Dr C P Ravikumar

ಕಾರ್ನಿಟೈನ್
ಕಾರ್ನಿಟೈನ್ (ಕಾರ್ನಿಟರ್ ಅಥವಾ ವಿಟಮಿನ್ ಬಿ 13), ಅಮೈನೋ ಆಮ್ಲಗಳಿಂದ ಉತ್ಪತ್ತಿಯಾಗುವ ವಿಟಮಿನ್ನಾಗಿದ್ದು, ದೇಹದ ಎಲ್ಲಾ ಜೀವಕೋಶಗಳಲ್ಲೂ ಕಂಡುಬರುತ್ತದೆ. ಮುಖ್ಯವಾಗಿ ಅಸ್ಥಿಪಂಜರ/ ಮೂಳೆ ಮತ್ತು ಹೃದಯದ ಸ್ನಾಯುಗಳಲ್ಲಿ ಶೇಖರವಾಗುತ್ತದೆ. ದೇಹವು ಕಾರ್ನಿಟೈನ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು,), ಎಲ್-ಕಾರ್ನಿಟೈನ್ (L-carnitine)ಎಂಬ ಸಕ್ರಿಯ ಅಣುವನ್ನು (active molecule) ನೀಡುತ್ತದೆ. ಮತ್ತೊಂದೆಡೆ, ಅಸಿಟೈಲ್-ಎಲ್-ಕಾರ್ನಿಟೈನ್ (acetyl-L-carnitine), ಮತ್ತು ಪ್ರೊಪಿಯೊನೈಲ್-ಎಲ್-ಕಾರ್ನಿಟೈನ್ (propionyl-L-carnitine) ಆಹಾರ ಪೂರಕಗಳಾಗಿಯೂ ಸಹ ಲಭ್ಯವಿದೆ.

ಕಾರ್ನಿಟೈನ್‌ನ ಸೇವನೆಯಿಂದಾಗುವ ಆರೋಗ್ಯಕ್ಕಾಗುವ ಲಾಭಗಳು
  1. ಇದು ಕೋಶಗಳ ಒಳಗಿನ ಕೊಬ್ಬಿನಾಮ್ಲದ ಜೀರ್ಣಕ್ರಿಯೆಗೆ ಸಹಾಯ ಮಾಡುವ ಮೂಲಕ ಶಕ್ತಿಯ ಉತ್ಪಾದನೆಗೆ ನೆರವಾಗುತ್ತದೆ.
2 ಶಕ್ತಿಯ ಉತ್ಪಾದನೆಯಲ್ಲಿ ಕಂಡು ಬರುವ ವಿಷಕಾರಿ ಉಪ-ಉತ್ಪನ್ನಗಳನ್ನು ಜೀವಕೋಶಗಳ ಹೊರಗೆ ಸಾಗಿಸುತ್ತದೆ.
  1. ನರಗಳ ಸಾಮರ್ಥ್ಯವನ್ನು ಸುಧಾರಿಸಲು ಮತ್ತು ಅವುಗಳ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  2. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
  3. ಹೃದಯರಕ್ತನಾಳದ ಕಾಯಿಲೆಯ ಚಿಕಿತ್ಸೆಯಲ್ಲಿ ಪೂರಕ ಪೌಷ್ಠಿಕಾಂಶವಾಗಿ ಬಳಸಲಾಗುತ್ತದೆ.
  4. ಅಲ್ಜೈಮರ್ ಕಾಯಿಲೆಯುಳ್ಳವರಲ್ಲಿ ಗ್ರಹಿಕಾ ಸಾಮರ್ಥ್ಯವನ್ನು ಸುಧಾರಿಸಿ ವಯೋಸಹಜವಾಗಿ ಉಂಟಾಗುವ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ.
  5. ಕ್ರೀಡಾಪಟುಗಳು ತಮ್ಮ ದೇಹದ ಕಾರ್ಯಕ್ಷಮತೆಯನ್ನು ಉತ್ತಮಪಡಿಸಿಕೊಳ್ಳಲು ಅಥವಾ ತೂಕ ಇಳಿಸಿಕೊಳ್ಳಲು ಇದನ್ನು ಬಳಸುತ್ತಾರೆ.
  6. ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

ಕಾರ್ನಿಟೈನ್ ನ ಆಹಾರ ಮೂಲಗಳು
  1. ಕೆಂಪು ಮಾಂಸ ಅಥವಾ ಕುರಿ ಮಾಂಸ
  2. ಹಾಲು ಮತ್ತು ಡೈರಿ ಉತ್ಪನ್ನಗಳು
  3. ಕೋಳಿ ಮಾಂಸ
  4. ಗೋಧಿ
  5. ತರಕಾರಿಗಳು
ಜೀವಕೋಶಗಳಿಗೆ 10% ಕ್ಕಿಂತ ಕಡಿಮೆ ಪೋಷಕಾಂಶಗಳು ಲಭ್ಯವಾದಾಗ ಕಾರ್ನಿಟೈನ್ ನ ಕೊರತೆ ಉಂಟಾಗುತ್ತದೆ.

ಇದಕ್ಕೆ ಕಾರಣಗಳು:
  1. ಕಾರ್ನಿಟೈನ್ ಅನ್ನು ಹೀರಿಕೊಳ್ಳುವ ಮತ್ತು ಅದರ ಸಂಯೋಜನೆಯಲ್ಲಿ ಅಡ್ಡಿಪಡಿಸುವ ಆನುವಂಶಿಕ ರೂಪಾಂತರಗಳಿಂದ ದೇಹದಲ್ಲಿ ಮೂಲ ಕಾರ್ನಿಟೈನ್ ಕೊರತೆಯು ಉಂಟಾಗುತ್ತದೆ. ಇದು 5 ವರ್ಷ ವಯಸ್ಸಿನ ಮಕ್ಕಳಲ್ಲಿ ಕಾರ್ಡಿಯೊಮಿಯೋಪತಿ (cardiomyopathy – ಹೃದಯದ ಸ್ನಾಯುವಿನ ಮೇಲೆ ಪರಿಣಾಮ ಬೀರುವ ಕಾಯಿಲೆ), ಅಸ್ಥಿಪಂಜರದ ಸ್ನಾಯು ದೌರ್ಬಲ್ಯ ಮತ್ತು ಹೈಪೊಗ್ಲಿಸಿಮಿಯಾ (hypoglycaemia – ರಕ್ತದಲ್ಲಿ ಗ್ಲೂಕೋಸ್ ಕೊರತೆ) ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದನ್ನು ಕಾರ್ನಿಟೈನ್ ದೋಷ ಎಂದೂ ಸಹ ಕರೆಯುತ್ತಾರೆ.
  1. ಕಾರ್ನಿಟೈನ್ ಕೊರತೆಗೆ ಕಾರಣವಾಗುವ ಅಂಶಗಳು
  • ಕಡಿಮೆ ಪ್ರಮಾಣದ ಪೌಷ್ಠಿಕಾಂಶ ಆಹಾರ ಸೇವನೆ, ಅಪೌಷ್ಟಿಕತೆ ಅಥವಾ ಜೀರ್ಣಕ್ರಿಯೆಗೆ ಸಂಬಂಧಿಸಿದ ಕಾಯಿಲೆಗಳು
  • ಯಕೃತ್ತಿನ ಕಾಯಿಲೆಗಳು ಅಥವಾ ದೀರ್ಘಕಾಲದ ಮೂತ್ರಪಿಂಡದ ಸಮಸ್ಯೆ (ಇದು ಕಾರ್ನಿಟೈನ್ ಅಂಶವನ್ನು ಪೂರ್ಣ ಪ್ರಮಾಣದಲ್ಲಿ ಹೀರಿಕೊಳ್ಳಲು ಸಾಧ್ಯವಾಗದೆ ಹೊರಹಾಕುತ್ತದೆ)
  • ಮಧುಮೇಹದಂತಹ ಅಂತಃಸ್ರಾವಕ ನ್ಯೂನತೆಗಳು
  • ಸೆಪ್ಸಿಸ್ (Sepsis)
  • ಕಾರ್ಡಿಯೊಮಿಯೋಪತಿ(Cardiomyopathy)
  • ವಯೋಸಹಜವಾಗಿ
  • ಕಾರ್ಬಮಾಜೆಪೈನ್, ಫೆನಿಟೋಯಿನ್ ಮತ್ತು ಫಿನೊಬಾರ್ಬಿಟಲ್ (carbamazepine, phenytoin and phenobarbital) ನಂತಹ ಔಷಧಿಗಳನ್ನು ಸೇವಿಸುವ ರೋಗಿಗಳಲ್ಲಿ ಕಾರ್ನಿಟೈನ್ ನ ಮಟ್ಟ ಕಡಿಮೆ ಇರುತ್ತದೆ. ಅಪಸ್ಮಾರ ಚಿಕಿತ್ಸೆಗಾಗಿ ವಾಲ್‌ಪ್ರೊಯೇಟ್‌ (valproate) ಸೇವಿಸುವ ರೋಗಿಗಳಲ್ಲಿ ಹೈಪರ್‌ಮೋಮೋನಿಯಾ (hyperammonaemia) ಸಮಸ್ಯೆ ಉಂಟಾಗಬಹುದು. ಇದು ಸಾಮಾನ್ಯವಾಗಿ ಲಕ್ಷಣ ರಹಿತವಾಗಿದ್ದರೂ, ಎನ್ಸೆಫಲೋಪತಿಗೆ (encephalopathy) ಕಾರಣವಾಗಬಹುದು. ಎನ್ಸೆಫಲೋಪತಿ ಸಮಸ್ಯೆಯುಳ್ಳವರಲ್ಲಿ ಹಸಿವು, ಆಲಸ್ಯ, ವೇಗದ ಅಥವಾ ನಿಧಾನಗತಿಯ ಉಸಿರಾಟ, ಕಿರಿಕಿರಿ ಯಂತಹ ನರವೈಜ್ಞಾನಿಕ ಸಮಸ್ಯೆ ಉಂಟಾಗಬಹುದು.
ಬಹುತೇಕ ಸಂದರ್ಭಗಳಲ್ಲಿ ಈ ಸಮಸ್ಯೆಗಳನ್ನು ಗುಣಪಡಿಸಬಹುದಾದರೂ, ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದಿದ್ದಲ್ಲಿ, ವ್ಯಕ್ತಿಯು ಕೋಮಾ ಸ್ಥಿತಿ ತಲುಪಿಬಿಡಬಹುದು. ದೀರ್ಘಕಾಲೀನ ವಾಲ್ಪ್ರೊಯಿಕ್ ಆಸಿಡ್ (valproic acid) ಚಿಕಿತ್ಸೆಯು ಕಾರ್ನಿಟೈನ್ ಕೊರತೆಯನ್ನು ಉಂಟು ಮಾಡುತ್ತದೆ ಹಾಗೂ ಇದು ಅಮೋನಿಯಾ ಮಟ್ಟ ಹೆಚ್ಚಾಗಲು ಕಾರಣವಾಗುತ್ತದೆ. ಹಾಗಾಗಿ, ಇಂತಹ ಸಂದರ್ಭಗಳಲ್ಲಿ ಲೆವೊಕಾರ್ನಿಟೈನ್ (Levocarnitine) ಪೂರಕ ಸೇವನೆಯು ಹೆಚ್ಚು ಸಹಾಯ ಮಾಡುತ್ತದೆ.

ದೇಹದಲ್ಲಿ ಕಾರ್ನಿಟೈನ್ ಕೊರತೆಯನ್ನು ಗುರುತಿಸುವುದು
ರಕ್ತ ಪರೀಕ್ಷೆ:
ಎ. ರಕ್ತದಲ್ಲಿನ ಕಾರ್ನಿಟೈನ್ ಮಟ್ಟವನ್ನು ನಿರ್ಧರಿಸಲು
ಬಿ. ಸ್ನಾಯುವಿಗೆ ಹಾನಿಯಾಗಿದೆಯೇ ಎಂಬುದನ್ನು ತಿಳಿಯಲು ಕ್ರಿಯೇಟೈನ್ ಕೈನೇಸ್ (creatine kinase) ಪರೀಕ್ಷೆ
ಸಿ. ಪಿತ್ತಜನಕಾಂಗದ ಹಾನಿ ತಿಳಿಯಲು ಪರೀಕ್ಷೆ
ಡಿ. ದೇಹದಲ್ಲಿ ವಿಷಕಾರಿ ಅಂಶವಿದೆಯೇ ಎಂಬುದನ್ನು ತಿಳಿಯಲು ಸೀರಮ್ ಅಮೋನಿಯಾ ಮಟ್ಟದ ಪರೀಕ್ಷೆ
  • ಮೂತ್ರ ಪರೀಕ್ಷೆ: ಕೀಟೋನ್‌ಗಳಿಗಾಗಿ (ಯಕೃತ್ತಿನಲ್ಲಿ ತಯಾರಾಗುವ ರಾಸಾಯನಿಕಗಳು)
  • ಆನುವಂಶಿಕ ಪರೀಕ್ಷೆ: ಕಾರ್ನಿಟೈನ್ ನ ಕೊರತೆಯನ್ನು ದೃಢೀಕರಿಸಲು
  • ಹೃದಯ ಪರೀಕ್ಷೆಗಳು: ಹೃದಯದ ಮೇಲೆ ಪರಿಣಾಮ ಉಂಟಾಗಿದೆಯೇ ಎಂಬುದನ್ನು ತಿಳಿಯಲು, ಎಕೋಕಾರ್ಡಿಯೋಗ್ರಫಿಯಂತಹ (echocardiography) ಪರೀಕ್ಷೆಗಳು
ಚಿಕಿತ್ಸೆ
ಕಾರ್ನಿಟೈನ್ ಕೊರತೆಯಿಂದ ಬಳಲುತ್ತಿರುವ ರೋಗಿಗಳಿಗೆ ಪೂರಕಗಳನ್ನು (supplements) ಒದಗಿಸುವುದರಿಂದ ಆರೋಗ್ಯ ಸುಧಾರಿಸುತ್ತದೆ ಹಾಗೂ ದೀರ್ಘಕಾಲದವರೆಗೆ ವಾಲ್ಪ್ರೊಯಿಕ್ ಆಮ್ಲದಂತಹ (valproic acid ) ಅಪಸ್ಮಾರ ವಿರೋಧಿ ಔಷಧಿಗಳನ್ನು ಸೇವಿಸುವ ರೋಗಿಗಳಲ್ಲಿ ಅಮೋನಿಯಾ ಮಟ್ಟ ಹೆಚ್ಚಾಗುವುದನ್ನು (hyperammonaemia, ) ತಡೆಯಲು ಸಹಾಯ ಮಾಡುತ್ತದೆ. ಪುರಾವೆಗಳಿಲ್ಲ.

ಸೂಚನೆ: ಮೇಲೆ ನೀಡಲಾಗಿರುವ ಮಾಹಿತಿಯು ಶಿಕ್ಷಣ ಮತ್ತು ಅರಿವು ಮೂಡಿಸುವ ಉದ್ದೇಶಗಳಿಗಾಗಿ ಮಾತ್ರವೇ ಹೊರತು ಇದನ್ನು ಯಾವುದೇ ಸ್ಥಿತಿಯ ರೋಗನಿರ್ಣಯ ಅಥವಾ ಚಿಕಿತ್ಸೆಗೆ ಬಳಸಲಾಗುವುದಿಲ್ಲ. ಯಾವುದೇ ಅನುಮಾನ ಅಥವಾ ಪ್ರಶ್ನೆಗಳಿದ್ದಲ್ಲಿ ದಯವಿಟ್ಟು ವೈದ್ಯರನ್ನು ಭೇಟಿ ಮಾಡಿ

ಉಲ್ಲೇಖಗಳು/ ಆಕರ ಗ್ರಂಥಗಳು
  1. https://ods.od.nih.gov/factsheets/Carnitine-HealthProfessional/#:~:text=Animal%20products%20like%20meat%2C%20fish,is%20listed%20in%20Table%201.
  2. https://www.jns-journal.com/article/S0022-510X(15)01006-0/fulltext
  3. https://pubmed.ncbi.nlm.nih.gov/9280630/

ಹಿಂದಿನ ಲಿಂಕ್ ಗಳು
  1. Antiepileptic medications : https://pubmed.ncbi.nlm.nih.gov/10904975/

ಆಂತರಿಕ ಲಿಂಕ್ ಗಳು
  1. EEG – anchor text to blog post on electroencephalography
Dr C P Ravikumar

Dr C P Ravikumar

CONSULTANT – PEDIATRIC NEUROLOGY
Aster CMI Hospital, Bangalore