Dr C P Ravikumar

ವಿಟಮಿನ್ ಬಿ 12
ವಿಟಮಿನ್ ಬಿ 12 ಎಂಟು ವಿಟಮಿನ್ ಬಿ ಗಳಲ್ಲಿ ಒಂದು ಮತ್ತು ಜೀವಕೋಶಗಳ ಸ್ಥಾನಾಂತರ
ಪ್ರಕ್ರಿಯೆ ಗಳಲ್ಲಿ ( Metabolism) ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಇದೊಂದು ನೀರಿನಲ್ಲಿ ಕರಗಬಲ್ಲ ವಿಟಮಿನ್ (ಅಂದರೆ, ಇದು ನೀರಿನಲ್ಲಿ ಕರಗುತ್ತದೆ ಮತ್ತು ದೇಹ ಅದನ್ನುಉಪಯೋಗಿಸಿಕೊಂಡನಂತರ, ಮಿಕ್ಕಿದ್ದು ಮೂತ್ರದ ಮೂಲಕ ದೇಹದಿಂದ ಹೊರಗೆ ಬರುತ್ತದೆ).
ವಿಟಮಿನ್ ಬಿ 12 ಅದರ ರಾಸಾಯನಿಕ ರಚನೆಯಲ್ಲಿ ಕೊಬಾಲ್ಟ ಖನಿಜವನ್ನು ಹೊಂದಿದೆ, ಹೀಗಾಗಿ ಇದನ್ನು ಕೊಬಾಲಮಿನ್ ಎಂದು ಕೂಡ ಕರೆಯುತ್ತಾರೆ. ಮೀಥೈಲ್ ಕೊಬಾಲಮೈನ್ ಎಂಬುದು ಇದರ ಸಕ್ರಿಯ ರೂಪ ಮತ್ತು ಸಯಾನೋಕೊಬಾಲಮಿನ್ ಎಂಬುದು ಪೂರಕಗಳಲ್ಲಿ ಉಪಯೋಗಿಸಲ್ಪಡುವ ಪ್ರಧಾನರೂಪ. ಇದು ಡಿ.ಎನ್.ಎ. ಸಂಶ್ಲೇಷಣೆಗೆ ಮಾತ್ರವಲ್ಲದೇ, ಪ್ರೊಟೀನ್ ಮತ್ತು ಕೊಬ್ಬಿನ ಆಮ್ಲಗಳ ಜೀವಕೋಶಗಳ ಸ್ಥಾನಾಂತರ ಪ್ರಕ್ರಿಯೆಗೆ (Metabolism) ಸಹಾಯ ಮಾಡುವ ಪ್ರಮುಖ ವಿಟಮಿನ್ ಆಗಿದೆ.
ಇದು ಸಸ್ಯಗಳಿಂದಲೇ ಆಗಲೀ, ಅಥವಾ ಪ್ರಾಣಿಗಳಿಂದಲೇ ಆಗಲೀ, ತಯಾರಾಗುವುದಿಲ್ಲ . ಆದರೆ ಇದು ಸೂಕ್ಷ್ಮಜೀವಿಗಳಿಂದ (ಬ್ಯಾಕ್ಟೀರಿಯಾ) ಸಂಶ್ಲೇಷಿತಗೊಳಿಸಲ್ಪಟ್ಟಿದೆ.ವಿಟಮಿನ್ ಬಿ 12ರ ಪ್ರಾಥಮಿಕ ಮೂಲ ಎಂದರೇ ಮಾಂಸ ಮತ್ತು ಮೀನುಗಳಂತಹ ಪ್ರಾಣಿಜನ್ಯ ಆಹಾರಗಳು. ಏಕೆಂದರೆ ಪ್ರಾಣಿಗಳು ಬ್ಯಾಕ್ಟೀರಿಯಾಗಳಿಂದ ಕಲುಷಿತಗೊಂಡ ಆಹಾರಗಳನ್ನು ತಿನ್ನುತ್ತವೆ ಅಥವಾ ತಮ್ಮ ಕರುಳಿನಲ್ಲಿ ಇರುವ ಬ್ಯಾಕ್ಟೀರಿಯಾಗಳಿಂದ ಆಂತರಿಕವಾಗಿ ಬಿ12 ನ್ನು ಉತ್ಪತ್ತಿಮಾಡುತ್ತವೇ. ಈ ಬ್ಯಾಕ್ಟೀರಿಯಾಗಳು ಮಾನವನಲ್ಲಿ ದೊರಕುವುದಿಲ್ಲ. ಬಿ12ರ ಮುಖ್ಯ
ಸಸ್ಯಹಾರಿ ಮೂಲವು ಹೈನುಗಾರಿಕೆಯಲ್ಲಿ ಇದೆ. ನಮ್ಮ ದೇಹಕ್ಕೆ ಅಗತ್ಯವಾದ ವಿಟಮಿನ್ ಬಿ12ನ್ನು, ದೇಹ ತಯಾರಿಸಲು ಸಾದ್ಯವಿಲ್ಲದ ಕಾರಣ, ನಾವು ಅದನ್ನು ನಮ್ಮ ಆಹಾರ ಅಥವಾ ಪೂರಕಗಳಿಂದ ಪಡೆಯಬೇಕು.
ವಯಸ್ಸು ಪುರುಷ ಮಹಿಳೆ ಗರ್ಭಿಣಿ ಸ್ತನ್ಯಪಾನದ ಅವಧಿ
0-6 ತಿಂಗಳು 0.4 ಮೈಕ್ರೊ ಗ್ರಾಮ್ 0.4 ಮೈಕ್ರೊ ಗ್ರಾಮ್
7-12 ತಿಂಗಳು 0.5 ಮೈಕ್ರೊ ಗ್ರಾಮ್ 0.5 ಮೈಕ್ರೊ ಗ್ರಾಮ್
1-3 ವರ್ಷಗಳು 0.9 ಮೈಕ್ರೊ ಗ್ರಾಮ್ 0.9 ಮೈಕ್ರೊ ಗ್ರಾಮ್
4-8 ವರ್ಷಗಳು 1.2 ಮೈಕ್ರೊ ಗ್ರಾಮ್ 1.2 ಮೈಕ್ರೊ ಗ್ರಾಮ್
9-13 ವರ್ಷಗಳು 1.8 ಮೈಕ್ರೊ ಗ್ರಾಮ್ 1.8 ಮೈಕ್ರೊ ಗ್ರಾಮ್
14+ ವರ್ಷಗಳು 2.4 ಮೈಕ್ರೊ ಗ್ರಾಮ್ 2.4 ಮೈಕ್ರೊ ಗ್ರಾಮ್ 2.6 ಮೈಕ್ರೊ ಗ್ರಾಮ್ 2.8 ಮೈಕ್ರೊ ಗ್ರಾಮ್

ಮೂಲಗಳು
ಮುಖ್ಯವಾಗಿ ವಿಟಮಿನ್ ಬಿ 12 ಪ್ರಾಣಿಜನ್ಯವಾದ ಆಹಾರಗಳಲ್ಲಿ ಅಂದರೆ ಮಾಂಸ, ಸಾಲ್ಮನ್ ಮೀನು, ಗಿಣ್ಣು, ಮೊಟ್ಟೆ ಮುಂತಾದುವುಗಳಲ್ಲಿ ಕಂಡುಬರುತ್ತದೆ. ಸಸ್ಯಹಾರಿಗಳು ಈ ವಿಟಮಿನ್ ಅನ್ನು ಸಂಸ್ಕರಿಸಿದ ಧಾನ್ಯಗಳು ಹಾಗು ಪೌಷ್ಟಿಕಾಂಶವುಳ್ಳ ಈಸ್ಟ ಮುಂತಾದುವುಗಳ ಮೂಲಕ ಪಡೆಯಬಹುದು.

ಪ್ರಾಣಿ ಮೂಲಗಳು ಪ್ರಮಾಣ ಒಂದು ಬಾರಿಗೆ ಮೈಕ್ರೊ ಗ್ರಾಮ್ ದೈನಂದಿನ ಮೌಲ್ಯ
ಮ್ರುದ್ವಂಗಿ 1೦೦ ಗ್ರಾಮ್ 99 ಮೈಕ್ರೊಗ್ರಾಮ್ 4120%
ಕುರಿಮರಿ ಯಕೃತ್ತು 1೦೦ ಗ್ರಾಮ್ 90 ಮೈಕ್ರೊಗ್ರಾಮ್ 3571%
ಕುರಿಮರಿ ಮೂತ್ರಪಿಂಡ 1೦೦ ಗ್ರಾಮ್ 52.4 ಮೈಕ್ರೊಗ್ರಾಮ್ 2184%
ಸಾರ್ಡೈನ್ ಮೀನು 1೦೦ ಗ್ರಾಮ್ 8.94 ಮೈಕ್ರೊಗ್ರಾಮ್ 149%
ಕೋಳಿಮಾಂಸ 1೦೦ ಗ್ರಾಮ್ 0.3 ಮೈಕ್ರೊಗ್ರಾಮ್ 12%
ಟ್ಯೂನ ಮೀನುc 1೦೦ ಗ್ರಾಮ್ 10.9 ಮೈಕ್ರೊಗ್ರಾಮ್ 453%
ಸಾಲ್ಮನ್ ಮೀನು 1೦೦ ಗ್ರಾಮ್ 4.15 ಮೈಕ್ರೊಗ್ರಾಮ್ 208%
ಮೊಟ್ಟೆ ಒಂದು ದೊಡ್ಡ ಮೊಟ್ಟೆ 0.6 ಮೈಕ್ರೊಗ್ರಾಮ್ 25%

ಸಸ್ಯಹಾರಿ ಮೂಲಗಳು ಪ್ರಮಾಣ ಒಂದು ಬಾರಿಗೆ ಮೈಕ್ರೊ ಗ್ರಾಮ್ ದೈನಂದಿನ ಮೌಲ್ಯ(DV)
ಸೊಪ್ಪು 1೦೦ ಗ್ರಾಮ್ 0. 14 ಮೈಕ್ರೊಗ್ರಾಮ್ 5%
ಸಂಸ್ಕರಿಸಿದ ಧಾನ್ಯಗಳು 1೦೦ ಗ್ರಾಮ್ 21 ಮೈಕ್ರೊಗ್ರಾಮ್ 875%
ಸ್ವಿಸ್ ಗಿಣ್ಣು 1೦೦ ಗ್ರಾಮ್ 3.1 ಮೈಕ್ರೊಗ್ರಾಮ್ 128%
ಕಡಿಮೆ ಕೊಬ್ಬಿನ ಹಾಲು 1 ಕಪ್ 1.2 ಮೈಕ್ರೊಗ್ರಾಮ್ 51%
ಮೊಸರು 1 ಕಪ್,200 ಮಿ.ಲೀ. 1.3 ಮೈಕ್ರೊಗ್ರಾಮ್ 52%
ಪನೀರ್ 1೦೦ ಗ್ರಾಮ್ 0. ಮೈಕ್ರೊಗ್ರಾಮ್ 8 40%
ಹಾಲೊಡಕು ಪುಡಿ (ಪ್ರೋಟೀನ್) ¼ ಕಪ್,32 ಗ್ರಾಮ್,2 ಟೇಬಲ್ ಚಮಚ 0.18 ಮೈಕ್ರೊಗ್ರಾಮ್ 8%
ಪ್ರತ್ಯೇಕಿಸಿದ ಹಾಲೊಡಕು ಪುಡಿ (ಶುದ್ಧೀಕರಿಸಿದ ರೂಪ) ¼ ಕಪ್,2 ಟೇಬಲ್ ಚಮಚ 1 ಮೈಕ್ರೊಗ್ರಾಮ್ 42%
ಪೌಷ್ಟಿಕಾಂಶದ  ಈಸ್ಟ್ 15 ಗ್ರಾಮ್,2 ಟೇಬಲ್ ಚಮಚ 17.6 ಮೈಕ್ರೊಗ್ರಾಮ್ 733%


ಇತರೇ ಮೂಲಗಳು: ಸೇಬು, ಬಾಳೇಹಣ್ಣು, ಕಿತ್ತಳೇ,  ನೀಲಿ ಬೆರ್ರಿ ಹಣ್ಣು,ಬದಾಮಿ, ಕಡಲೇಕಾಯಿ ಬೀಜ
ಕಾರ್ಯವೈಖರಿ:
1. ಕೆಂಪು ರಕ್ತ ಕಣಗಳ ಉತ್ಪಾದನೆಯಲ್ಲಿ ಸಹಾಯಮಾಡುತ್ತದೆ- ಹಾಗೆಯೇ ರಕ್ತಹೀನತೆಯನ್ನು ತಡೆಯುತ್ತದೆ. ವಿತಮಿನ್ ಬಿ12ರ ಕೊರತೆಯು, ಕೆಂಪು ರಕ್ತ ಕಣಗಳ ಉತ್ಪಾದನೆಯನ್ನು ಪ್ರತಿಬಂದಿಸುತ್ತದೆ ಹಾಗು ಕಣಗಳು ದೊಡ್ಡ ದಾಗಿ ಮತ್ತು ಅಂಡಾಕಾರದಲ್ಲಿ ಬೆಳೆಯುವಂತಾಗುತ್ತದೆ. ಇದರಿಂದ ಅನಿಯಮಿತ ಕೆಂಪು ರಕ್ತ ಕಣಗಳು ಮೂಳೆಮಜ್ಜೆಯಿಂದ ಹೊರಗೆ ಬಂದು ತಮ್ಮ ಸರಾಸರಿ ವೇಗದಿಂದ ಪರಿಚಲನೆಮಾಡಲು ಸಾಧ್ಯವಾಗದೇ, ಮೆಗಾಲೋಬ್ಲಾಸ್ಟಿಕ್(Megaloblastic) ರಕ್ತಹೀನತೆಗೆ ಕಾರಣವಾಗುತ್ತದೆ.
2. ಮೆದುಳು ಹಾಗು ನರಕೋಶಗಳ ಬೆಳವಣಿಗೆ ಮತ್ತು ಸರಿಯಾದ ಕಾರ್ಯನಿರ್ವಹಣೆಯಲ್ಲಿ ಸಹಾಯಮಾಡುತ್ತದೆ- ಹಾಗೆಯೇ ನ್ಯೂರಾನ್ ನಾಶವನ್ನು ತಡೆಯುತ್ತದೆ. ವಿಟಮಿನ್ ಬಿ 12ರ ಕೊರತೆಯು ಮೆದುಳಿನ ಕ್ಷೀಣತೆ ಮತ್ತು ಸ್ಮರಣಶಕ್ತಿಯ ನಾಶಕ್ಕೆ ಕಾರಣವಾಗುತ್ತದೆ. ಒಮೆಗಾ-3 ಕೊಬ್ಬಿನಾಮ್ಲದೊಂದಿಗೆ ವಿಟಮಿನ್ ಬಿ-12, ಬುದ್ದಿಮಾಂದ್ಯತೆಯ(dementia) ಆರಂಭಿಕ ಹಂತಗಳಲ್ಲಿ ಮಾನಸಿಕ ಕ್ಷೀಣತೆಯನ್ನು(Mental deterioration) ನಿಧಾನಗೊಳಿಸುತ್ತದೆ ಮತ್ತು ಮರೆವನ್ನು ಕಡಿಮೆ ಮಾಡಲು ಸಹಾಯಮಾಡುತ್ತದೆ.
3. ಖಿನ್ನತೆಯ ಲಕ್ಷಣಗಳಿಗೆ ಸಹಾಯ ಮಾಡುತ್ತದೆ ಮತ್ತು ಮನಸ್ತಿತಿಯನ್ನು ಹೆಚ್ಚಿಸುತ್ತದೆ. ಏಕೆಂದರೇ, ಇದು ಮನಸ್ತಿತಿಯನ್ನು ನಿಯಂತ್ರಿಸುವ ನರವಾಹಕ ಸಿರೋಟೋನಿಯಮ್(Neuro transmitter) ಉತ್ಪಾದನೇ ಮತ್ತು ಕೋಶಗಳ ಸ್ತಾನಾಂತರ ಪ್ರಕ್ರಿಯೆಗೆ (Metabolism) ಸಹಾಯಮಾಡುತ್ತದೆ.
4. ಸ್ಥಿರವಾದ ಅಸಹಜತೆಗಳನ್ನು ತಡೆಯುತ್ತದೆ – ವಿಟಮಿನ್ ಬಿ 12 ನ್ನು ತಾಯಿಯ ಹೊಕ್ಕುಳ ಬಳ್ಳಿಯು ಭ್ರೂಣಕ್ಕೆ ರವಾನಿಸುತ್ತದೆ. ಭ್ರೂಣದ ಮೆದುಳಿನ ಸಾಮಾನ್ಯ ಬೆಳವಣಿಗೆಗೆ ಇದು ಅವಶ್ಯಕವಾಗಿದೆ. ಗರ್ಭಾವಸ್ಥೆಯ ಮೊದಲ ತ್ರೈಮಾಸಿಕದಲ್ಲಿ ಇದರ ಕೊರತೆಯು, ಭ್ರೂಣದಲ್ಲಿ ದೋಷಗಳು ಮತ್ತು ಗರ್ಭಪಾತ ಅಥವಾ ಅವಧಿಪೂರ್ವ ಹೆರಿಗೆಯ ಅಪಾಯಗಳಿಗೆ ಕಾರಣವಾಗಬಹುದು.
5. ಮೂಳೆಗಳ ಆರೋಗ್ಯವನ್ನು ಬೆಂಬಲಿಸುತ್ತದೆ ಮತ್ತು ಅಸ್ಥಿರಂದ್ರತೆಯನ್ನು ತಡೆಯುತ್ತದೆ – ಇದರ ಕೊರತೆಯಿಂದ ಮೂಳೆ ಸಾಂದ್ರತೆಯಲ್ಲಿರುವ ಖನಿಜ ಕಡಿಮೆ ಆಗುತ್ತದೆ ಹಾಗು ಇದರಿಂದ ಅಸ್ಥಿರಂದ್ರತೆ ಉಂಟಾಗುತ್ತದೆ ಮತ್ತು ವಿಷೇಶವಾಗಿ ಮಹಿಳೆಯರಲ್ಲಿ ಮೂಳೆ ಮುರಿತದ ಅಪಾಯವನ್ನು ಹೆಚ್ಚಿಸುತ್ತದೆ.
6. ವಯಸ್ಸಿಗೆ ಸಂಭಂದಿಸಿದ ದೃಷ್ಟಿ ನಷ್ಟ ಅಪಾಯವನ್ನು ಕಡಿಮೆ ಮಾಡುತ್ತದೆ –  ದೃಷ್ಟಿ ನಷ್ಟವನ್ನು ಉಂಟುಮಾಡುವ, ವಿಶೇಷವಾಗಿ ಕೇಂದ್ರ ದೃಷ್ಟಿಯ ಮೇಲೆ ಪರಿಣಾಮ ಬೀರುವ ಕಪ್ಪು ಕಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
7. ಹೋಮೋಸಿಸ್ಟೈನ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಹೀಗಾಗಿ ಹೃದಯದ ಆರೋಗ್ಯಕ್ಕೆ ಸಹಾಯ ಮಾಡುತ್ತದೆ- ರಕ್ತದಲ್ಲಿ ಹೆಚ್ಚಿನ ಮಟ್ಟದ ಹೋಮೋಸಿಸ್ಟೈನ್ ರಕ್ತನಾಳಗಳಲ್ಲಿ ಕೊಬ್ಬು ಶೇಖರಣೆಗೆ ಕಾರಣವಾಗುತ್ತದೆ ಮತ್ತು ಹೀಗಾಗಿ ಹೃದಯರಕ್ತನಾಳಗಳ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.
8. ದೇಹದ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ
9. ಆರೋಗ್ಯಕರ ಚರ್ಮ, ಕೂದಲು ಮತ್ತು ಉಗುರುಗಳಿಗೆ ಸಹಾಯ ಮಾಡುತ್ತದೆ
ವಿಟಮಿನ್ ಬಿ 12 ನ ಕೊರತೆ – ವಿಟಮಿನ್ ಬಿ 12 ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇಲ್ಲದಿದ್ದಾಗ ಅಥವಾ ದೇಹವು ಅದನ್ನು ಆಹಾರದಿಂದ ಹೀರಿಕೊಳ್ಳದಿದ್ದಾಗ, ಈ ಕೊರತೆ ಉಂಟಾಗುತ್ತದೆ. ಸಸ್ಯಹಾರಿಗಾಳಲ್ಲಿ ಈ ಕೊರತೆಯ ಅಪಾಯ ಹೆಚ್ಚಾಗಿರುತ್ತದೆ.

ವಿಟಮಿನ್ ಬಿ 12 ನ ಕೊರತೆ ಕಾರಣಗಳು:
1. ಆಹಾರ ಕಡಿಮೆ ಸೇವಿಸುವುದು
2. ರೋಗ ಗಳು – ವಾಯು ಸಂಭದಿತ, ಕ್ರೋನ್ಸ ಕಾಯಿಲೆ (Crohn’s disease)
3. ವಾಯು ಸಂಭಂದಿತ ಕರುಳಿನ ಶಸ್ತ್ರ ಚಿಕಿತ್ಸೆಗಳು
4. ಧೀರ್ಘಕಾಲದ ಮಧ್ಯಸೇವನೆ

ವಿಟಮಿನ್ ಬಿ 12 ನ ಕೊರತೆ ರೋಗಲಕ್ಷಣಗಳು:
1. ಸುಸ್ತು ಮತ್ತು ಆಯಾಸ
2. ಬಾಯಿ ಹುಣ್ಣು
3. ತೂಕ ಇಳಿಕೆ
4. ಹಸಿವು ಕಡಿಮೆ ಅಗುವುದು
5. ಹಳದಿ ಬಣ್ನದ ಚರ್ಮ
6. ದೃಷ್ಟಿ ಮಾಂದ್ಯತೆ
7.ಖಿನ್ನತೆ
8.ಕೆರಳಿಕೆ
9. ಏಕಾಗ್ರತೆಯ ಕೊರತೆ, ಗೊಂದಲ
10. ಸಮತೋಲನ ಸಮಸ್ಯೆ (ಅಸ್ಥಿರ ನಡಿಗೆ)
11. ದೇಹದ ಅಂಗ ಗಳ ಮರಗಟ್ಟುವಿಕೆ
12. ಕೈ ಮತ್ತು ಕಾಲು ಜೋಮು ಹಿಡಿಯುವುದು


ವಿಟಮಿನ್ ಬಿ 12 ರ ಪ್ರಾಣಾಂತಿಕ ಗುಣಗಳು :
ವಿಟಮಿನ್ ಬಿ 12 ರ ಹೆಚ್ಚಿನ ಸೇವನೆಯಿಂದ ಯಾವುದೇ ಪ್ರತಿಕೂಲ ಪರಿಣಾಮಗಳು ಉಂಟಾಗುವುದಿಲ್ಲ. ಏಕೆಂದರೆ ದೇಹವು ಅಗತ್ಯವಾದ ಪ್ರಮಾಣದ ವಿಟಮಿನ್ ಅನ್ನು ಇರಿಸಿಕೊಂಡಿರುತ್ತದೆ ಮತ್ತು ಹೆಚ್ಚುವರಿಯನ್ನು ಮೂತ್ರದ ರೂಪದಲ್ಲಿ ಹೊರಹಾಕುತ್ತದೆ. ಅದರೆ ದೊಡ್ಡ ಪ್ರಮಾಣದಲ್ಲಿ ಸೇವಿಸಿದಾಗ ವಿರಳವಾಗಿ ಕೆಲವರಿಗೆ ಹಾನಿ ಮಾಡುತ್ತದೆ.
ಬಿಸಿ ಮಾಡುವುದು ವಿಟಮಿನ್ ಬಿ 12 ರ ಮೇಲೆ ಪರಿಣಾಮ ಬೀರುತ್ತದೆಯೇ?
ಬಿಸಿ ಮಾಡುವುದರಿಂದ ವಿಟಮಿನ್ ಬಿ 12 ನಾಶವಾಗುವುದಿಲ್ಲ. ಆದರೇ ಮೈಕ್ರೊವೇವ್ ನಲ್ಲಿ ಮತ್ತೆ ಮತ್ತೆ ಬಿಸಿ ಮಾಡುವುದರಿಂದ ಅದರ ಬಲ ಕಡಿಮೆ ಆಗಬಹುದು. ಆದುದರಿಂದ ಆಹಾರವನ್ನು ಪದೇ ಪದೇ ಬಿಸಿ ಮಾಡುವುದನ್ನು ತಪ್ಪಿಸಬೇಕು.
Dr C P Ravikumar

Dr C P Ravikumar

CONSULTANT – PEDIATRIC NEUROLOGY
Aster CMI Hospital, Bangalore