Dr C P Ravikumar

ಶೀರ್ಷಿಕೆ: ಟೆಲಿಮೆಡಿಸನ್ (ದೂರಸಂಪರ್ಕ) ಎಂಬ “ನೂತನ ಸಹಜತೆ” ವಿಧಾನದಲ್ಲಿ ವೈದ್ಯರೊಂದಿಗೆ ಸಮಾಲೋಚನೆ
ಕೊವಿಡ್ -೧೯ ಜಾಗತಿಕ ಸಾಂಕ್ರಾಮಿಕವು ನಿಸ್ಸಂಶಯವಾಗಿ ನಮ್ಮ ಜೀವನ ಮತ್ತು ನಮ್ಮ ದಿನಚರಿಯನ್ನು ಬದಲಾಯಿಸಿದೆ. ಈ ಸಂದರ್ಭದಲ್ಲಿ ನಾವು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಮಾತ್ರವಲ್ಲದೆ, ಮನೆಯಲ್ಲಿ ಕೆಲವು ನಿಯಮಗಳನ್ನು ಅನುಸರಿಸುವುದೊಂದಿಗೆ ಈ ನೂತನ ಸಹಜತೆಗೆ ಹೊಂದಿಕೊಳ್ಳಬೇಕೆಂಬುದನ್ನು ಸಹ ಕಲಿಯಬೇಕಾಯಿತು.
ಈ ಸಮಯದಲ್ಲಿ ವೈದ್ಯ-ರೋಗಿಯ ನಡುವೆ ನೇರ/ ಮುಖತಃ ವಿಧಾನದಲ್ಲಿ ಸಂವಹನ ಸಾಧ್ಯವಾಗದಿದ್ದು ನಮಗೆ ಎದುರಾದ ಮತ್ತೊಂದು ಮುಖ್ಯ ಅಡಚಣೆ. ಚಿಕಿತ್ಸಾಲಯ ಅಥವಾ ಆಸ್ಪತ್ರೆಯ ಹೊರರೋಗಿ ವಿಭಾಗಗಳಲ್ಲಿ ವೈದ್ಯರೊಂದಿಗಿನ ನೇಮಕಾತಿಯು ಇದ್ದಕ್ಕಿದ್ದಂತೆ ಕೋವಿಡ್ 19 ಸೋಂಕಿನ ಸಂಭಾವ್ಯ ಮೂಲವಾಯಿತು ಮತ್ತು ಜನರು ಆಸ್ಪತ್ರೆಗಳಿಗೆ ಭೇಟಿ ನೀಡಲು ಹಿಂದೇಟು ಹಾಕತೊಡಗಿದರು.
ಈ ಸಂದಿಗ್ಧ ಸಮಯದಲ್ಲಿಯೇ ಈ ಟೆಲಿಮೆಡಿಸನ್ ಎಂಬುದು ಮುಂಚೂಣಿಗೆ ಬಂದದ್ದು. ಭಾರತದಲ್ಲಿ ಈ ಟೆಲಿಮೆಡಿಸನ್ ಪರಿಕಲ್ಪನೆಯು ಮುಂಚಿನಿಂದ ಅಸ್ತಿತ್ವದಲ್ಲಿದ್ದರೂ ಹೆಚ್ಚು ಬಳಕೆಯಲ್ಲಿರಲಿಲ್ಲ. ಆದಾಗ್ಯೂ, ಈ ವರ್ಷದ ಆರಂಭದಲ್ಲಿ ಭಾರತವು ಟೆಲಿಹೆಲ್ತ್‌ಗಾಗಿ ತನ್ನದೇ ಆದ ಸ್ಪಷ್ಟ ಮಾರ್ಗಸೂಚಿಗಳನ್ನು ರೂಪಿಸುತ್ತಿರುವುದರಿಂದ, ಮನಸ್ಥಿತಿಗಳು ಬದಲಾದಂತೆ ಜನರು ಅದನ್ನು ಅಳವಡಿಸಿಕೊಳ್ಳುವ ದಿಢೀರ್ ಅಗತ್ಯತೆ ಕಂಡು ಬಂದಿದೆ.

ಟೆಲಿಮೆಡಿಸಿನ್ ಅಥವಾ ಟೆಲಿಸಮಾಲೋಚನೆ ಎಂದರೇನು?
ಟೆಲಿಮೆಡಿಸಿನ್ ಎಂಬುದು ವರ್ಚುಯಲ್ (ಮಿಥ್ಯಾ ವಾಸ್ತವ) ಅಥವಾ ಆನ್ ಲೈನ್ ಸಮಾಲೋಚನೆಯಾಗಿದ್ದು, ವಿಡಿಯೋ ಕಾನ್ಫರೆನ್ಸಿಂಗ್ ವ್ಯವಸ್ಥೆಯಲ್ಲಿ ರೋಗಿಗಳು ವೈದ್ಯರನ್ನು ಭೇಟಿ ಮಾಡಿ ತಮ್ಮ ಅನಾರೋಗ್ಯಕ್ಕೆ ಸಂಬಂಧಿಸಿದಂತಹ ಲಕ್ಷಣಗಳು, ಅದರ ಹಿನ್ನೆಲೆಯನ್ನು ತಿಳಿಸಿ ವೈದ್ಯಕೀಯ ಸಲಹೆ ಪಡೆಯಬಹುದು. ಇದಕ್ಕೆ ಶುಲ್ಕ ವಿಧಿಸಲಾಗುತ್ತದೆ. ಸಾಧ್ಯವಾದಷ್ಟು ಇದು ವೈದ್ಯರೊಂದಿಗೆ/ ಚಿಕಿತ್ಸಾಲದ ಮುಖತಃ/ ನೇರ ಭೇಟಿಗೆ ಹತ್ತಿರವಾಗಿರುತ್ತದೆ.

ಟೆಲಿಮೆಡಿಸಿನ್‌ನಲ್ಲಿ ಯಾವ ರೀತಿಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ?
ಸಾಮಾನ್ಯವಾಗಿ ಟೆಲಿಮೆಡಿಸನ್ ವ್ಯವಸ್ಥೆಯಲ್ಲಿ ಕೆಮ್ಮು, ಉಸಿರಾಟದ ತೊಂದರೆ ಇಲ್ಲದ ಶೀತ ಜ್ವರ, ಅಲರ್ಜಿ, ಅತಿಸಾರ ಮತ್ತು ವಾಂತಿ ಮುಂತಾದ ಸೌಮ್ಯ ಅಥವಾ ಮಧ್ಯಮ ಲಕ್ಷಣಗಳಂತಹ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಯಾವುದೇ ತುರ್ತು ಪರಿಸ್ಥಿತಿಯಲ್ಲಿ, ಅಥವಾ ವೈದ್ಯರು ದೈಹಿಕ ಪರೀಕ್ಷೆಯನ್ನು ನಡೆಸಬೇಕಾದ ಅನಿವಾರ್ಯ ಸಂದರ್ಭಗಳಲ್ಲಿ ರೋಗಿಯು, COVID 19 ವಿರುದ್ಧ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ವೈದ್ಯರನ್ನು ಮುಖತಃ ಭೇಟಿ ಮಾಡಬೇಕಾಗುತ್ತದೆ.
ಯಾವೆಲ್ಲಾ ಮಾಧ್ಯಮಗಳಲ್ಲಿ ಟೆಲಿಮೆಡಿಸನ್ ಚಿಕಿತ್ಸೆ/ ಸಮಾಲೋಚನೆ ಸಾಧ್ಯವಿದೆ?
ಪ್ರಸ್ತುತ ಜೂಮ್, ವಾಟ್ಸಾಪ್ ವಿಡಿಯೋ, ಫೇಸ್‌ಟೈಮ್, ಗೂಗಲ್ ಮೀಟ್ ಮುಂತಾದ ವಿವಿಧ ವಿಡಿಯೋಕಾನ್ಫರೆನ್ಸಿಂಗ್ ಸಾಫ್ಟ್‌ವೇರ್ಗಳು ಲಭ್ಯವಿದ್ದು, ಇವನ್ನು ಫೋನ್, ಟ್ಯಾಬ್ಲೆಟ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಇವನ್ನು ಇನ್ಟ್ಟಾಲ್ ಮಾಡಿಕೊಂಡು ಬಳಸಬಹುದು. ಆದಾಗ್ಯೂ, ವೈದ್ಯರು ನೋಂದಾಯಿಸಿಕೊಂಡಿರುವ ಅನೇಕ ಪ್ಲಾಟ್‌ಫಾರ್ಮ್‌ಗಳು ಅಥವಾ ಫೋನ್ ಅಪ್ಲಿಕೇಶನ್‌ಗಳು ವೀಡಿಯೊ ಸಮಾಲೋಚನೆಗೆ ಮತ್ತಷ್ಟು ಅನುಕೂಲ ಮಾಡಿಕೊಡುತ್ತವೆ. ಇವು ಸಮಾಲೋಚನೆ ನಂತರದ ಇ-ಪ್ರಿಸ್ಕ್ರಿಪ್ಷನ್‌ಗಳು ಮತ್ತು ಬಿಲ್ಲಿಂಗ್ ವ್ಯವಸ್ಥೆಗಳಿಗೆ ಸುಲಭವಾದ ಲಿಂಕ್‌ಗಳನ್ನು ನೀಡುತ್ತದೆ. ಮಾತ್ರವಲ್ಲದೆ, ವೈದ್ಯರು ತಮ್ಮ ಕಾರ್ಯವನ್ನು ಸುಲಭವಾಗಿ ನಿರ್ವಹಿಸಲು ನೆರವಾಗುತ್ತವೆ.

ವೈದ್ಯರೊಂದಿಗೆ ಟೆಲಿ ಸಮಾಲೋಚನೆ ನಡೆಸುವ ಮುನ್ನ ರೋಗಿಯು ಏನು ಮಾಡಬೇಕು?
ಸಮಾಲೋಚನೆಗಾಗಿ ವೈದ್ಯರೊಂದಿಗೆ ನಿಗದಿಪಡಿಸಿಕೊಂಡಿರುವ ಸಮಯವನ್ನು ಸಂಪೂರ್ಣ ಸದುಪಯೋಗಪಡಿಸಿಕೊಳ್ಳಲು ರೋಗಿಯು ಈ ಕೆಳಗಿನಂತೆ ಸಿದ್ಧತೆ ಮಾಡಿಕೊಳ್ಳಬಹುದು. ಅವೆಂದರೆ,
  • ಪ್ರಸ್ತುತ ರೋಗಲಕ್ಷಣಗಳು, ಅವು ಯಾವಾಗ ಪ್ರಾರಂಭವಾದವು ಮತ್ತು ಅವುಗಳ ತೀವ್ರತೆಯ ಪಟ್ಟಿಯನ್ನು ಮಾಡಿಕೊಂಡಿರಬೇಕು
  • ಸಾಧ್ಯವಾದಲ್ಲಿ ಗ್ಲುಕೋಮೀಟರ್‌ ಮತ್ತು  ಆಕ್ಸಿಮೀಟರ್ ಸಾಧನಗಳನ್ನು ಉಪಯೋಗಿಸಿ ರಕ್ತದೊತ್ತಡ, ದೇಹದ ಉಷ್ಣತೆ, ನಾಡಿಮಿಡಿತ, ಸಕ್ಕರೆಯ ಅಂಶ – ಹೀಗೆ ಮನೆಯಲ್ಲಿ ಮನೆಯಲ್ಲಿ ಮೇಲ್ವಿಚಾರಣೆ ಮಾಡಬಹುದಾದ ಜೀವಕೋಶಗಳ ದಾಖಲೆಯನ್ನು ಇರಿಸಿಕೊಂಡಲ್ಲಿ ಉತ್ತಮ.
  • ದೀರ್ಘಕಾಲದ ಇತರೆ ಆರೋಗ್ಯ ಸಮಸ್ಯೆಗಳು ಮತ್ತು ರೋಗಿಯು ತೆಗೆದುಕೊಳ್ಳುತ್ತಿರುವ ಇತರೆ ಯಾವುದೇ ಔಷಧಿಗಳನ್ನು ವೈದ್ಯರಿಗೆ ತಿಳಿಸುವುದನ್ನು ಮರೆಯಕೂಡದು
  • ವೈದ್ಯರೊಂದಿಗಿನ ಅಪಾಯಿಂಟ್ ಮೆಂಟ್ಗೆ ಮುನ್ನ ರಕ್ತ ಪರೀಕ್ಷೆಗಳು ಅಥವಾ ಎಕ್ಸರೆಗಳಂತಹ ಯಾವುದೇ ಪರೀಕ್ಷೆಗಳನ್ನು ಮಾಡಿಸಿದ್ದರೆ ಆ ವರದಿಗಳನ್ನು ಸಿದ್ಧವಾಗಿರಿಸಿಕೊಂಡು ಅಗತ್ಯವಿದ್ದಾಗ ಫಲಿತಾಂಶಗಳನ್ನು ವೈದ್ಯರಿಗೆ ತೋರಿಸಬಹುದು.
  • ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಸಂದೇಹ/ ಪ್ರಶ್ನೆಗಳಿದ್ದಲ್ಲಿ, ಪಟ್ಟಿ ಮಾಡಿಟ್ಟುಕೊಂಡರೆ ಒಳಿತು
  • ಒಂದು ವೇಳೆ ಹತ್ತಿರದ ಆಸ್ಪತ್ರೆ ಅಥವಾ ತುರ್ತು ಚಿಕಿತ್ಸೆಗಾಗಿ ಹೋಗಲು ಸೂಚಿಸಲ್ಪಟ್ಟರೆ, ಹತ್ತಿರದ ಆಸ್ಪತ್ರೆಯ ವಿಳಾಸವನ್ನು ತಿಳಿದುಕೊಂಡಿರಬೇಕು,
  • ವಿಡಿಯೋ ಕಾನ್ಫರೆನ್ಸಿಂಗ್ ಸಮಾಲೋಚನೆಗಾಗಿ ಬಳಸಲು ನಿರ್ಧರಿಸಿರುವ ವಿದ್ಯುತ್ ಉಪಕರಣವನ್ನು ಚಾರ್ಜ್ ಮಾಡಲಾಗಿದೆಯೆ ಮತ್ತು ಅಗತ್ಯವಿದ್ದಲ್ಲಿ ಯಾವುದೇ ಅಪ್ಲಿಕೇಶನ್ ಅನ್ನು ಡೌನ್ ಲೋಡ್ ಮಾಡುತ್ತದೆಯೇ ಎಂದು ಖಚಿತಪಡಿಸಿಕೊಂಡಿರಬೆಕು
  • ಇಂಟರ‍್ ನೆಟ್ ಸಂಪರ್ಕ ಮತ್ತು ಅದರ ವೇಗವು ಉತ್ತಮವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಂಡಿರಬೆಕು
  • ಉತ್ತಮ ಬೆಳಕಿನ ವ್ಯವಸ್ಥೆ ಇರುವ ಕಡೆ ಈ ಆನ್ ಲೈನ್ ಸಮಾಲೋಚನೆಗೆ ಸಿದ್ಧತೆ ಮಾಡಿಕೊಳ್ಳುವುದು ಉತ್ತಮ
  • ವೈದ್ಯರು ನೀಡುವ ಸಲಹೆ ಸೂಚನೆಗಳನ್ನು ಗುರುತು ಮಾಡಿಕೊಳ್ಳಲು ಪೇಪರ‍್ ಮತ್ತು ಪೆನ್ನು ಸಿದ್ಧವಾಗಿಟ್ಟುಕೊಂಡರಬೇಕು
  • ಮೈಕ್ರೊಫೋನ್ ಮತ್ತು ಕ್ಯಾಮೆರಾ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ಪರಿಶೀಲಿಸಿಟ್ಟುಕೊಂಡಿರಬೇಕು

ತನ್ನ ವೈದ್ಯರೊಂದಿಗಿನ ಟೆಲಿಸಮಾಲೋಚನೆಯಲ್ಲಿ ಯಾವ ವಿಷಯಗಳನ್ನು ಗಮನದಲ್ಲಿರಿಸಿಕೊಂಡಿರಬೇಕು?
ರೋಗಿಯು ಸ್ಪಷ್ಟವಾಗಿ ಮಾತನಾಡಬೇಕು ಮತ್ತು ತನ್ನ ರೋಗಲಕ್ಷಣಗಳನ್ನು ಬಗ್ಗೆ ಸರಿಯಾಗಿ ತಿಳಿಸಿ ಅಗತ್ಯವಿದ್ದಾಗ ಅನುಮಾನಗಳನ್ನು ಸ್ಪಷ್ಟಪಡಿಸಬೇಕು. ಒಟ್ಟಾರೆಯಾಗಿ, ವರ್ಚುವಲ್ ಭೇಟಿಯು ನೀವು ವೈದ್ಯರ ಕಚೇರಿಗೆ ಭೇಟಿ ನೀಡುವಂತೆಯೇ ಇರುತ್ತದೆ, ಆದರೆ ಈ ಅಸಾಮಾನ್ಯ ಸಂದರ್ಭದಲ್ಲಿ, ಇದು ಹೆಚ್ಚು ಸಿದ್ಧತೆಯನ್ನು ಬೇಡುತ್ತದೆ.
ಸಮಾಲೋಚನೆಯ ನಂತರ ನೆನಪಿಡಬೇಕಾದ ಅಂಶಗಳು
ಮುಂದಿನ ನಿಗದಿತ ನೇಮಕಾತಿ ದಿನಾಂಕ ಮತ್ತು ಸಮಯವನ್ನು ಗುರುತು ಮಾಡಿಟ್ಟುಕೊಳ್ಳಿ ವೈದ್ಯರ ಸಲಹೆಗಳನ್ನು ಅನುಸರಿಸಿ ಅಥವಾ ನೀಡಿದ ಔಷಧಿಗಳನ್ನು ಸರಿಯಾದ ಸಮಯದಲ್ಲಿ ತೆಗೆದುಕೊಳ್ಳಿ
ರೋಗಲಕ್ಷಣಗಳು ಸುಧಾರಿಸಿದರೆ ಅಥವಾ ಅವು ಹದಗೆಟ್ಟರೆ ವೈದ್ಯರಿಗೆ ಅಗತ್ಯ ಮಾಹಿತಿಯನ್ನು ಒದಗಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ
ನಿಮ್ಮ ವೈದ್ಯರು, ನಿಮಗೆ ವೈದ್ಯಕೀಯ ತಜ್ಞರೊಂದಿಗೆ ಸಮಾಲೋಚನೆಯನ್ನು ಶಿಫಾರಸು ಮಾಡಿದ್ದರೆ, ನಿಮ್ಮ ಮುಂದಿನ ಅನುಸರಣಾ ಭೇಟಿಗೆ ಮುಂಚಿತವಾಗಿ ನೀವು ತಜ್ಞರೊಂದಿಗೆ ಸಮಾಲೋಚನೆ ನಡೆಸದ್ದೀರೆಯೇ ಎಂದು ಅವರು ಖಚಿತಪಡಿಸಿಕೊಳ್ಳಬಹುದು.

ಕೊನೆಗೆ ಅನುಭವವು ಅನೇಕ ಜನರಿಗೆ ನೂತನವಾದುದ್ದು ಎಂಬುದರ ಅರಿವಿದ್ದು, ಈ ಟೆಲಿ ಸಮಾಲೋಚನೆಯ ಬಗ್ಗೆ ಬಹುತೇಕ ಜನರು ಭಯಭೀತರಾಗುತ್ತಾರೆ ಅಥವಾ ಬೆದರುತ್ತಾರೆ ಎಂದು ಸಂಪೂರ್ಣವಾಗಿ ಅರ್ಥೈಸಿಕೊಳ್ಳಬಹುದು. ಆದಾಗ್ಯೂ, ಈ ವ್ಯವಸ್ಥೆಯಲ್ಲಿ ತಾಳ್ಮೆ ಅತಿ ಮುಖ್ಯ.
ಪ್ರಾರಂಭದಲ್ಲಿ ಇದು ಭಯವನ್ನುಂಟು ಮಾಡುವಂತೆ ತೋರುತ್ತದೆಯಾದರೂ, ಅಗತ್ಯವಿದ್ದಾಗ ವೈದ್ಯಕೀಯ ಆರೈಕೆಗೆ ಲಭ್ಯವಾಗುವಷ್ಟು ಅನುಕೂಲತೆಯನ್ನು ಟೆಲಿಹೆಲ್ತ್ ವ್ಯವಸ್ಥೆಗಳು ಹೊಂದಿವೆ.

ಎಚ್ಚರಿಕೆ: ಇಲ್ಲಿ ನೀಡಿರುವ ಮಾಹಿತಿಯು ಯಾವುದೇ ರೀತಿಯ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಯ ಉದ್ದೇಶವನ್ನು ಹೊಂದಿರುವುದಿಲ್ಲ. ಆದ್ದರಿಂದ, ನಿಮ್ಮ ಚಿಕಿತ್ಸೆ/ ತರಬೇತಿ ಅಥವಾ ಔಷಧಿಯಲ್ಲಿ ಬದಲಾವಣೆ/ ಪ್ರಾರಂಭಕ್ಕೂ ಮುನ್ನ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
Picture of Dr C P Ravikumar

Dr C P Ravikumar

CONSULTANT – PEDIATRIC NEUROLOGY
Aster CMI Hospital, Bangalore