Dr C P Ravikumar

ಆಕ್ಸ್‌ಕಾರ್ಬಜೆಪಿನ್

ಪೋಷಕರ ಅಥವಾ ರೋಗಿಯ ಮಾಹಿತಿ ಕೈಪಿಡಿ

डॉ। सी पी रवि कुमार

सलाहकार – बाल चिकित्सा न्यूरोलॉजी

MRCPCH, CCT in Paediatrics (U.K.)

Fellow in Paediatric Epilepsy &

Neurology (London)

ಬ್ರ್ಯಾಂಡ್ ಹೆಸರುಗಳು:

ಮಾತ್ರೆ: ಒಕ್ಸ್ಟೆಲ್, ಜೆನೊಕ್ಸಾ, ವಿನ್ಲ್ಯಾಪ್

ಸಿರಪ್: ವಿನ್ಲ್ಯಾಪ್, ಜೆನೊಕ್ಸಾ

ನಿಧಾನಗತಿಯ ಬಿಡುಗಡೆ: ಒಕ್ಸ್ಟೆಲ್ ಎಕ್ಸ್ ಆರ್, ಜೆನೊಕ್ಸಾ ಎಸ್ ಆರ್

ಜೆನರಿಕ್ Vs ಬ್ರ್ಯಾಂಡೆಡ್ ಔಷಧಿಗಳು

ಆಕ್ಸ್ ಕಾರ್ಬಜೆಪಿನ್ ಔಷಧಿಯು ಸೆಳೆತದ ಚಿಕಿತ್ಸೆಯಲ್ಲಿ ಬಳಸುವ ಔಷಧವಾಗಿದ್ದು, ಫೊಕಲ್ ಫಿಟ್ಸ್ ನ ನಿಯಂತ್ರಣದಲ್ಲಿ ಪ್ರಮುಖವಾಗಿ ಉಪಯೋಗಿಸಲಾಗುತ್ತದೆ. ಇದು ಕಾರ್ಬಮಜೈಪನ್ ಮತ್ತು ಎಸ್ಲಿಕಾರ್ಬಜೈಪನ್ ಔಷಧಿಗಳ ಕುಟುಂಬಕ್ಕೆ ಸೇರಿದೆ. ಈ ಎರಡು ಔಷಧಿಗಳ ಸೇವನೆಯಿಂದ ನಿಮಗೆ ಯಾವುದೇ ಅಡ್ಡಪರಿಣಾಮಗಳು ಉಂಟಾಗಿದ್ದಲ್ಲಿ, ಆಕ್ಸ್ ಕಾರ್ಬಜೈಪನ್ ಅನ್ನು ಸಹ ತೆಗೆದುಕೊಳ್ಳದಿರಿ, ಬಲವಾದ ಕಾರಣವಿದ್ದಲ್ಲಿ ಮಾತ್ರ, ಈ ಔಷಧಿಯನ್ನು ಸೇವಿಸಿ. ಅದಕ್ಕೂ ಮುನ್ನ ನಿಮ್ಮ ವೈದ್ಯರೊಂದಿಗೆ ಚರ್ಚಿಸಿ, ಸಲಹೆ ಪಡೆಯಿರಿ.

ಇದು ಕಾರ್ಬಮಜೈಪನ್ ಮತ್ತು ಎಸ್ಲಿಕಾರ್ಬಜೈಪನ್ ನ ಸಹೋದರ ಔಷಧವೆಂದೇ ಹೇಳಬಹುದು. ಆದರೆ, ಚರ್ಮ ಅಲರ್ಜಿಯು ಈ ಕುಟುಂಬದ ಔಷಧಿಗಳ ದೊಡ್ಡ ಅಡ್ಡಪರಿಣಾಮ (ಸ್ಟೀವನ್ ಜಾನ್ಸನ್ ಸಿಂಡ್ರೋಮ್). ನೂತನವಾಗಿ ಕಂಡು ಹಿಡಿಯಲಾಗಿರುವ ಔಷಧಿಗಳಲ್ಲಿ ಈ ಅಡ್ಡಪರಿಣಾಮದ ತೀವ್ರತೆ ಕಡಿಮೆಯಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ನನ್ನ ಮಗು ಈ ಔಷಧಿ ತೆಗೆದುಕೊಳ್ಳುವುದು ಏಕೆ ಮುಖ್ಯ?

ಫಿಟ್ಸ್ ಬರುವುದನ್ನು ಕಡಿಮೆ ಮಾಡಲು ಅಥವಾ ಸಂಪೂರ್ಣವಾಗಿ ತಡೆಯಲು ನಿಮ್ಮ ಮಗುವು ಗ್ಯಾಬೆನ್ಟಿನ್

ಔಷಧಿ ತೆಗೆದುಕೊಳ್ಳುವುದು ತುಂಬಾ ಮುಖ್ಯ.

ಗ್ಯಾಬೆನ್ಟಿನ್ ನೀಡುವುದನ್ನು ದಿಢೀರನೇ ನಿಲ್ಲಿಸಬೇಡಿ, ಇದರಿಂದ ನಿಮ್ಮ ಮಗುವಿನ ಫಿಟ್ಸ್ ಇನ್ನಷ್ಟು ಹೆಚ್ಚಾಗಬಹುದು.

ಗ್ಯಾಬೆನ್ಟಿನ್ ಯಾವ ರೂಪದಲ್ಲಿ ಲಭ್ಯವಿದೆ?

ದ್ರವರೂಪ, ಮಾತ್ರೆಗಳು, ಮಾರ್ಪಾಡಿತ-ಬಿಡುಗಡೆ ಮಾತ್ರೆಗಳು (ಸೇವಿಸಿದ ನಂತರ ಔಷಧದ ಅಂಶವು ನಿಧಾನವಾಗಿ ರಕ್ತದಲ್ಲಿ ಸೇರಿಕೊಳ್ಳುತ್ತದೆ)

ಗ್ಯಾಬೆನ್ಟಿನ್ ಅನ್ನು ಯಾವಾಗ ನೀಡಬೇಕು?

ದಿನಕ್ಕೆ ಎರಡು ಬಾರಿ. ಬೆಳಗ್ಗೆ ಮತ್ತು ಸಂಜೆ ನೀಡಬಹುದು. ಆದರೆ, ಕನಿಷ್ಟ 10-12 ಗಂಟೆಗಳ ಅಂತರವಿರಲಿ.

ಉದಾಹರಣೆಗೆ, ಬೆಳಗ್ಗೆ 7 ರಿಂದ 8 ಗಂಟೆ ನಡುವೆ ಅಥವಾ ಸಂಜೆ 7 ರಿಂದ 8 ಗಂಟೆ ನಡುವಿನ ಸಮಯದಲ್ಲಿ ನೀಡಬಹುದು. ಕೆಲವೊಮ್ಮೆ ವೈದ್ಯರು ದಿನಕ್ಕೆ ಮೂರು ಬಾರಿ ಔಷಧಿ ನೀಡುವಂತೆ ಸೂಚಿಸಬಹುದು. ಅಂತಹ ಸಂದರ್ಭದಲ್ಲಿ ದಯವಿಟ್ಟು ನಿಮ್ಮ ವೈದ್ಯರ ಸಲಹೆಯನ್ನ ಅನುಸರಿಸಿ.

ಪ್ರತಿದಿನ ನಿಗದಿತ ಸಮಯಕ್ಕೆ ಔಷಧಿ ನೀಡಬೇಕು. ಇದರಿಂದ ಔಷಧಿ ಕೊಡುವುದು ರೂಢಿಯಾಗಿ ಮರೆತು ಹೋಗುವ ಸಂಭವಗಳು ಕಡಿಮೆಯಾಗುತ್ತವೆ.

ಔಷಧಿ ಕೊಡುವುದನ್ನುಮರೆತರೆ ಏನು ಮಾಡಬೇಕು?

ಮಾತ್ರೆಗಳು: ಒಂದು ವೇಳೆ ನಿಮಗೆ ಆರು ಗಂಟೆಗಳ ಒಳಗಾಗಿ ನೆನಪಾದರೆ ನಿಮ್ಮ ಮಗುವಿಗೆ ತಪ್ಪಿ ಹೋದ ಡೋಸ್ ನೀಡಿ. ಆರು ಗಂಟೆಗಳ ನಂತರ ನೆನಪಾದರೆ ತಪ್ಪಿಹೋದ ಡೋಸ್ ನೀಡಬೇಡಿ. ನಿಯಮಿತವಾಗಿ ನಿಗದಿತ ಡೋಸ್ ನೀಡುವ ಸಮಯದವರೆಗೂ ಕಾಯಿರಿ.

ಮಾರ್ಪಡಿಸಿದ ಔಷಧಿ: ನೀವು ಔಷಧಿ ನೀಡಲು ಮರೆತರೆ, ಮುಂದಿನ ಎಂಟು ಗಂಟೆಗಳಲ್ಲಿ ಯಾವುದೇ ಸಮಯದಲ್ಲಿ ನೀಡಬಹುದು. ಆದರೆ, ಈ ಸಮಯವು ಮೀರಿದರೆ, ನಿಯಮಿತವಾಗಿ ನಿಗದಿತ ಡೋಸ್ ನೀಡುವ ಸಮಯದವರೆಗೂ ಕಾಯಿರಿ.

ಯಾವುದೇ ಕಾರಣಕ್ಕೂ ಎರಡು ಡೋಸ್ ಗ್ಯಾಬೆನ್ಟಿನ್ ನೀಡಬೇಡಿ.

ಔಷಧಿಯ ಒಂದು ಡೋಸ್ ತೆಗೆದುಕೊಂಡ 30 ನಿಮಿಷಗಳ ಒಳಗೆ ನಿಮ್ಮ ಮಗುವು ವಾಂತಿ ಮಾಡಿಕೊಂಡರೆ ಇನ್ನೊಂದು ಡೋಸ್ ನೀಡಬೇಡಿ. ಒಂದು ವೇಳೆ ಮಗುವು ಔಷಧಿ ತೆಗೆದುಕೊಂಡ 30 ನಿಮಿಷಗಳ ನಂತರ ವಾಂತಿ ಮಾಡಿಕೊಂಡರೆ ಮತ್ತೊಮ್ಮೆ ಅದನ್ನು ನೀಡುವುದು ಬೇಡ.

ಔಷಧಿಯ ಪ್ರಮಾಣ ಎಷ್ಟಿರಬೇಕು?

ನಿಮ್ಮ ಮಗುವಿಗೆ ಎಷ್ಟು ಪ್ರಮಾಣದಲ್ಲಿ ಗ್ಯಾಬೆನ್ಟಿನ್ ನೀಡಬೇಕು ಎಂಬುದನ್ನು ವೈದ್ಯರು ನಿರ್ಧರಿಸುತ್ತಾರೆ. ನೀಡಬೇಕಾದ ಔಷಧಿಯ ಪ್ರಮಾಣವನ್ನು ಸಾಮಾನ್ಯವಾಗಿ ಔಷಧಿ ಚೀಟಿಯಲ್ಲಿ ಬರೆದಿರಲಾಗುತ್ತದೆ.

ಪ್ರಾರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಗ್ಯಾಬೆನ್ಟಿನ್ ನೀಡಿ.ಕೆಲವು ದಿನಗಳು ಅಥವಾ ವಾರಗಳ ನಂತರ ಔಷಧಿಯ ಪ್ರಮಾಣವನ್ನು ಸ್ವಲ್ಪ ಸ್ವಲ್ಪವೇ ಹೆಚ್ಚಿಸುತ್ತಾ ಹೋಗಬೇಕಾಗುತ್ತದೆ. ಇದಕ್ಕೆ ನಿಮ್ಮ ವೈದ್ಯರ ಸಲಹೆಯನ್ನು ಪಾಲಿಸಿ. ಇದರಿಂದ ನಿಮ್ಮ ಮಗು ಔಷಧಿಗೆ ಹೊಂದಿಕೊಳ್ಳುತ್ತದೆ. ನಂತರ ಏನು ಮಾಡಬೇಕೆಂಬುದನ್ನುನಿಮ್ಮ ವೈದ್ಯರು ವಿವರಿಸುತ್ತಾರೆ.

ಎಷ್ಟು ಔಷಧಿ ಕೊಡಬೇಕೆಂದು ನಿಮ್ಮ ವೈದ್ಯರು ಸೂಚಿಸುತ್ತಾರೋ ಅದನ್ನು ಪಾಲಿಸುವುದು ಮುಖ್ಯ

ನಿಮ್ಮ ಮಗು ಫಿಟ್ಸ್ ನಿಂದ ಮುಕ್ತವಾದರೆ ಅಥವಾ ಯಾವುದೇ ಅಡ್ಡಪರಿಣಾಮಗಳು ಇಲ್ಲವೆಂದರೆ ಔಷಧಿಯ ಪ್ರಮಾಣ ಸರಿಯಾಗಿದೆ ಎಂದರ್ಥ

ಔಷಧಿಯನ್ನು ಹೇಗೆ ನೀಡಬೇಕು?“ಔಷಧಿಗಳನ್ನು ನೀಡುವುದು”

ಮಾತ್ರೆಗಳು: ಇದನ್ನು ಒಂದು ಲೋಟ ನೀರು, ಜ್ಯೂಸ್ ಅಥವಾ ಹಾಲಿನೊಂದಿಗೆ ನುಂಗಬೇಕು. ಅಥವಾ ಇವುಗಳನ್ನು ಪುಡಿಮಾಡಿ ನೀರು ಅಥವಾ ರಸ ಅಥವಾ ಸಣ್ಣ ಪ್ರಮಾಣದ ಮೊಸರಿನೊಂದಿಗೆ ಸೇವಿಸಬಹುದು.

ದ್ರವಅಥವಾಸಿರಪ್: ಓರಲ್ಸಿರಿಂಜ್ ಅಥವಾಔಷಧಿಚಮಚದಿಂದಸರಿಯಾದಪ್ರಮಾಣದಔಷಧಿಯನ್ನುಅಳತೆಮಾಡಿಕೊಳ್ಳಿ. ಇದನ್ನುಔಷಧಿಅಂಗಡಿಗಳಲ್ಲಿಖರೀದಿಸಬಹುದು. ಅಡುಗೆಮನೆಯಲ್ಲಿಬಳಸುವಟೀಚಮಚವನ್ನುಬಳಸಬೇಡಿ. ಇದರಿಂದಸರಿಯಾದಅಳತೆಸಿಗುವುದಿಲ್ಲ.

ಇದರಿಂದಏನಾದರೂಅಡ್ಡಪರಿಣಾಮಗಳಾಗುವಸಾಧ್ಯತೆಇದೆಯೇ? “ಅಡ್ಡಪರಿಣಾಮಗಳು”

ನಮ್ಮಮಕ್ಕಳಆರೋಗ್ಯವನ್ನುಉತ್ತಮಗೊಳಿಸಲುನಾವುಔಷಧಿಗಳನ್ನುಬಳಸುತ್ತೇವೆ. ಆದರೆ, ಕೆಲವೊಮ್ಮೆಅವುಅನಗತ್ಯಪರಿಣಾಮಗಳನ್ನು (ಅಡ್ಡಪರಿಣಾಮಗಳು) ಉಂಟುಮಾಡಬಹುದು.

ನೀವು ಎಚ್ಚರವಹಿಸಬೇಕಾದ ಅಡ್ಡಪರಿಣಾಮಗಳು– ಅಪರೂಪ

ನಿಮ್ಮಮಗುವಿಗೆದೇಹದಲ್ಲಿದದ್ದುಗಳುಉಂಟಾದರೆ, ಔಷಧಿನೀಡುವುದನ್ನುನಿಲ್ಲಿಸಿಮತ್ತುತಕ್ಷಣವೈದ್ಯರಿಂದಸಲಹೆಪಡೆಯಿರಿ.

ನಿಮ್ಮ ಮಗುವಿಗೆ ದೇಹದಲ್ಲಿ ದದ್ದುಗಳು ಉಂಟಾದರೆ, ಔಷಧಿ ನೀಡುವುದನ್ನು ನಿಲ್ಲಿಸಿ ಮತ್ತು ತಕ್ಷಣ ವೈದ್ಯರಿಂದ ಸಲಹೆ ಪಡೆಯಿರಿ. ಮಗುವಿನ ಚರ್ಮದ ಮೇಲೆ ಗುಳ್ಳೆಗಳು ಅಥವಾ ಬಾಯಿ ಅಥವಾ ಜನನಾಂಗದಲ್ಲಿ ದದ್ದುಗಳು ಕಂಡು ಬಂದರೆ, ತಕ್ಷಣವೇ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ಕರೆದೊಯ್ಯಿರಿ.

ಯಕೃತ್ತಿನಕಾಯಿಲೆ: ಯಕೃತ್ತಿನಕಿಣ್ವಗಳ ಬಗ್ಗೆ ನಿಯಮಿತವಾಗಿ ಲಕ್ಷ್ಯವಿಡಬೇಕು. ಪಿತ್ತಜನಕಾಂಗದಲ್ಲಿ ಯಾವುದೇ ವ್ಯತ್ಯಾಸಗಳು ಕಂಡುಬಂದಲ್ಲಿ, ತಕ್ಷಣವೇ ಔಷಧಸೇವನೆಯನ್ನು ನಿಲ್ಲಿಸಬೇಕು. ನಿಮ್ಮ ಮಗು ಪ್ರತಿಕೆಲವು ಗಂಟೆಗಳಿಗೊಮ್ಮೆ ಅನಾರೋಗ್ಯಕ್ಕೆ ಒಳಗಾಗಲು ಪ್ರಾರಂಭಿಸಿದಲ್ಲಿ, ಅಥವಾ ಹೊಟ್ಟೆ ನೋವು, ತುಂಬಾ ನಿದ್ರೆ, (ಚರ್ಮ ಅಥವಾ ಕಣ್ಣುಗಳು ಹಳದಿ ಬಣ್ಣಕ್ಕೆತಿರುಗುತ್ತವೆ) ಅಥವಾ ಕಾಮಾಲೆ ಉಂಟಾದರೆ, ಸಾಮಾನ್ಯಕ್ಕಿಂತ ಹೆಚ್ಚು ಬಾರಿಫಿಟ್ಸ್ಗೆ ಒಳಗಾಗುತ್ತಿದ್ದಲ್ಲಿ, ಅವರನ್ನು ನಿಮ್ಮ ವೈದ್ಯರಿಗೆ ತೋರಿಸಿ ಅಥವಾ ನೇರವಾಗಿ ಆಸ್ಪತ್ರೆಗೆ ಕರೆದೊಯ್ಯಿರಿ.

ಇತರೆ ಅಡ್ಡಪರಿಣಾಮಗಳು

ಮಗುವು ಔಷಧಿಯನ್ನು ತೆಗೆದುಕೊಳ್ಳಲು ಪ್ರಾರಂಭಿಸಿದಾಗ ಈ ಅಡ್ಡಪರಿಣಾಮಗಳು. ಉಂಟಾಗಬಹುದು.

• ಹೊಟ್ಟೆನೋವು

• ಅಸಹಜ ನಡಿಗೆ, ವರ್ತನೆಯಲ್ಲಿ ಬದಲಾವಣೆ

• ನಿಮ್ಮ ಮಗು ಅಸಹಜ ಎನಿಸುವಷ್ಟು ನಿದ್ರಿಸಬಹುದು.

• ಮಗುವಿಗೆ ಕಡಿಮೆ ಹಸಿವು ಉಂಟಾಗಬಹುದು (ಹಸಿವು ಉಂಟಾಗದಿರಬಹುದು) ಮತ್ತು ವಾಕರಿಕೆ ಅಥವಾ ವಾಂತಿಯಾಗಬಹುದು. ಪ್ರಾರಂಭದಲ್ಲಿ ಆಹಾರದೊಂದಿಗೆ ಸಣ್ಣ ಪ್ರಮಾಣದಲ್ಲಿ ಔಷಧಿಯನ್ನು ನೀಡಿ. ದಿನಕಳೆದಂತೆ ಔಷಧಿಯ ಪ್ರಮಾಣವನ್ನು ಸ್ವಲ್ಪ ಸ್ವಲ್ಪವೇ ಹೆಚ್ಚಿಸುತ್ತಿದ್ದಲ್ಲಿ, ಕ್ರಮೇಣ ಈ ಸಮಸ್ಯೆಗಳನ್ನು ತಪ್ಪಿಸಬಹುದು.

ನಿಮ್ಮ ಮಗುವಿನ ದೇಹ ಔಷಧಿಗೆ ಹೊಂದಿಕೊಂಡಂತೆ ಇವು ಕಡಿಮೆಯಾಗುತ್ತವೆ. ಔಷಧಿ ತೆಗೆದುಕೊಂಡ ಒಂದು ವಾರದ ನಂತರವೂ ಸಮಸ್ಯೆಯಿದ್ದಲ್ಲಿ ಅಥವಾ ನಿಮಗೆ ಆತಂಕವಿದ್ದಲ್ಲಿ ವೈದ್ಯರನ್ನು ಸಂಪರ್ಕಿಸಿ.

ವೈದ್ಯರ ಸಲಹೆಯಂತೆ ಗ್ಯಾಬೆನ್ಟಿನ್ ನೀಡುವುದನ್ನು ಮುಂದುವರೆಸಿ.

ಕೆಲವೊಮ್ಮೆ, ಈ ಮೇಲೆ ಪಟ್ಟಿ ಮಾಡಿದ ಅಡ್ಡಪರಿಣಾಮಗಳನ್ನು ಹೊರತುಪಡಿಸಿ ಇತರೆ ಅಡ್ಡಪರಿಣಾಮಗಳು ಸಹ ಉಂಟಾಗಬಹುದು. ಅಂತಹ ಅಸಾಮಾನ್ಯವಾದುದು ನಿಮ್ಮ ಗಮನಕ್ಕೆ ಬಂದರೆ ಮತ್ತು ಈ ಕುರಿತು ನಿಮಗೆ ಯಾವುದೇ ಅನುಮಾನಗಳಿದ್ದಲ್ಲಿ,/ ಆತಂಕವಿದ್ದಲ್ಲಿ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಗ್ಯಾಬೆನ್ಟಿನ್ ನೀಡುವ ಸಮಯದಲ್ಲಿ ಇತರೆ ಸಾಮಾನ್ಯ ಔಷಧಿಗಳನ್ನು ನೀಡಬಹುದೇ?

• ಪ್ಯಾರಾಸಿಟಮೆಲ್ ಅಥವಾ ಇಬುಪ್ರೊಫೆನ್‌ವುಳ್ಳ ಔಷಧಿಗಳು, ಆಂಟಿಬಯಾಟಿಕ್ಸ್ ಅಥವಾ ಇತರೆ ಸಾಮಾನ್ಯ ಔಷಧಿಗಳನ್ನು ನಿಮ್ಮ ಮಗುವಿಗೆ ನೀಡಬಹುದು. ಆದರೆ, ಪ್ರತಿಜೀವಕ ಅಂಶಗಳನ್ನೊಳಗೊಂಡ ಔಷಧಿ ಮತ್ತು ಮೆಡಿಕಲ್ ಸ್ಟೋರ್ ನಲ್ಲಿ ಕೊಂಡ ಇತರೆ ಔಷಧಿಗಳನ್ನು ನೀಡುವ ಮುನ್ನ ವೈದ್ಯರ ಸಲಹೆ ಪಡೆಯಿರಿ.

• ನಿಮ್ಮ ಮಗುವಿಗೆ ಬೇರೆ ಔಷಧಿಗಳನ್ನು ನೀಡುವ ಮೊದಲು ನಿಮ್ಮ ವೈದ್ಯರನ್ನೊಮ್ಮೆ ಸಂಪರ್ಕಿಸಿ. ಅದು ಗಿಡಮೂಲಿಕೆ ಅಥವಾ ಪೂರಕ ಔಷಧಿಗಳಾಗಿದ್ದರೂ ವೈದ್ಯರ ಸಲಹೆ ಇಲ್ಲದೆ ಮುಂದುವರೆಯಬೇಡಿ.

• ಅಪಸ್ಮಾರಕ್ಕೆ ಚಿಕಿತ್ಸೆ ನೀಡಲು ಬಳಸುವ ಇತರೆ ಔಷಧಿಗಳು, ಗ್ಯಾಬೆನ್ಟಿನ್ ನ ಪರಿಣಾಮಕಾರಿ ಚಿಕಿತ್ಸೆ ಮೇಲೆ ಪರಿಣಾಮ ಬೀರಬಹುದುಅಥವಾ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು. ಅಡ್ಡಪರಿಣಾಮಗಳ ಬಗ್ಗೆ ನಿಮಗೆ ಆತಂಕವಾದರೆ ಅಥವಾ ನಿಮ್ಮ ಮಗುವಿಗೆ ಹೆಚ್ಚು ಬಾರಿ ಫಿಟ್ಸ್ ಬರುತ್ತಿದ್ದರೆ, ವೈದ್ಯರನ್ನ ಸಂಪರ್ಕಿಸಿ.

ಔಷಧಿಯನ್ನು ಎಲ್ಲಿ ಸಂರಕ್ಷಿಸಿ ಇಡಬೇಕು?

ಔಷಧಿಯನ್ನು…

• ಸೂರ್ಯನ ಕಿರಣ ಮತ್ತು ಉಷ್ಣತೆಯಿಂದ ದೂರವಿರುವಂತೆ ಕಬೋರ್ಡ್ ನಲ್ಲಿ ಇಡಿ. ಇದನ್ನುಫ್ರಿಡ್ಜ್ ನಲ್ಲಿ ಇಡುವ ಅವಶ್ಯಕತೆ ಇಲ್ಲ.

• ಮಕ್ಕಳ ಕಣ್ಣಿಗೆ ಕಾಣಿಸದಂತೆ ಅಥವಾ ಅವರ ಕೈಗೆಟುಕದಂತೆ ನೋಡಿಕೊಳ್ಳಿ.

• ತಂದ ಬಾಕ್ಸ್ ನಲ್ಲಿಯೇ ಇಡಿ. ಸಂಪೂರ್ಣ ಮಾಹಿತಿಗಾಗಿ ಉತ್ಪಾದಕರ ಮಾಹಿತಿ ಕೈಪಿಡಿಯನ್ನು ನೋಡಿ.

ಉಲ್ಲೇಖಗಳು:

  1. ಐಎಪಿ ಡ್ರಗ್ ಫಾರ್ಮುಲರಿ ವೆಬ್ ಅಪ್‌ಡೇಟ್ 2020 (3) ಆವೃತ್ತಿ 58, https://www.iapdrugformulary.com/Home
  2. ಗ್ರಾಹಕ ಔಷಧಿಗಳ ಮಾಹಿತಿ (ಸಿಎಮ್ಐ), https://www.tga.gov.au/consumer-medicines-information-cmi
  3. ಬ್ರಿಟಿಷ್ ಮಕ್ಕಳ ರಾಷ್ಟ್ರೀಯ ಫಾರ್ಮುಲರಿ (ಬಿಎನ್‌ಎಫ್‌ಸಿ)
  4. ಅಮೆರಿಕಾನ್ ಆಹಾರ ಮತ್ತು ಔಷಧಿಗಳ ಆಡಳಿತ, ಯುಎಸ್ಎ; https://www.fda.gov
Dr C P Ravikumar

Dr C P Ravikumar

CONSULTANT – PEDIATRIC NEUROLOGY
Aster CMI Hospital, Bangalore