Dr C P Ravikumar

ವಿಟಮಿನ್ ಬಿ 5 ಕೊರತೆ

ಪ್ಯಾಂಟೊಥೆನಿಕ್ ಎಂಬ ಪದವು ಗ್ರೀಕ್ ಪದ “ಪ್ಯಾಂಟೋಸ್”ನಿಂದ ಬಂದಿದ್ದು, “ಎಲ್ಲೆಡೆಯಿಂದ” ಎಂಬುದು ಇದರರ್ಥ. ವಿಟಮಿನ್ ಬಿ5 ಅಥವಾ ಪ್ಯಾಂಟೊಥೆನಿಕ್ ಆಮ್ಲವು (pantothenic acid) ಬಹುತೇಕ ಎಲ್ಲಾ ಆಹಾರಗಳಲ್ಲಿಯೂ ಸ್ವಲ್ಪ ಪ್ರಮಾಣದಲ್ಲಿಯಾದರೂ ಲಭ್ಯವಿರುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ಪ್ಯಾಂಟೊಥೆನಿಕ್, ನಮ್ಮ ದೇಹದಲ್ಲಿನ ಕೊಬ್ಬು ಮತ್ತು ಕಾರ್ಬೋಹೈಡ್ರೇಟ್‌ಗಳ ಚಯಾಪಚಯ ಕ್ರಿಯೆಯಲ್ಲಿ (metabolism) ನೆರವಾಗುತ್ತದೆ. ಈ ಮೂಲಕ ದೇಹದ ಬೆಳವಣಿಗೆ ಮತ್ತು ಅಂಗಾಗಳನ್ನು ಸರಿಪಡಿಸುವುದು/ಸುಸ್ಥಿತಿಗೆ ತರುವುದು ಸೇರಿದಂತೆ ಅನೇಕ ದೈಹಿಕ ಕಾರ್ಯಗಳನ್ನು ನಿರ್ವಹಿಸಲು ಅಗತ್ಯವಾದ ಶಕ್ತಿ ಉತ್ಪಾದನೆಯಲ್ಲಿ ಸಹಾಯ ಮಾಡುತ್ತದೆ.


ದಿನನಿತ್ಯ ಬೇಕಾಗುವ ಪ್ರಮಾಣ:


ಶಿಫಾರಸು ಮಾಡಲಾದ ವಿಟಮಿನ್ ಬಿ5 ದೈನಂದಿನ ಪ್ರಮಾಣ


ವಯಸ್ಸುಪುರುಷಮಹಿಳೆಗರ್ಭಿಣಿಯರುಸ್ತನ್ಯಪಾನ ಮಾಡಿಸುವ ಮಹಿಳೆಯರು
0 ರಿಂದ  6 ತಿಂಗಳು1.7 mg1.7 mg  
7–12 ತಿಂಗಳು1.8 mg1.8 mg  
1–3 ವರ್ಷ2 mg2 mg  
4–8 ವರ್ಷ3 mg3 mg  
9–13 ವರ್ಷ4 mg4 mg  
14–18 ವರ್ಷ5 mg5 mg6 mg7 mg
19 ವರ್ಷಮೇಲ್ಪಟ್ಟವರು5 mg5 mg6 mg7 mg


ವಿಟಮಿನ್ ಬಿ5ನ ಆಹಾರ ಮೂಲಗಳು

ನೈಸರ್ಗಿಕ ಮೂಲಗಳು

  • ಕೋಳಿ, ಸಮುದ್ರದಲ್ಲಿ ಜಲಚರಗಳ ಮಾಂಸ ಮತ್ತು ಅಂಗಗಳ ಮಾಂಸ
  • ಮೊಟ್ಟೆ ಮತ್ತು ಹಾಲು
  • ಅಣಬೆ,ಅವಕಾಡೊ, ಆಲೂಗಡ್ಡೆ ಮತ್ತು ಕೋಸುಗಡ್ಡೆಯಂತಹ ತರಕಾರಿಗಳು
  • ಗೋಧಿ, ಕಂದು, ಅಕ್ಕಿ ಮತ್ತು ಓಟ್ಸ್ ನಂತಹ ಧಾನ್ಯಗಳು
  • ಕಡಲೆಕಾಯಿ, ಸೂರ್ಯಕಾಂತಿ ಬೀಜಗಳು ಮತ್ತು ಕಡಲೆಬೇಳೆ


ಭಾರತದಲ್ಲಿ, ವಿಟಮಿನ್ ಬಿ 5 ಈ ಕೆಳಗಿನ ಆಹಾರಗಳಲ್ಲಿ ಸಮೃದ್ಧವಾಗಿರುತ್ತದೆ

  • ಪನೀರ್ ಮತ್ತು ಮೊಸರು
  • ಜೋಳ, ಸಜ್ಜೆ ಮತ್ತು ರಾಗಿ
  • ಹೆಸರುಕಾಳು, ತೊಗರು ಬೇಳೆ, ಉದ್ದಿನ ಕಾಳು ಮತ್ತು ಕಡಲೇ ಬೇಳೆ


ವಿಟಮಿನ್ ಬಿ 5 ನ ಪೂರಕಗಳು

ಧಾನ್ಯಗಳು ಮತ್ತು ಪಾನೀಯಗಳು ಸೇರಿದಂತೆ ಹಲವಾರು ಆಹಾರಗಳನ್ನು ಬಲಪಡಿಸಲು ಪ್ಯಾಂಟೊಥೆನಿಕ್ ಆಮ್ಲವನ್ನು ಸೇರಿಸಲಾಗುತ್ತದೆ. ಇದು ಕೇವಲ ವಿಟಮಿನ್ ಬಿ5 ಪೂರಕ ರೂಪದಲ್ಲಿ ಅಥವಾ ಇತರ ಬಿ ಕಾಂಪ್ಲೆಕ್ಸ್ ವಿಟಮಿನ್‌ಗಳು ಮತ್ತು ಖನಿಜಗಳೊಂದಿಗೂ ಸಹ ಲಭ್ಯವಿದೆ. ಕೆಲವು ಪೂರಕಗಳಲ್ಲಿ ಪ್ಯಾಂಥೆಥೈನ್ (Pantetheine) ಅಥವಾ ಕ್ಯಾಲ್ಸಿಯಂ ಡಿ-ಪ್ಯಾಂಥೋಥೆನೇಟ್ (Calcium D – Pantothenate) ಇರುತ್ತದೆ.


ವಿಟಮಿನ್ ಬಿ 5 ಸೇವನೆಯಿಂದ ಆರೋಗ್ಯಕ್ಕಾಗುವ ಪ್ರಯೋಜನಗಳು

ದೇಹದಲ್ಲಿನ ಆಹಾರವನ್ನು ಸಂಶ್ಲೇಷಣೆಗೊಳಪಡಿಸಿ, (synthesis) ಅದು ಕೊಬ್ಬಿನಾಮ್ಲಗಳು ಮತ್ತು ಕೊಲೆಸ್ಟ್ರಾಲ್ ಗಳಾಗಿ ಒಡೆಯಲು ಕಾರಣವಾಗುವ ಕೋ-ಕಿಣ್ವ (COQ) ಮತ್ತು ಅಸಿಲ್ ಕ್ಯಾರಿಯರ್ (Acyl carrier) ಪ್ರೋಟೀನ್‌ಗಳನ್ನು ಉತ್ಪಾದಿಸಲು ದೇಹಕ್ಕೆ ವಿಟಮಿನ್ ಬಿ 5 ಅಗತ್ಯವಿರುತ್ತದೆ.

ನರ ಕೋಶಗಳ ನಡುವೆ ಸಂದೇಶ / ಸೂಚನೆ ನೀಡಲು ಅಗತ್ಯವಿರುವ ಸ್ಪಿಂಗೋಸಿನ್ (sphingosine) ಅನ್ನು ಉತ್ಪಾದಿಸಲು ಸಹ ಕಿಣ್ವ ನ ಅಗತ್ಯವಿದೆ.

ವಿಟಮಿನ್ ಬಿ, ರೋಗ್ಯಕರ ಚರ್ಮ ಮತ್ತು ಕೂದಲಿನ ಆರೈಕೆಯಲ್ಲಿ ಉತ್ತಮ ಫಲಿತಾಂಶಗಳನ್ನು ನೀಡುವುದರಿಂಧ ಅನೇಕ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿಯೂ ಸಹ ಇದನ್ನು ಬಳಸಲಾಗುತ್ತದೆ. ಮೊಡವೆ ಮತ್ತು ಕೂದಲು ಉದುರುವಿಕೆಯ ಚಿಕಿತ್ಸೆಯಲ್ಲಿ ಪ್ಯಾಂಟೊಥೆನಿಕ್ ಆಮ್ಲ ಮತ್ತು ವಿಟಮಿನ್ ಬಿ 5 ನ ಸಂಯುಕ್ತಗಳ (compound) ಬಳಕೆ ಸಾಮಾನ್ಯ.

ವಿಟಮಿನ್ ಬಿ 5 ರಕ್ತದಲ್ಲಿ ಲಿಪಿಡ್ ಮಟ್ಟವನ್ನು (bad cholesterol and triglycerides) ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆಯಾದರೂ, ಇದನ್ನು ಪೂರಕಗಳ ರೂಪದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದಾಗ ವೃದ್ಧಿಯಾಗುವ ಕೊಲೆಸ್ಟ್ರಾಲ್ ಅಥವಾ ಎಚ್‌ಡಿಎಲ್ ಮಟ್ಟದ  ಕುರಿತು ಮತ್ತಷ್ಟು ಸಂಶೋಧನೆಯ ಅಗತ್ಯವಿದೆ.


ವಿಟಮಿನ್ ಬಿ 5 ಕೊರತೆ

  • ಆಹಾರವನ್ನು ಬಿಸಿ ಮಾಡುವುದು, ಬೇಯಿಸುವುದು ಮತ್ತು ಸಂಸ್ಕರಿಸುವುದರಿಂದ ಅವುಗಳಲ್ಲಿನ ವಿಟಮಿನ್ ಬಿ 5 ಅಂಶವು ನಾಶವಾಗುತ್ತದೆ. ಇದು ನೀರಿನಲ್ಲಿ ಕರಗುವ ಗುಣವನ್ನು ಹೊಂದಿರುವುದರಿಂದ, ಅಡುಗೆ ನೀರಿನಲ್ಲಿ ಕರಗುತ್ತದೆ.
  • ದೇಹದಲ್ಲಿ ಪೌಷ್ಠಿಕಾಂಶದ ಕೊರತೆ ಉಂಟಾದಲ್ಲಿ, ವಿಟಮಿನ್ ಬಿ 5 ಕೊರತೆ ಉಂಟಾಗಬಹುದು.
  • ಆಹಾರವನ್ನು ಹೀರಿಕೊಳ್ಳುವ ಸಮಸ್ಯೆ, ಕರುಳು ಅಥವಾ ಯಕೃತ್ತಿನ ನ್ಯೂನತೆಗಳು ಸಹ ವಿಟಮಿನ್ ಬಿ 5 ಕೊರತೆಗೆ ಕಾರಣವಾಗಬಹುದು.


. ಆರಂಭಿಕ ಲಕ್ಷಣಗಳು

  • ಕೈ-ಕಾಲುಗಳ ಮರಗಟ್ಟುವಿಕೆ ಮತ್ತು ಸುಡುವಂತಹ ಅನುಭವ
  • ತಲೆನೋವು
  • ಆಯಾಸ
  • ಕಿರಿಕಿರಿ
  • ಚಡಪಡಿಕೆ
  • ನಿದ್ರಾಹೀನತೆ
  • ಅನೋರೆಕ್ಸಿಯಾದಿಂದಾಗಿ (anorexia) ಜಠರದಲ್ಲಿ ಸಮಸ್ಯೆ
Dr C P Ravikumar

Dr C P Ravikumar

CONSULTANT – PEDIATRIC NEUROLOGY
Aster CMI Hospital, Bangalore