ರೋಗಿಗಳ ಹೃದಯ ಬಡಿತ ಮತ್ತು ಧಿಢೀರ‍್ ಟಾಗುವ ಸೆಳೆವನ್ನು ಪತ್ತೆಹಚ್ಚಲು ಮತ್ತು ಪುನರಾವರ್ತಿತ ಚಲನೆಯನ್ನು ನಿರ್ವಹಿಸಲು ಎಮ್‌ಫಿಟ್ ಮ್ಯಾಟ್ರೆಸ್ ಮೂವ್ಮೆಂಟ್ ಮಾನಿಟರ್‌ನಂತಹ ಪ್ಯಾಡ್‌ಗಳನ್ನು ಹಾಸಿಗೆಯ ಕೆಳಗೆ ಇಡಬಹುದು ಮತ್ತು ಸೆಳೆವಿನ ಸಮಸ್ಯೆಯುಳ್ಳ ಮಕ್ಕಳ ಪೋಷಕರು ಅಥವಾ ಆರೈಕೆದಾದರಿಗೆ ಎಚ್ಚರಿಕೆ ಶಬ್ದಗಳನ್ನು ಕಳುಹಿಸುವುದರಿಂದ ಅವರು ಸಾಧ್ಯವಾದಷ್ಟು ಬೇಗನೇ ಸ್ಥಳಕ್ಕೆ ಧಾವಿಸಿ ಸಹಾಯ ಮಾಡಲು ಅನುಕೂಲ.
4. ಉಸಿರುಗಟ್ಟುವಿಕೆ ವಿರೋಧಿ ದಿಂಬುಗಳು
ಈ ದಿಂಬುಗಳನ್ನು ನಿದ್ರಾ ಸಮಯದಲ್ಲಿ ಉಂಟಾಗಬಹುದಾದ ಮಾರಣಾಂತಿಕ ಉಸಿರುಗಟ್ಟಿಸುವಿಕೆಯ ಸಾಧ್ಯತೆಯನ್ನು ಕಡಿಮೆ ಮಾಡಲು ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ,. ಆದರೆ, ದಿನದ ೨೪ ಗಂಟೆಯೂ ಇದರ ನಿರ್ವಹಣೆ ಸಾಧ್ಯವಾಗುವುದಿಲ್ಲ. ಸ್ಲೀಪ್-ಸೇಫ್ ದಿಂಬುಗಳು ಇಂತಹ ಒಂದು ಉತ್ಪನ್ನವಾಗಿದ್ದು, ಇದು ರೋಗಿಗಳು ಮತ್ತು ಅವರ ಆರೈಕೆದಾರರ ಭಯವನ್ನು ನಿವಾರಿಸುತ್ತದೆ ಮತ್ತು ರಾತ್ರಿಗಳಲ್ಲಿ ಚೆನ್ನಾಗಿ ನಿದ್ರಿಸಲು ಸಹಾಯ ಮಾಡುತ್ತವೆ. ಈ ದಿಂಬುಗಳನ್ನು ಸೂಕ್ಷ್ಮ ರಂಧ್ರಗಳುಳ್ಳ ಸಾಮಗ್ರಿಯಿಂದ ತಯಾರಿಸಲಾಗಿದ್ದು, ಇತರೆ ದಿಂಬುಗಳಿಗೆ ಹೋಲಿಸಿದರೆ ಇವು ಸರಾಗವಾಗಿ ಉಸಿರಾಡಲು ಹೆಚ್ಚು ಅನುಕೂಲಕರವಾಗಿವೆ.
೫. ಸೆಳೆವಿನ ಎಚ್ಚರಿಕೆ ನೀಡುವ ಕ್ಯಾಮೆರಾಗಳು
ಸೆಮಿ ಸ್ಮಾಟ್ ð ಎಂಬುದು ಸ್ಮಾಟ್ ಪೋನ್ ಗಳ ಆಪ್ ಗೆ ಸಂಪರ್ಕಿಸುವ ಸಾಧನವಾಗಿದ್ದು, ಇದು ಇನ್ಫಾರೀಡ್ ಕ್ಯಾಮೆರಾ ಟೆಕ್ನಾಲಜಿಯ ಮೂಲಕ ಶ್ರವ್ಯ ಮತ್ತು ಚಿತ್ರಗಳನ್ನು ಸ್ಮಾಟ್ ð ಪೋನ್ ಗಳಿಗೆ ರವಾನಿಸುತ್ರೋತದೆ. ರೋಗಿಗಳ ನಿದ್ರಾ ಮಾದರಿ ಮತ್ತು ಅವರಲ್ಲಿ ಯಾವುದೇ ಅಸಹಜ ಚಟುವಟಿಕೆಗಳು ಕಂಡು ಬಂದಲ್ಲಿ ಅದನ್ನು ಈ ಆಪ್ ವಿಶ್ಲೇಷಿಸಲಿದೆ. ಅಲ್ಲದೆ, ಅಲಾರಂ ಬಾರಿಸುವ ಮೂಲಕ ರೋಗಿಯ ಆರೈಕೆದಾರರಿಗೆ ಸೂಕ್ತ ಕ್ರಮ ಕೈಗೊಳ್ಳಲು ನೆರವಾಗುತ್ತದೆ. ಮಾತ್ರವಲ್ಲದೆ, ಇದು ದಾಖಲಿಸುವ ಲಾಗ ಅನ್ನು ಸಹ ಹೊಂದಿದ್ದು,ಇದರಿಂದ ಯಾವುದಾದರು ಹೊಸ ಲಕ್ಷಣಗಳಿದ್ದಲ್ಲಿ ವೈದ್ಯರಿಗೆ ತಿಳಿಸಿಬಹುದು.
ಇದು ಪ್ಲೇಬ್ಯಾಕ್ ನಿಯಂತ್ರಣಗಳೊಂದಿಗೆ ರೆಕಾರ್ಡಿಂಗ್ ಲಾಗ್ ಅನ್ನು ಸಹ ಹೊಂದಿದ್ದು, ಇದು ವೈದ್ಯರು ಸೆಳೆವಿನ ಅವಧಿ ಪತ್ತೆಹಚ್ಚಲು ಮತ್ತು ಯಾವುದೇ ಪ್ರಚೋದಕಗಳಿದ್ದಲ್ಲಿ ಅದನ್ನು ಗಮನಿಸಿಲು ನೆರವಾಗುತ್ತದೆ.
ಈಗ ಲಭ್ಯವಿರುವ ತಂತ್ರಜ್ಞಾನವು ಸೆಳೆವಿನ ಸಮಸ್ಯೆಯುಳ್ಳ ವ್ಯಕ್ತಿಗಳು ಸಹಾಯಕ್ಕಾಗಿ ಮತ್ತೊಬ್ಬರನ್ನು ಕರೆಯು ಸಾಮರ್ಥ್ಯವನ್ನು ಹೊಂದಿದ್ದಾರೆ ಎಂಬ ನಂಬಿಕೆಯೊಂದಿಗೆ ಸ್ವಲ್ಪ ಮಟ್ಟಿಗಿನ ಭರವಸೆಯನ್ನು ನೀಡಿವೆ. ಸೆಳೆವು ಎಷ್ಟು ಬಾರಿ ಉಂಟಾಗುತ್ತದೆ ಎಂಬುದನ್ನು ದಾಖಲಿಸಿಕೊಳ್ಳುವುದು ಮತ್ತು ರೋಗಿಗಳು ಸೇವಿಸುವ ಔಷಧಿಗಳನ್ನು ಮೇಲ್ವಿಚಾರಣೆ ಮಾಡುವುದು ರೋಗಿಗಳಲ್ಲಿ ಅನುವರ್ತನೆ ಮತ್ತು ವರ್ತನೆಯ ಮಾದರಿಗಳನ್ನು ಸುಧಾರಿಸುತ್ತದೆ. ಈ ಮೂಲಕ ಪ್ಚೋರದಕಗಳನ್ನು ತಪ್ಪಿಸಲು ಮತ್ತು ದೀರ್ಘಾವಧಿಯಲ್ಲಿ ಅವರ ಸೆಳೆವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಎಚ್ಚರಿಕೆ: ಇಲ್ಲಿ ನೀಡಿರುವ ಮಾಹಿತಿಯು ಯಾವುದೇ ರೀತಿಯ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಯ ಉದ್ದೇಶವನ್ನು ಹೊಂದಿರುವುದಿಲ್ಲ. ಆದ್ದರಿಂದ, ನಿಮ್ಮ ಚಿಕಿತ್ಸೆ/ ತರಬೇತಿ ಅಥವಾ ಔಷಧಿಯಲ್ಲಿ ಬದಲಾವಣೆ/ ಪ್ರಾರಂಭಕ್ಕೂ ಮುನ್ನ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

Dr C P Ravikumar
CONSULTANT – PEDIATRIC NEUROLOGY
Aster CMI Hospital, Bangalore