Dr C P Ravikumar

ಜೊನಿಸಾಮೈಡ್

ಪೋಷಕರ ಅಥವಾ ರೋಗಿಯ ಮಾಹಿತಿ ಕೈಪಿಡಿ

 

ಡಾ ಸಿ ಪಿ ರವಿ ಕುಮಾರ್

ಸಲಹೆಗಾರ – ಪೀಡಿಯಾಟ್ರಿಕ್ ನ್ಯೂರಾಲಜಿ
MRCPCH, ಪೀಡಿಯಾಟ್ರಿಕ್ಸ್‌ನಲ್ಲಿ CCT (U.K.)

ಪೀಡಿಯಾಟ್ರಿಕ್ ಎಪಿಲೆಪ್ಸಿಯಲ್ಲಿ ಫೆಲೋ & ನರವಿಜ್ಞಾನ (ಲಂಡನ್)

ಬ್ರ್ಯಾಂಡ್ ಹೆಸರು:

ಮಾತ್ರೆ/ ಕ್ಯಾಪ್ಸುಲ್: ಜೋನಿಸೆಪ್, ಜೋನಿಮಿಡ್id

ಜೆನೆರಿಕ್ Vs ಬ್ರ್ಯಾಂಡೆಡ್ ಔಷಧಿಗಳು

ಜೋನಿಸಾಮೈಡ್, ಸಾಮಾನ್ಯ ಮತ್ತು ಫೋಕಲ್ ಅಪಸ್ಮಾರ ಎರಡನ್ನು ನಿಯಂತ್ರಿಸಲು ಬಳಸುವ ಔಷಧವಾಗಿದೆ.

ನನ್ನ ಮಗು ಈ ಔಷಧಿ ತೆಗೆದುಕೊಳ್ಳುವುದು ಏಕೆ ಮುಖ್ಯ?

ಫಿಟ್ಸ್ ಬರುವುದನ್ನು ಕಡಿಮೆ ಮಾಡಲು ಅಥವಾ ಸಂಪೂರ್ಣವಾಗಿ ತಡೆಯಲು ನಿಮ್ಮ ಮಗುವು ನಿಯಮಿತವಾಗಿ ಜೋನಿಸಾಮೈಡ್ ಔಷಧಿ ತೆಗೆದುಕೊಳ್ಳುವುದು ತುಂಬಾ ಮುಖ್ಯ.

ನಿಮ್ಮ ಮಗುವಿಗೆ ಜೋನಿಸಾಮೈಡ್ ನೀಡುವುದನ್ನು ದಿಢೀರನೆ ನಿಲ್ಲಿಸಬೇಡಿ. ಇದರಿಂದ ಮಗುವಿನ ಫಿಟ್ಸ್ ಹೆಚ್ಚಾಗಬಹುದು.

ಜೋನಿಸಾಮೈಡ್ ಯಾವ ರೂಪದಲ್ಲಿ ಲಭ್ಯವಿದೆ?

ಕ್ಯಾಪ್ಸುಲ್ ಮತ್ತು ಮಾತ್ರೆಗಳ ರೂಪದಲ್ಲಿ ಲಭ್ಯವಿದೆ.

ಜೋನಿಸಾಮೈಡ್ ಅನ್ನು ಯಾವಾಗ ನೀಡಬೇಕು?

ದಿನಕ್ಕೆ ಎರಡು ಬಾರಿ; ಬೆಳಿಗ್ಗೆ ಮತ್ತು ಸಂಜೆ. ಆದರೆ, ಕನಿಷ್ಟ 10-12 ಗಂಟೆಗಳ ಅಂತರದಲ್ಲಿ

ಉದಾಹರಣೆಗೆ, ಬೆಳಗ್ಗೆ 7 ರಿಂದ 8 ಗಂಟೆ ನಡುವೆ ಅಥವಾ ಸಂಜೆ 7 ರಿಂದ 8 ಗಂಟೆ ನಡುವಿನ ಸಮಯದಲ್ಲಿ ನೀಡಬಹುದು

ಪ್ರತಿದಿನ ನಿಗದಿತ ಸಮಯಕ್ಕೆ ಔಷಧಿ ನೀಡಬೇಕು. ಇದರಿಂದ ಔಷಧಿ ಕೊಡುವುದು ರೂಢಿಯಾಗಿ ಮರೆತು ಹೋಗುವ ಸಂಭವಗಳು ಕಡಿಮೆಯಾಗುತ್ತವೆ.

ಔಷಧಿ ಕೊಡುವುದನ್ನು ಮರೆತರೆ ಏನು ಮಾಡಬೇಕು?

ಮಾತ್ರೆಗಳು ಮತ್ತು ಕ್ಯಾಪ್ಸುಲ್: ಒಂದು ವೇಳೆ ನಿಮಗೆ ಆರು ಗಂಟೆಗಳ ಒಳಗಾಗಿ ನೆನಪಾದರೆ ನಿಮ್ಮ ಮಗುವಿಗೆ ತಪ್ಪಿ ಹೋದ ಡೋಸ್ ನೀಡಿ. ಆರು ಗಂಟೆಗಳ ನಂತರ ನೆನಪಾದರೆ ತಪ್ಪಿಹೋದ ಡೋಸ್ ನೀಡಬೇಡಿ. ನಿಯಮಿತವಾಗಿ ನಿಗದಿತ ಡೋಸ್ ನೀಡುವ ಸಮಯದವರೆಗೂ ಕಾಯಿರಿ.

ಯಾವುದೇ ಕಾರಣಕ್ಕೂ ಎರಡು ಡೋಸ್ ಜೋನಿಸಾಮೈಡ್ ನೀಡಬೇಡಿ

ಔಷಧಿಯ ಒಂದು ಡೋಸ್ ತೆಗೆದುಕೊಂಡ 30 ನಿಮಿಷಗಳ ಒಳಗೆ ನಿಮ್ಮ ಮಗು ವಾಂತಿ ಮಾಡಿಕೊಂಡರೆ ಮತ್ತೆ ಇನ್ನೊಂದು ಡೋಸ್ ನೀಡಿ; ಒಂದು ವೇಳೆ ಮಗು ಎರಡನೇ ಡೋಸ್ ತೆಗೆದುಕೊಂಡ 30 ನಿಮಿಷಗಳ ನಂತರ ವಾಂತಿ ಮಾಡಿಕೊಂಡರೆ ಮತ್ತೊಮ್ಮೆ ಅದನ್ನು ನೀಡುವುದು ಬೇಡ.

ಔಷಧಿಯ ಪ್ರಮಾಣ ಎಷ್ಟಿರಬೇಕು?

ನಿಮ್ಮ ಮಗುವಿಗೆ ಎಷ್ಟು ಪ್ರಮಾಣದಲ್ಲಿ ಜೋನಿಸಾಮೈಡ್ ನೀಡಬೇಕು ಎಂಬುದನ್ನು ವೈದ್ಯರು ನಿರ್ಧರಿಸುತ್ತಾರೆ. ನೀಡಬೇಕಾದ ಔಷಧಿಯ ಪ್ರಮಾಣವನ್ನು ಸಾಮಾನ್ಯವಾಗಿ ಔಷಧಿ ಚೀಟಿಯಲ್ಲಿ ಬರೆದಿರಲಾಗುತ್ತದೆ.

ಪ್ರಾರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಜೋನಿಸಾಮೈಡ್ ನೀಡಿ. ಕೆಲವು ದಿನಗಳು ಅಥವಾ ವಾರಗಳ ನಂತರ ಔಷಧಿಯ ಪ್ರಮಾಣವನ್ನು ಸ್ವಲ್ಪ ಸ್ವಲ್ಪವೇ ಹೆಚ್ಚಿಸುತ್ತಾ ಹೋಗಬೇಕಾಗುತ್ತದೆ. ನಿಮ್ಮ ವೈದ್ಯರ ಸಲಹೆಯನ್ನು ಪಾಲಿಸಿ. ಇದರಿಂದ ನಿಮ್ಮ ಮಗು ಔಷಧಿಗೆ ಹೊಂದಿಕೊಳ್ಳುತ್ತದೆ. ನಂತರ ಏನು ಮಾಡಬೇಕೆಂಬುದನ್ನು ನಿಮ್ಮ ವೈದ್ಯರು ವಿವರಿಸುತ್ತಾರೆ.

ಎಷ್ಟು ಔಷಧಿ ಕೊಡಬೇಕೆಂದು ನಿಮ್ಮ ವೈದ್ಯರು ಸೂಚಿಸುತ್ತಾರೋ ಅದನ್ನು ಪಾಲಿಸುವುದು ಮುಖ್ಯ.

ನಿಮ್ಮ ಮಗು ಫಿಟ್ಸ್ ನಿಂದ ಮುಕ್ತವಾದರೆ ಅಥವಾ ಯಾವುದೇ ಅಡ್ಡಪರಿಣಾಮಗಳು ಇಲ್ಲವೆಂದರೆ ಔಷಧಿಯ ಪ್ರಮಾಣ ಸರಿಯಾಗಿದೆ ಎಂದರ್ಥ

ಔಷಧಿಯನ್ನು ಹೇಗೆ ನೀಡಬೇಕು? “ಔಷಧಿಗಳನ್ನು ನೀಡುವುದು”

ಮಾತ್ರೆಗಳು: ಇದನ್ನು ಒಂದು ಲೋಟ ನೀರು, ಜ್ಯೂಸ್ ಅಥವಾ ಹಾಲಿನೊಂದಿಗೆ ನುಂಗಬೇಕು. ಅಥವಾ ಇವುಗಳನ್ನು ಪುಡಿಮಾಡಿ ನೀರು, ರಸ ಅಥವಾ ಸಣ್ಣ ಪ್ರಮಾಣದ ಮೊಸರಿನೊಂದಿಗೆ ಸೇವಿಸಬಹುದು.

ಕ್ಯಾಪ್ಸುಲ್: ನೀರು, ರಸ ಅಥವಾ ಸಣ್ಣ ಪ್ರಮಾಣದ ಮೊಸರಿನೊಂದಿಗೆ ಬೆರೆಸಿ ಸೇವಿಸಬಹುದು.

ಇದರಿಂದ ಏನಾದರೂ ಅಡ್ಡಪರಿಣಾಮಗಳಾಗುವ ಸಾಧ್ಯತೆ ಇದೆಯೇ?

ನಮ್ಮ ಮಕ್ಕಳ ಆರೋಗ್ಯ ಉತ್ತಮಪಡಿಸಲು ನಾವು ಔಷಧಿಗಳನ್ನು ಬಳಸುತ್ತೇವೆ. ಆದರೆ, ಕೆಲವೊಮ್ಮೆ ಅವು ಅನಗತ್ಯ ಪರಿಣಾಮಗಳನ್ನು(ಅಡ್ಡಪರಿಣಾಮಗಳು) ಉಂಟು ಮಾಡಬಹುದು

ನಿಮ್ಮನ್ನು ಚಿಂತೆಗೀಡುವ ಅಡ್ಡಪರಿಣಾಮಗಳು – ಸಾಮಾನ್ಯ

• ಮಗುವಿನ ಹಸಿವು ಕಡಿಮೆಯಾಗಬಹುದು ಮತ್ತು ಇದರಿಂದಾಗಿ ತೂಕ ಕಡಿಮೆಯಾಗುತ್ತದೆ

• ಜ್ವರ ಬರಬಹುದು. ಆದರೆ, ಸೋಂಕಿನಿಂದಾಗಿ ಅಲ್ಲ.

• ಅಸಹಜ ನಡಿಗೆ (ಅಟಾಕ್ಸಿಯಾ)

• ಬೆವರುವುದು ಕಡಿಮೆಯಾಗುತ್ತದೆ

ಯಕೃತ್ತಿನ ಕಾಯಿಲೆ: ಯಾವುದೇ ನಿಮ್ಮ ಮಗು ಪ್ರತಿ ಕೆಲವು ಗಂಟೆಗಳಿಗೊಮ್ಮೆ ಅನಾರೋಗ್ಯಕ್ಕೆ ಒಳಗಾಗಲು ಪ್ರಾರಂಭಿಸಿದರೆ, ಅಥವಾ ಹೊಟ್ಟೆ ನೋವು, ತುಂಬಾ ನಿದ್ರೆ, ಕಾಮಾಲೆ ಉಂಟಾದರೆ (ಚರ್ಮ ಅಥವಾ ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ) ಅಥವಾ ಸಾಮಾನ್ಯಕ್ಕಿಂತ ಹೆಚ್ಚು ಬಾರಿ ಫಿಟ್ಸ್ ಕಂಡು ಬರುತ್ತಿದ್ದರೆ, ಅವರನ್ನು ನಿಮ್ಮ ವೈದ್ಯರಿಗೆ ತೋರಿಸಿ ಅಥವಾ ನೇರವಾಗಿ ಆಸ್ಪತ್ರೆಗೆ ಕರೆದೊಯ್ಯಿರಿ.

ನೀವು ತಿಳಿದುಕೊಳ್ಳಬೇಕಾದ ಇತರ ಅಡ್ಡಪರಿಣಾಮಗಳು

ಮಗುವು ಜೋನಿಸಾಮೈಡ್ ತೆಗೆದುಕೊಳ್ಳಲು ಪ್ರಾರಂಭಿಸಿದ ಶುರುವಿನಲ್ಲಿ ಈ ಕೆಳಗಿನ ಅಡ್ಡಪರಿಣಾಮಗಳು ಉಂಟಾಗಬಹುದು. ದಿನಗಳು ಕಳೆದಂತೆ, ಸುಮಾರು ಒಂದು ವಾರವಾಗುವಷ್ಟರಲ್ಲಿ. ಅಥವಾ ಮಗುವಿನ ದೇಹ ಔಷಧಿಗೆ ಹೊಂದಿಕೊಂಡಂತೆ ಎಲ್ಲವು ಸರಿ ಹೋಗುತ್ತದೆ. ವೈದ್ಯರ ಸಲಹೆಯಂತೆ ಜೋನಿಸಾಮೈಡ್ ನೀಡುವುದನ್ನು ಮುಂದುವರೆಸಿ.

• ನಿಮ್ಮ ಮಗುವು ಅಸಹಜ ಎನಿಸುವಷ್ಟು ನಿದ್ರಿಸಬಹುದು ಅಥವಾ ಮಗುವಿನ ವರ್ತನೆಯಲ್ಲಿ ಬದಲಾವಣೆಗಳುಂಟಾಗಬಹುದು.

• ಮಗುವಿನ ಹಸಿವು ಕಡಿಮೆಯಾಗಬಹುದು ಮತ್ತು ವಾಕರಿಕೆಯ ಸಂವೇದನೆ ಅಥವಾ ವಾಂತಿ ಉಂಟಾಗಬಹುದು. ಪ್ರಾರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಔಷಧಿಯನ್ನು ಆಹಾರದೊಂದಿಗೆ ನೀಡಿ, ಕ್ರಮೇಣ ಹೆಚ್ಚಿಸುತ್ತಾ ಹೋದಲ್ಲಿ ಈ ಸಮಸ್ಯೆ ಕಡಿಮೆಯಾಗುತ್ತದೆ.

• ತಲೆತಿರುಗುವಿಕೆ

• ಅಪರೂಪವಾಗಿ, ಈ ಔಷಧ ಸೇವನೆಯು ಮೂತ್ರಪಿಂಡದಲ್ಲಿ (ಕಿಡ್ನಿ) ಕಲ್ಲುಗಳು ಉಂಟಾಗಲು ಕಾರಣವಾಗಬಹುದು. ದಯವಿಟ್ಟು ನಿಮ್ಮ ಮಗುವಿಗೆ ಸಾಕಷ್ಟು ನೀರು ಕುಡಿಯುವಂತೆ ಮಾಡುವ ಮೂಲಕ ಚೆನ್ನಾಗಿ ನಿರ್ಜಲೀಕರಣವಾಗದಂತೆ ನೋಡಿಕೊಳ್ಳಿ.

• ಮಾನಸಿಕ ಅಡಚಣೆಗಳು ಉಂಟಾಗಬಹುದು. ಅದರಲ್ಲೂ, ವಿಶೇಷವಾಗಿ ಈಗಾಗಲೇ ಮಾನಸಿಕ ಆರೋಗ್ಯ ಸಮಸ್ಯೆಗಳಿರುವ ವಯಸ್ಕರಲ್ಲಿ ಈ ಅಪಾಯ ಹೆಚ್ಚು.

ಮಗುವಿಗೆ ದದ್ದುಗಳು ಉಂಟಾದಲ್ಲಿ, ತಕ್ಷಣ ಔಷಧ ನೀಡುವುದನ್ನು ನಿಲ್ಲಿಸಿ ವೈದ್ಯರ ಸಲಹೆ ಪಡೆಯಿರಿ.

ಕೆಲವೊಮ್ಮೆ, ಈ ಮೇಲೆ ಪಟ್ಟಿ ಮಾಡಿದ ಅಡ್ಡಪರಿಣಾಮಗಳನ್ನು ಹೊರತುಪಡಿಸಿ ಇತರೆ ಅಡ್ಡಪರಿಣಾಮಗಳು ಸಹ ಉಂಟಾಗಬಹುದು. ಅಂತಹ ಅಸಾಮಾನ್ಯವಾದುದು ನಿಮ್ಮ ಗಮನಕ್ಕೆ ಬಂದರೆ ಮತ್ತು ಈ ಕುರಿತು ನಿಮಗೆ ಯಾವುದೇ ಅನುಮಾನಗಳಿದ್ದಲ್ಲಿ,/ ಆತಂಕವಿದ್ದಲ್ಲಿ, ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಮೇಲಿನ ಅಡ್ಡಪರಿಣಾಮಗಳನ್ನು ಹೊರತುಪಡಿಸಿ, ಜೋನಿಸಾಮೈಡ್ ಉತ್ತಮ ಅಪಸ್ಮಾರ ನಿರೋಧಕ ಔಷಧಿಯಾಗಿದ್ದು, ಮತ್ತು ಸೆಳೆತಗಳು ಉಂಟಾಗುವ ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಇದನ್ನು ಬಳಸಲಾಗುತ್ತದೆ ಮತ್ತು ಅದರ ಪರಿಣಾಮಕಾರಿತ್ವವು ಅನುಮಾನಾಸ್ಪದವಾಗಿ ಸಾಬೀತಾಗಿದೆ.

ಜೋನಿಸಾಮೈಡ್ ನೀಡುವ ಸಮಯದಲ್ಲಿ ಇತರೆ ಸಾಮಾನ್ಯ ಔಷಧಿಗಳನ್ನು ನೀಡಬಹುದೇ?

• ಪ್ಯಾರಾಸಿಟಮೆಲ್ ಅಥವಾ ಇಬುಪ್ರೊಫೆನ್‌ವುಳ್ಳ ಔಷಧಿಗಳು, ಆಂಟಿಬಯಾಟಿಕ್ಸ್ ಅಥವಾ ಇತರೆ ಸಾಮಾನ್ಯ ಔಷಧಿಗಳನ್ನು ನಿಮ್ಮ ಮಗುವಿಗೆ ನೀಡಬಹುದು. ಆದರೆ, ಪ್ರತಿಜೀವಕ ಅಂಶಗಳನ್ನೊಳಗೊಂಡ ಔಷಧಿ ಮತ್ತು ಮೆಡಿಕಲ್ ಸ್ಟೋರ್ ನಲ್ಲಿ ಕೊಂಡ ಇತರೆ ಔಷಧಿಗಳನ್ನು ನೀಡುವ ಮುನ್ನ ವೈದ್ಯರ ಸಲಹೆ ಪಡೆಯಿರಿ.

• ನಿಮ್ಮ ಮಗುವಿಗೆ ಬೇರೆ ಔಷಧಿಗಳನ್ನು ನೀಡುವ ಮೊದಲು ನಿಮ್ಮ ವೈದ್ಯರನ್ನೊಮ್ಮೆ ಸಂಪರ್ಕಿಸಿ. ಅದು ಗಿಡಮೂಲಿಕೆ ಅಥವಾ ಪೂರಕ ಔಷಧಿಗಳಾಗಿದ್ದರೂ, ವೈದ್ಯರ ಸಲಹೆ ಇಲ್ಲದೆ ಮುಂದುವರೆಯಬೇಡಿ.

• ಅಪಸ್ಮಾರಕ್ಕೆ ಚಿಕಿತ್ಸೆ ನೀಡಲು ಬಳಸುವ ಇತರೆ ಔಷಧಿಗಳು, ಜೋನಿಸಾಮೈಡ್ ನಷ್ಟೇ ಉತ್ತಮವಾಗಿ ಕಾರ್ಯ ನಿರ್ವಹಿಸಬಹುದು ಅಥವಾ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು. ಅಡ್ಡಪರಿಣಾಮಗಳ ಬಗ್ಗೆ ನಿಮಗೆ ಆತಂಕವಾದರೆ ಅಥವಾ ನಿಮ್ಮ ಮಗುವಿಗೆ ಹೆಚ್ಚು ಬಾರಿ ಫಿಟ್ಸ್ ಬರುತ್ತಿದ್ದರೆ, ವೈದ್ಯರನ್ನು ಸಂಪರ್ಕಿಸಿ.

ಔಷಧಿಯನ್ನು ಎಲ್ಲಿ ಸಂರಕ್ಷಿಸಿ ಇಡಬೇಕು?

ಔಷಧಿಯನ್ನು…

• ಸೂರ್ಯನ ಕಿರಣ ಮತ್ತು ಉಷ್ಣತೆಯಿಂದ ದೂರವಿರುವಂತೆ ಕಬೋರ್ಡ್ ನಲ್ಲಿ ಇಡಿ. ಇದನ್ನುಫ್ರಿಡ್ಜ್ ನಲ್ಲಿ ಇಡುವ ಅವಶ್ಯಕತೆ ಇಲ್ಲ.

• ಮಕ್ಕಳ ಕಣ್ಣಿಗೆ ಕಾಣಿಸದಂತೆ ಅಥವಾ ಅವರ ಕೈಗೆಟುಕದಂತೆ ನೋಡಿಕೊಳ್ಳಿ.

• ತಂದ ಬಾಕ್ಸ್ ನಲ್ಲಿಯೇ ಇಡಿ.

ಸಂಪೂರ್ಣ ಮಾಹಿತಿಗಾಗಿ ಉತ್ಪಾದಕರ ಮಾಹಿತಿ ಕೈಪಿಡಿಯನ್ನು ನೋಡಿ.

References :

1. IAP Drug Formulary Web Update 2020(3) Edition 58, https://www.iapdrugformulary.com/Home
2. Consumer Medicines Information (CMI), https://www.tga.gov.au/consumer-medicines-information-cmi
3. British National Formulary for Children (BNFC)
4. Food and Drug Administration, USA https://www.fda.gov

Dr C P Ravikumar

Dr C P Ravikumar

CONSULTANT – PEDIATRIC NEUROLOGY
Aster CMI Hospital, Bangalore