Dr C P Ravikumar

ಬ್ರೈನ್ಚೈಲ್ಡ್ ಟ್ರಸ್ಟ್ ಬಗ್ಗೆ

ಬ್ರೈನ್‌ ಚೈಲ್ಡ್‌ ಟ್ರಸ್ಟ್‌ ಹುಟ್ಟಿದ್ದು 2018 ನೇ ಇಸವಿಯಲ್ಲಿ. ಹಲವು ಬಗೆಯ ನರರೋಗಗಳನ್ನು ಎದುರಿಸುತ್ತಿರುವ ಮಕ್ಕಳು ಹಾಗೂ ಅವರ ಕುಟುಂಬದವರಿಗೆ ಬೆಂಬಲವಾಗಿ ನಿಲ್ಲುವ ಒಂದು ವ್ಯವಸ್ಥೆಯನ್ನು ಹುಟ್ಟುಹಾಕಬೇಕು ಎನ್ನುವ ಉದ್ದೇಶದೊಂದಿಗೆ ಶುರುವಾದದ್ದೇ ಬ್ರೈನ್‌ ಚೈಲ್ಡ್‌ ಟ್ರಸ್ಟ್‌. ಡಾ. ರವಿ ಅವರು ತಮ್ಮ ವೃತ್ತಿಯಲ್ಲಿ, ಮಕ್ಕಳ ಒಟ್ಟಾರೆ ಏಳಿಗೆಗಾಗಿ ದೊರಕುತ್ತಿದ್ದ ಚಿಕಿತ್ಸೆ ಮತ್ತು ಮಕ್ಕಳ ಅಪ್ಪ ಅಮ್ಮಂದಿರಿಗೆ ಈ ಚಿಕಿತ್ಸೆಯ ಬಗ್ಗೆ ಅರಿವನ್ನು ಮೂಡಿಸುವುದರ ನಡುವೆ ಇದ್ದ ಕುಂದು ಕೊರತೆಗಳು ಯಾವುವೆಂದು ಚೆನ್ನಾಗಿ ತಿಳಿದುಕೊಂಡಿದ್ದರು. ಆರೋಗ್ಯದ ತೊಂದರೆಗಳೊಂದಿಗೆ ಹೋರಾಡುತ್ತಿರುವ ಈ ಮಕ್ಕಳನ್ನು ಪೂರ್ತಿಯಾಗಿ ವಾಸಿಮಾಡುವಂತಹ ಒಂದು ಏರ್ಪಾಟು ಆಗಬೇಕು ಎನ್ನುವುದಕ್ಕೆ ಅವರು ಒತ್ತು ನೀಡಿದರು. ಯಾವುದೇ ಬಗೆಯ ನರರೋಗದ ಬಿಗಿ ಹಿಡಿತದಿಂದ ಮಕ್ಕಳು ಬೇಗನೆ ಗುಣವಾಗಲು, ಬಹಳ ಒಳ್ಳೆಯ ಚಿಕಿತ್ಸೆಯನ್ನು ನೀಡುವ ಸಲುವಾಗಿ ಪರಿಣತರ ತಂಡ ಒಟ್ಟುಗೂಡಿ ಕೆಲಸ ಮಾಡುವಂತಹ ಒಂದು ಏರ್ಪಾಟು ಇರಬೇಕು ಎನ್ನುವುದು ಅವರ ಬಯಕೆಯಾಗಿತ್ತು.
ಈ ಕನಸನ್ನು ನನಸಾಗಿಸುವ ಪ್ರಯತ್ನವೇ ಈ ಟ್ರಸ್ಟ್‌. ಜಗತ್ತಿನೆಲ್ಲೆಡೆ ನರರೋಗಗಳಿಂದ ಬಳಲುತ್ತಿರುವ ಪುಟ್ಟ ಮಕ್ಕಳ ಬಾಳನ್ನು ಹಸನಾಗಿಸಲು ಈ ಟ್ರಸ್ಟ್‌ ಪಣ ತೊಟ್ಟಿದೆ. ಹಲವಾರು ನರರೋಗಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ಬೇಗನೆ ಚಿಕಿತ್ಸೆ ಶುರುಮಾಡುವುದರ ಲಾಭಗಳ ಬಗ್ಗೆ ತಿಳಿಸಿಕೊಡುವುದು ಪ್ರಮುಖ ಗುರಿಯಾಗಿದೆ. ಈ ಸಂಸ್ಥೆಯು, ಪೋಷಕರಿಗೆ ಸರಿಯಾದ ಮಾಹಿತಿ ನೀಡಿ, ಚಿಕಿತ್ಸೆಯ ವಿಧಾನಗಳ ಬಗ್ಗೆ ತಿಳಿಸಿಕೊಡುತ್ತದೆ. ಇದರಿಂದ ಪೋಷಕರಿಗೆ, ಈ ಸಂಸ್ಥೆಯಲ್ಲಿ ತಮ್ಮ ಮಕ್ಕಳಿಗೆ ಸರಿಯಾದ ಕಾಳಜಿ ಮತ್ತು ಚಿಕಿತ್ಸೆ ದೊರೆಯುತ್ತದೆ ಎಂಬ ನಂಬಿಕೆ ಮೂಡುತ್ತದೆ. ನೆರವು ಕೇಳಿಕೊಂಡು ಬರುವ ಪ್ರತಿಯೊಬ್ಬ ರೋಗಿಗೂ ಹುರುಪು ತುಂಬಿ, ಅವರ ತೊಂದರೆಯನ್ನು ಹೋಗಲಾಡಿಸಲು, ಡಾ. ರವಿ ಅವರ ಜೊತೆ ಹಲವಾರು ವರ್ಷಗಳ ಅನುಭವವಿರುವ ವೃತ್ತಿಪರರ ತಂಡವೇ ಇದೆ.

ಟ್ರಸ್ಟ್‌ನ ಬಗ್ಗೆ ಹೆಚ್ಚು ತಿಳಿದುಕೊಳ್ಳಲು https://brainchildtrust.com/ಗೆ ಲಾಗ್‌ ಆನ್‌ ಮಾಡಿ