Dr C P Ravikumar

ಎಂಆರ್‌ಐ ಅಥವಾ ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ ಒಂದು ರೋಗನಿರ್ಣಯ ಸಾಧನವಾಗಿದ್ದು, ದೊಡ್ಡ ಮ್ಯಾಗ್ನೆಟ್ ಮತ್ತು ರೇಡಿಯೊ ತರಂಗಗಳನ್ನು ಬಳಸಿ ದೇಹದಲ್ಲಿ ದೃಶ್ಯೀಕರಿಸಲು ಸಾಧ್ಯವಿರುವ ಆಂತರಿಕ ಅಂಗಗಳು ಮತ್ತು ರಚನೆಗಳ ಸೆರೆಹಿಡಿದು ಸ್ಕ್ಯಾನ್‌ಗಳನ್ನು ನೀಡುತ್ತದೆ. ತೊಂದರೆಗೊಳಪಟ್ಟ ಅಸ್ಥಿರಜ್ಜುಗಳು, ರೋಗ ಸೂಚಿಸುವ ಗೆಡ್ಡೆಗಳು, ವಿವಿಧ ಕಾಯಿಲೆಗಳು ಅಥವಾ ಕಾಯಿಲೆಗಳ ಲಕ್ಷಣಗಳನ್ನು ತಿಳಿದುಕೊಳ್ಳಲು ಮತ್ತು ಮೆದುಳಿನ ಪರಿಸ್ಥಿತಿಗಳು, ಬೆನ್ನುಹುರಿ ಮತ್ತು ಇತರ ಮೃದು ಅಂಗಾಂಶಗಳಂತಹ ನರವೈಜ್ಞಾನಿಕ ಕಾಯಿಲೆಗಳನ್ನು ಪತ್ತೆಹಚ್ಚಲು ಇದು ಸಹಕಾರಿಯಾಗಿದೆ ಎಂದು ಸಾಬೀತಾಗಿದೆ. ಎಂ ಆರ್ ಐ ನ ಮುಖ್ಯ ಪ್ರಯೋಜನವೆಂದರೆ, ಇದು ಅಯಾನೀಕರಿಸುವ ವಿಕಿರಣವನ್ನು ಬಳಸುವುದಿಲ್ಲ. ಆದ್ದರಿಂದ, ಇದನ್ನು ಎಕ್ಸರೆ ಅಥವಾ ಸಿಟಿ ಸ್ಕ್ಯಾನ್‌ಗಳಿಗಿಂತ ಸೂಕ್ತವೆಂದು ಅದರಲ್ಲೂ ವಿಶೇಷವಾಗಿ ಮಕ್ಕಳಲ್ಲಿ ಸುರಕ್ಷಿತವೆಂದು ಪರಿಗಣಿಸಲಾಗಿದೆ.

ಕಾರ್ಯವಿಧಾನ ಮತ್ತು ವ್ಯಾಪ್ತಿ ಎಂಆರ್‌ಐ, ದೇಹದೊಳಗಿನ ಹೈಡ್ರೋಜನ್ ಪರಮಾಣುಗಳನ್ನು ಮರು ಜೋಡಿಸಲು ರೇಡಿಯೊಫ್ರೀಕ್ವೆನ್ಸಿ ಕಂಪನಗಳ ಜೊತೆಗೆ ದೊಡ್ಡದಾದ, ಬಲವಾದ ಕಾಂತಕ್ಷೇತ್ರವನ್ನು ಬಳಸುತ್ತದೆ. ಹೈಡ್ರೋಜನ್ ಪರಮಾಣುಗಳು ತಮ್ಮ ಸಾಮಾನ್ಯ ಜೋಡಣೆಗೆ ಮರಳಿದಂತೆ, ಅವು ಶಕ್ತಿಯನ್ನು ಹೊರಸೂಸುತ್ತವೆ. ಇದು ದೇಹದ ಅಂಗಾಂಶಗಳ ಪ್ರಕಾರವನ್ನು ಅವಲಂಬಿಸಿ ಬದಲಾಗುತ್ತದೆ. ಸ್ಕ್ಯಾನರ್ ಈ ಸಾಮರ್ಥ್ಯವನ್ನು ಸೆರೆಹಿಡಿದು, ಅದನ್ನು ಕಂಪ್ಯೂಟರ್-ರಚಿತ, ಎರಡು ಆಯಾಮದ ಚಿತ್ರಗಳು ಅಥವಾ ದೇಹ ಮತ್ತು ಅಂಗಗಳ ಅಡ್ಡ-ವಿಭಾಗದ ಚಿತ್ರಗಳಾಗಿ ಪರಿವರ್ತಿಸುತ್ತದೆ. ವಿಕಿರಣಶಾಸ್ತ್ರಜ್ಞರು, ಅಂಗ ಅಥವಾ ಅಂಗಾಂಶ ರಚನೆಯಲ್ಲಿ ಉಂಟಾಗುವ ಬದಲಾವಣೆಗಳು, ಊತ, ರಕ್ತಸ್ರಾವ, ಗೆಡ್ಡೆಗಳು, ಚೀಲಗಳು ಮುಂತಾದ ಸಮಸ್ಯೆಗಳ ಲಕ್ಷಣಗಳನ್ನು ತಿಳಿದುಕೊಳ್ಳಲು ಈ ಚಿತ್ರಗಳನ್ನು ವಿಶ್ಲೇಷಿಸುತ್ತಾರೆ. ಸೆರೆಹಿಡಿದ ಈ ಚಿತ್ರಗಳನ್ನು ಕಂಪ್ಯೂಟರ್ ಮಾನಿಟರ್‌ನಲ್ಲಿ ನೋಡಬಹುದು. ಇದಲ್ಲದೆ, ಇದನ್ನು ಎಲೆಕ್ಟ್ರಾನಿಕ್, ಮುದ್ರಿತ ಅಥವಾ ಸಿಡಿಗೆ ನಕಲಿಸಬಹುದು ಅಥವಾ ಡಿಜಿಟಲ್ ಕ್ಲೌಡ್ ಸರ್ವರ್‌ಗೆ ಅಪ್‌ಲೋಡ್ ಸಹ ಮಾಡಬಹುದು.
ಎಂಆರ್‌ಐ, ಉತ್ಪತ್ತಿಯಾಗುವ ಕಾಂತೀಯ ಕ್ಷೇತ್ರವು ವಿಭಿನ್ನ ಸಾಮರ್ಥ್ಯಗಳನ್ನು ಹೊಂದಿದ್ದು, ಇದನ್ನು “ಟೆಸ್ಲಾಸ್ (ಟಿ)” ಎಂದು ಕರೆಯಲಾಗುವ ಘಟಕಗಳಲ್ಲಿ ಅಳೆಯಲಾಗುತ್ತದೆ. ಸಾಮರ್ಥ್ಯಗಳು 1.5 ಟಿ ಮತ್ತು 3 ಟಿ ಆಗಿದ್ದು, 3 ಟಿ ಎಂಆರ್ಐ ಸ್ಕ್ಯಾನ್ 1.5 ಟಿ ಎಂಆರ್‌ಐ ಗಿಂತ ಹೆಚ್ಚು ಶಕ್ತಿಶಾಲಿ ಕಾಂತೀಯ ಕ್ಷೇತ್ರವನ್ನು ಹೊಂದಿರುತ್ತದೆ. ಸ್ಕ್ಯಾನ್ ಸಮಯದಲ್ಲಿ ಸೆರೆಹಿಡಿದ ಚಿತ್ರದ ಗುಣಮಟ್ಟವು ಕಾಂತೀಯ ಸಂಕೇತ ಮತ್ತು ಕ್ಷೇತ್ರದ ಶಕ್ತಿಯನ್ನು ಅವಲಂಬಿಸಿರುತ್ತದೆ. ಹಾಗಾಗಿ, 3 ಟಿ ಸ್ಕ್ಯಾನ್ ಸ್ಪಷ್ಟ ಮತ್ತು ಎದ್ದುಕಾಣುವ ಚಿತ್ರಗಳನ್ನು ವೇಗವಾಗಿ ಉತ್ಪಾದಿಸುವ ಮೂಲಕ ಸ್ಕ್ಯಾನ್ ಸಮಯವನ್ನು ಕಡಿಮೆ ಮಾಡುತ್ತದೆ. ಸಾಮಾನ್ಯವಾಗಿ, ಇದನ್ನು ಸಣ್ಣ ಮೂಳೆಗಳು, ಸ್ನಾಯು-ಅಸ್ಥಿಪಂಜರ, ಸ್ತನ ಮತ್ತು ನಾಳೀಯ ಸ್ಕ್ಯಾನ್‌ಗಳಲ್ಲಿ ವಿಶೇಷವಾಗಿ, ನರವೈಜ್ಞಾನಿಕ ಸ್ಕ್ಯಾನ್‌ಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.
ಆದಾಗ್ಯೂ, 3 ಟಿ ಯಂತ್ರಗಳು ಚಲನೆಯಲ್ಲಿ ನಿಮಿಷದ ವ್ಯತ್ಯಾಸಗಳನ್ನು ಸೆರೆಹಿಡಿಯುವ ಹಿಡಿಯುವ ಸಾಮರ್ಥ್ಯದಿಂದಾಗಿ ಹೆಚ್ಚು ಶಬ್ದ ಮತ್ತು ಶಾಖವನ್ನು ಸಹ ಸೃಷ್ಟಿಸುತ್ತವೆ ಮತ್ತು ಕೆಲವೊಮ್ಮೆ ದೇಹದಲ್ಲಿನ ರಕ್ತ ಮತ್ತು ದ್ರವದ ಚಲನೆಯಿಂದಾಗಿ ಹರಿವಿನ ಚಿತ್ರಗಳನ್ನು ಸಹ ಇದು ಸೆರೆಹಿಡಿಯಬಹುದು.

ಉಪಕರಣ ಎಂಆರ್‌ಐ ಯಂತ್ರವು ಗಾತ್ರದಲ್ಲಿ ದೊಡ್ಡದಾಗಿರುವುದರಿಂದ, ಸಾಮಾನ್ಯವಾಗಿ ಅದಕ್ಕೆಂದೇ ಮೀಸಲಾದ ಕೋಣೆಯಲ್ಲಿ ಇಡಲಾಗುತ್ತದೆ. ಇದು ಸ್ಲೈಡ್ ಸ್ಕ್ಯಾನಿಂಗ್ ಟೇಬಲ್‌ನ್ನು ಒಳಗೊಂಡಿದ್ದು, ಆ ಸ್ಥಳದಲ್ಲಿ ರೋಗಿಯು ಸ್ಕ್ಯಾನ್ ಗಾಗಿ ಮಲಗಬೇಕಾಗುತ್ತದೆ. ಈ ಸಮಯದಲ್ಲಿ ಟೇಬಲ್ ಸ್ಲೈಡ್ ಗಳು ಸ್ಕ್ಯಾನರ್ ಎಂಬ ದೊಡ್ಡ ಟ್ಯುನಲ್ (ಸುರಂಗ ರೀತಿಯ ಯಂತ್ರ) ಒಳಗೆ ಜಾರುತ್ತದೆ ಮತ್ತು ಕಾರ್ಯವಿಧಾನದ ನಂತರ ಸ್ಕ್ಯಾನರ್‌ನಿಂದ ಹೊರಹೋಗುತ್ತದೆ.

ಮುಚ್ಚಿದ v/s ತೆರೆದ (ಮುಕ್ತ) ಎಂ ಆರ್ ಐ ಈ ರೀತಿಯ ಎಂಆರ್‌ಐ ಸ್ಕ್ಯಾನಿಂಗ್ ನಲ್ಲಿ ಸ್ಲೈಡ್ ಟೇಬಲ್‌ನಲ್ಲಿ ಮಲಗಿರುವ ರೋಗಿಯನ್ನು ಟ್ಯುನಲ್ ಸುತ್ತುವರೆದಿರುತ್ತದೆ. ಸಾಮಾನ್ಯವಾಗಿ ಎಂಆರ್‌ಐ ಸ್ಕ್ಯಾನಿಂಗ್ ಗಳು 30 ರಿಂದ 90 ನಿಮಿಷಗಳವರೆಗೆ ಸಮಯ ತೆಗೆದುಕೊಳ್ಳುತ್ತವೆ. ಇದು ಸ್ಕ್ಯಾನ್ ನ ಪ್ರಕಾರವನ್ನು ಅವಲಂಬಿಸಿರುತ್ತದೆ. ಕ್ಲಾಸ್ಟ್ರೋಫೋಬಿಯಾ ಸಮಸ್ಯೆಯುಳ್ಳವರು ಮತ್ತು ಚಿಕ್ಕ ಮಕ್ಕಳು ಈ ರೀತಿಯ ಸ್ಕ್ಯಾನಿಂಗ್ ಗೆ ಒಳಪಡಲು ಹೆದರುತ್ತಾರೆ. ಅಲ್ಲದೆ, ಕ್ಯಾಪ್ಸುಲ್ ನ ಸ್ಥಳ ಕಿರಿದಾಗಿರುವುದರಿಂದ ಕೆಲವರು ಆತಂಕಗೊಳ್ಳಬಹುದು.
ರೋಗಿಯ ದೇಹವು ಚಲನೆಯಲ್ಲಿದ್ದಲ್ಲಿ ಚಿತ್ರಗಳನ್ನು ಸ್ಪಷ್ಟವಾಗಿ ಸೆರೆಹಿಡಿಯಲು ಸಾಧ್ಯವಾಗದಿರುವುದರಿಂದ/ ಮೂಡಿಬರದಿರುವುದರಿಂದ ಮತ್ತೆ ಮತ್ತೆ ಸ್ಕ್ಯಾನ್‌ಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದು ರೋಗಿಯು ಸ್ಕ್ಯಾನಿಂಗ್ ಟ್ಯುನಲ್ ನ ಒಳಗೆ ಕಳೆಯಬೇಕಾಗಿರುವ ಸಮಯವನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಎಂ ಆರ್ ಐ ನ ಕಿರಿದಾದ ಕ್ಯಾಪ್ಸುಲ್/ ಟ್ಯುನಲ್ ನಿಂದಾಗಿ ರೋಗಿಗಳಿಗೆ ಉಂಟಾಗುವ ಅಹಿತಕರ ಅನುಭವಗಳನ್ನು ಗಣನೆಗೆ ತೆಗೆದುಕೊಂಡು, ವೈದ್ಯಕೀಯ ಕ್ಷೇತ್ರದಲ್ಲಿ ಈಗ ವಿಶಾಲ ಬೋರ್ ಕ್ಯಾಪ್ಸುಲ್ ಎಂಆರ್‌ಐ ಗಳು ಮತ್ತು ಮುಕ್ತ ಎಂಆರ್‌ಐ ಗಳನ್ನು ಅಭಿವೃದ್ಧಿಪಡಿಸಲಾಗಿದೆ, ಇದು ಕೋಣೆಯ ಮೇಲ್ಭಾಗ ಮತ್ತು ಕೆಳಭಾಗದಲ್ಲಿರುವ ಆಯಸ್ಕಾಂತಗಳಿಂದ ಉತ್ಪತ್ತಿಯಾಗುವ ಕಾಂತೀಯ ಕ್ಷೇತ್ರಗಳನ್ನು ಬಳಸುತ್ತದೆ. ಸ್ಕ್ಯಾನಿಂಗ್ ಟೇಬಲ್ ಎಲ್ಲಾ ನಾಲ್ಕು ಬದಿಗಳಲ್ಲಿ ತೆರೆದಿರುವುದರಿಂದ ರೋಗಿಗಳ ಆತಂಕ ಕಡಿಮೆಯಾಗುತ್ತದೆ. ಆದಾಗ್ಯೂ, ತೆರೆದ ಎಂಆರ್‌ಐಗಳಲ್ಲಿ ಸೆರೆಹಿಡಿದ ಚಿತ್ರಗಳು ಸ್ಪಷ್ಟವಾಗಿ ಮೂಡಿಬರದಿರುವುದರಿಂದ ಇದರ ಬಳಕೆಯನ್ನು ಸೀಮಿತಗೊಳಿಸಲಾಗಿದೆ. ಆದರೆ, ಆರೋಗ್ಯಸ್ಥಿತಿಗಳ ನಿಖರ ರೋಗನಿರ್ಣಯ ಅಗತ್ಯವಿದ್ದಲ್ಲಿ ಮುಚ್ಚಿದ ಎಂಆರ್‌ಐನಲ್ಲಿ ಸ್ಕ್ಯಾನ್‌ಗೆ ಒಳಗಾಗುವುದು ಮುಖ್ಯವಾಗುತ್ತದೆ. ಈ ಕಾರ್ಯವಿಧಾನವು ರೋಗಿಗಳನ್ನು ನಿದ್ರಾವಸ್ಥೆಗೆ ಪ್ರೇರೇಪಿಸುತ್ತದೆ ಆದರೆ, ಇದು ಸಣ್ಣ ಮಕ್ಕಳ ವಿಷಯದಲ್ಲಿ ವಿಶೇಷವಾಗಿ ಪ್ರಯೋಜನಕಾರಿ.

ಎಂಆರ್‌ಐ ಸಮಯದಲ್ಲಿ ರೊಗಿಯನ್ನು ಶಾಂತಸ್ಥಿತಿ ಅಥವಾ ನಿದ್ರಾವಸ್ಥೆಗೆ ತರಲು ನಿದ್ರಾಜನಕ ಔಷಧವನ್ನು ನೀಡುವುದು.
1. ಮಕ್ಕಳು ಎಂಆರ್‌ಐ ಸ್ಕ್ಯಾನ್‌ಗೆ ಒಳಗಾಗಲು ಹೆದರುತ್ತಾರೆ ಎಂಬುದು ಸತ್ಯವಾದ ಅಂಶ. ಆದ್ದರಿಂದ, ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸ್ಕ್ಯಾನಿಂಗ್ ಗೆ ಮಗುವನ್ನು ಮೊದಲೇ ಸಿದ್ಧಪಡಿಸುವುದು ಮುಖ್ಯ: ಅವೆಂದರೆ:
• ಮಗುವಿಗೆ ಸ್ಕ್ಯಾನಿಂಗ್ ನ ಕಾರ್ಯವಿಧಾನವನ್ನು ವಿವರಿಸುವುದು
• ಸ್ಕ್ಯಾನಿಂಗ್ ಯಂತ್ರವನ್ನು ನೋಡಲು ಅವರನ್ನು ಕರೆದೊಯ್ಯುವುದು
• ಮಕ್ಕಳು ಮಾತ್ರೆಗಳಿಗೆ ಹೇಗೆ ಸ್ಪಂದಿಸುತ್ತಾರೆ, ಅವರನ್ನು ನಿದ್ರಾವಸ್ಥೆಗೆ ತರಬೇಕೇ ಅಥವಾ ಬೇಡವೇ ಎಂದು ಪರೀಕ್ಷಿಸಲು ಅಣಕು ಸ್ಕ್ಯಾನ್‌ಗಳನ್ನು (ಸಿಮ್ಯುಲೇಶನ್‌ಗಳು) ನಡೆಸುವುದು
• ದೃಶ್ಯ-ಶ್ರವಣ ಸಾಧನಗಳನ್ನು ಬಳಸಿ ಮಗುವಿನ ಗಮನವನ್ನು ಬೇರೆಡೆ ಸೆಳೆದು ಪರಿಸ್ಥಿತಿಗೆ ಹೊಂದಿಕೊಳ್ಳಲು ಅವಕಾಶ ಮಾಡಿಕೊಡುವುದು
• ಸಾಮಾನ್ಯವಾಗಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ, ನಿದ್ರಾಜನಕವನ್ನು ಸೂಚಿಸಲಾಗುತ್ತದೆ. ಆದಾಗ್ಯೂ, ಮಗುವಿನ ವಯಸ್ಸು 5-7 ವರ್ಷಗಳ ನಡುವೆ ಇದ್ದು, ಅವರ ಸ್ಥಿರತೆ ಮತ್ತು ಸೂಚನೆಗಳನ್ನು ಪಾಲಿಸುವ ಸಾಮರ್ಥ್ಯವನ್ನು ಅವಲಂಬಿಸಿ, ನಿದ್ರಾಜನಕವನ್ನು ನೀಡುವ ಅಗತ್ಯ ಕಂಡು ಬರದಿರಬಹುದು.
• ಮಕ್ಕಳಿಗೆ ನಿದ್ರೆ ಬರಿಸಲು ಬಳಸುವ ಕೆಲವು ಔಷಧಿಗಳೆಂದರೆ: ಕ್ಲೋರಲ್ ಹೈಡ್ರೇಟ್, ಮಿಡಜೋಲಮ್, ಪೆಂಟೊಬಾರ್ಬಿಟಲ್, ಫೆಂಟನಿಲ್. ಇವುಗಳನ್ನು ಮಗುವಿಗೆ ನೇರವಾಗಿ ಬಾಯಿಗೆ ನೀಡಬಹುದು ಅಥವಾ ರಕ್ತನಾಳಕ್ಕೆ ನೀಡಬಹುದು. ಸಾಮಾನ್ಯವಾಗಿ ಈ ಔಷಧಿಗಳು ಕೆಲವು ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಾದರೂ, ಮಗುವು ಇಡೀ ದಿನ ನಿದ್ರಾವಸ್ಥೆಯಲ್ಲಿರಬಹುದು ಅಥವಾ ವರ್ತನೆಯಲ್ಲಿ ವ್ಯತ್ಯಾಸಗಳುಂಟಾಗಬಹುದು.

ಎಂಆರ್‌ಐ ಮೊದಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು:
ಮುನ್ನೆಚ್ಚರಿಕೆಗಳನ್ನು ಸೂಕ್ತವಾಗಿ ಅನುಸರಿಸಿದಲ್ಲಿ ಎಂಆರ್‌ಐಗಳು ಸಾಕಷ್ಟು ಸುರಕ್ಷಿತವಂತೂ ನಿಜ ಮತ್ತು ಯಾವುದೇ ದೀರ್ಘಾವಧಿಯ/ ಅಲ್ಪಾವಧಿಯ ನೋವು ಅಥವಾ ಇತರ ಅಡ್ಡಪರಿಣಾಮಗಳಿಗೆ ಕಾರಣವಾಗುವುದಿಲ್ಲ. ಸ್ಕ್ಯಾನರ್ ನ ಸುತ್ತಲಿನ ಕಾಂತಕ್ಷೇತ್ರವು ಲೋಹದ ವಸ್ತುಗಳನ್ನು ಆಕರ್ಷಿಸುವುದರಿಂದ, ತ್ವರಿತ ಬಲವು ಯಂತ್ರದ ಕಡೆಗಿನ ಚಲನೆಗೆ ಕಾರಣವಾಗಿ, ಜನರು ಅಥವಾ ವಸ್ತುಗಳನ್ನು ಅಪಾಯಕ್ಕೆ ದೂಡುತ್ತವೆ. ಆದ್ದರಿಂದ, ಸೆಲ್ ಫೋನ್ಗಳು, ನಾಣ್ಯಗಳ ಚೀಲಗಳು, ಹೇರ್ ಪಿನ್ಗಳು, ಗುಂಡಿಗಳು ಅಥವಾ ಜಿಪ್ಗಳು ಸೇರಿದಂತೆ ಯಾವುದೇ ಲೋಹೀಯ ವಸ್ತುಗಳನ್ನು ಸ್ಕ್ಯಾನಿಂಗ್ ಕೋಣೆಗೆ ತೆಗೆದುಕೊಂಡು ಹೋಗುವುದನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಆದ್ದರಿಂದ, ಸ್ಕ್ಯಾನ್‌ಗೆ ಮುಂಚಿತವಾಗಿ ರೋಗಿಗಳಿಗೆ ಸಾಮಾನ್ಯವಾಗಿ ಪ್ರತ್ಯೇಕ ನಿಲುವಂಗಿಗಳನ್ನು ನೀಡಲಾಗುತ್ತದೆ. ಮಗುವು ಶ್ರವಣ ಸಾಧನವನ್ನು ಧರಿಸಿದ್ದಲ್ಲಿ, ಅಥವಾ ದೇಹದ ಇತರೆ ಯಾವುದೇ ಭಾಗದಲ್ಲಿ ಲೋಹೀಯ ಇಂಪ್ಲಾಂಟ್, ಫಾಯಿಲ್ ಭಾಗಗಳು, ಕಟ್ಟುಪಟ್ಟಿಗಳು ಇತ್ಯಾದಿಗಳೊಂದಿಗೆ ಔಷಧಿಗಳ ಪ್ಯಾಚ್‌ಗಳನ್ನು ಹೊಂದಿದ್ದಲ್ಲಿ, ಮುಂಚಿತವಾಗಿಯೇ ಅದರ ಕುರಿತು ವೈದ್ಯರು ಅಥವಾ ಸ್ಕ್ಯಾನ್ ಮಾಡುವ ತಂತ್ರಜ್ಞರಿಗೆ ಸೂಕ್ತವಾದ ಮಾಹಿತಿ ಒದಗಿಸಬೇಕು. ಏಕೆಂದರೆ, ಅವು ವ್ಯತಿರಕ್ತ ಪರಿಣಾಮ ಬೀರುವ ಸೂಚನೆಗಳಾಗಿರಬಹುದು.

ಉಲ್ಲೇಖಗಳು
1. https://www.ismrm.org/resources/information-for-patients/
2. https://medlineplus.gov/mriscans.html
3. https://www.chp.edu/our-services/sedation-services/mri/sedation-during-mris
4. http://imagingpathways.health.wa.gov.au/index.php/imaging-pathways/paediatrics/general-magnetic-resonance-imaging#pathway
5. https://www.siemens-healthineers.com/siemens_hwem-hwem_ssxa_websites-context-root/wcm/idc/groups/public/@global/@imaging/@mri/documents/download/mdaw/mtyy/~edisp/techniques_in_pediatric_mri_tips_for_imaging_children-00012608.pdf
6. https://www.radiologyinfo.org/en/info.cfm?pg=pediatric-mri
7. https://www.independentimaging.com/mri-safe-infants-children/
Dr C P Ravikumar

Dr C P Ravikumar

CONSULTANT – PEDIATRIC NEUROLOGY
Aster CMI Hospital, Bangalore