Dr C P Ravikumar

ವಿಟಮಿನ್ E
ಪರಿಚಯ: ವಿಟಮಿನ್ E ಕೊಬ್ಬಿನಲ್ಲಿ ಕರಗುವ ಗುಣವುಳ್ಳ ಪೋಷಕಾಂಶವಾಗಿದ್ದು. ನಮ್ಮ ಶರೀರವು ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸಿದಾಗ ರೂಪುಗೊಳ್ಳುವ ಹಾನಿಕಾರಕ ಮುಕ್ತ ಅಣುಗಳ ವಿರುದ್ಧ ರಕ್ಷಣೆಗಾಗಿ ದೇಹವು ಇದನ್ನು ಬಳಸುತ್ತದೆ. ನಮ್ಮ ಪರಿಸರದಲ್ಲಿ, ಸಿಗರೇಟ್ ಹೊಗೆ, ನೇರಳಾತೀತ ಬೆಳಕು, ಇತರೆ ಹೊಗೆ ಮತ್ತು ವಾಯುಮಾಲಿನ್ಯದಲ್ಲೂ ಈ ಮುಕ್ತ ಅಣುಗಳು ಕಂಡುಬರುತ್ತವೆ ಮತ್ತು ಇವುಗಳಿಗೆ ಹೆಚ್ಚು ಒಡ್ಡಿಕೊಂಡಾಗ‌ ದೇಹವನ್ನು ಹಾನಿಗೊಳಲ್ಪಡುತ್ತವೆ. ವಿಟಮಿನ್ E ಅನ್ನು ಉತ್ಕರ್ಷಣ ನಿರೋಧಕ ಎಂದೂ ಸಹ ಕರೆಯುತ್ತಾರೆ ಮತ್ತು ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವ ಮೂಲಕ ಸೋಂಕುಗಳ ವಿರುದ್ಧ ಹೋರಾಡುತ್ತದೆ.

ಶರೀರಕ್ಕೆ ಅಗತ್ಯವಿರುವ ದೈನಂದಿನ ಪ್ರಮಾಣ:

ಜೀವನದ ವಿವಿಧ ಹಂತಗಳಲ್ಲಿ ಶಿಫಾರಸು ಮಾಡಲಾಗುವ ಪ್ರಮಾಣ
ಜನನದಿಂದ  6 ತಿಂಗಳುಗಳವರೆಗೆ 4 mg
ಶಿಶುಗಳು 7–12 ತಿಂಗಳು 5 mg
ಮಕ್ಕಳು 1–3 ವರ್ಷ 6 mg
ಮಕ್ಕಳು 4–8 ವರ್ಷ 7 mg
ಮಕ್ಕಳು 9–13 ವರ್ಷ 11 mg
ಹದಿಹರೆಯದವರು 14–18 ವರ್ಷ 15 mg
ವಯಸ್ಕರು 15 mg
ಹದಿಹರೆಯದ ಗರ್ಭಿಣಿಯರು ಮತ್ತು ಮಹಿಳೆಯರು 15 mg
ಹಾಲೂಡಿಸುವ (ಸ್ತನ್ಯಪಾನ) ಹದಿಹರೆಯದರು ಮತ್ತು ಮಹಿಳೆಯರು 19 mcg
ಮೂಲಗಳು
ಎ. ನೈಸರ್ಗಿಕ:
ವಿಟಮಿನ್ E ಯ ಆಹಾರ ಮೂಲಗಳು ಹೀಗಿವೆ:
1. ಸಸ್ಯಜನ್ಯ ಎಣ್ಣೆಗಳು: ಸೂರ್ಯಕಾಂತಿ, ಸೋಯಾ, ಹುರುಳಿ ಮತ್ತು, ಕಡಲೆಕಾಯಿ ಎಣ್ಣೆ
2. ಪಾಲಕ್ ಮತ್ತು ಕೋಸುಗಡ್ಡೆಯಂತಹ ಹಸಿರು ತರಕಾರಿಗಳು
3.ಬಾದಾಮಿ, ಮತ್ತು ಸೂರ್ಯಕಾಂತಿ ಬೀಜಗಳು

ಬಿ. ಪೂರಕಗಳು:
ವಿಟಮಿನ್ E, ಬಹು-ವಿಟಮಿನ್ ನ ಭಾಗವಾಗಿ ಅಥವಾ ಪ್ರತ್ಯೇಕವಾಗಿ ಶುದ್ಧ ವಿಟಮಿನ್ ಪೂರಕಗಳು, ಕ್ಯಾಪ್ಸುಲ್ಗಳು ಅಥವಾ ಹನಿಗಳ ರೂಪದಲ್ಲಿ ಲಭ್ಯವಿರಬಹುದು. ಆಹಾರದಲ್ಲಿ ಮತ್ತು ಪೂರಕಗಳಲ್ಲಿ 8 ವಿಧದ ವಿಟಮಿನ್ E ಸಂಯುಕ್ತಗಳಿದ್ದು, ಅವುಗಳಲ್ಲಿ ಸಾಮಾನ್ಯವಾದವು- ಆಲ್ಫಾ-ಟೊಕೊಫೆರಾಲ್.
ದೇಹದಲ್ಲಿ ಇರುವ ವಿಟಮಿನ್ E ಯ ಇತರ ರೂಪಗಳೆಂದರೆ, ಗಾಮಾ ಟೋಕೋಫೆರಾಲ್, ಟೊಕೊಟ್ರಿಯೆನಾಲ್ಗಳು ಮತ್ತು ಮಿಶ್ರ ಟೋಕೋಫೆರಾಲ್ಗಳು. ಅಡುಗೆ ಎಣ್ಣೆಗಳಂತಹ ಕೆಲವು ಆಹಾರಗಳನ್ನು ವಿಟಮಿನ್ E ಯೊಂದಿಗೆ ವರ್ಧಿಸಬಹುದು (ಪೌಷ್ಟಿಕಾಂಶ ಹೆಚ್ಚಳ). ಇದು ಪುನರುತ್ಪಾದನೆ ಮತ್ತು ಚರ್ಮದ ಗುಣಪಡಿಸುವಿಕೆಯನ್ನು ಸುಧಾರಿಸುವ ಸಾಮರ್ಥ್ಯದಿಂದಾಗಿ ಅನೇಕ ತ್ವಚೆ ಉತ್ಪನ್ನಗಳಲ್ಲಿಯೂ ಉಪಯೋಗಿಸಲ್ಪಡುತ್ತದೆ.

ವಿಟಮಿನ್ E ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳು ವಿಟಮಿನ್ E , ಮುಕ್ತ ಅಣುಗಳಿಂದದ ದೇಹದ ಜೀವಕೋಶಗಳು ಹಾನಿಯಾಗದಂತೆ ರಕ್ಷಿಸಲು ಉತ್ಕರ್ಷಣ ನಿರೋಧಕವಾಗಿ ಸಹಾಯ ಮಾಡುತ್ತದೆ. ಜೊತೆಗೆ, ಹೆಚ್ಚಿನ ಸಂಶೋಧನೆ ಅಗತ್ಯವಿದ್ಯಾಗೂ ಸಹ ಪ್ಲೇಟ್‌ಲೆಟ್ ಅಂಟಿಕೊಳ್ಳುವಿಕೆ ಅಥವಾ ಹೆಪ್ಪುಗಟ್ಟುವಿಕೆಯ ರಚನೆಯನ್ನು ತಡೆಯುವ ಸಾಮರ್ಥ್ಯದಿಂದಾಗಿ ಹೃದ್ರೋಗವನ್ನು ತಡೆಗಟ್ಟುವಲ್ಲಿ ವಿಟಮಿನ್ E ಪ್ರಯೋಜನಗಳನ್ನು ಹೊಂದಿದೆ ಎಂದು ಕೆಲವು ಅಧ್ಯಯನಗಳು ದೃಢಪಡಿಸಿವೆ.

ವಿಟಮಿನ್ E ಕೊರತೆ
ಎ. ಸೇವನೆ ಅಥವಾ ಸಂಯೋಜನೆ ಕಡಿಮೆಯಾದಾಗ ಉಂಟಾಗುವ ಪೌಷ್ಠಿಕಾಂಶದ ಕೊರತೆ ವಿಟಮಿನ್ E, ಕೊಬ್ಬಿನಲ್ಲಿ ಕರಗಬಲ್ಲ ಗುಣವನ್ನು ಹೊಂದಿರುವುದರಿಂದ ದೇಹದಲ್ಲಿ ಶೇಖರಣೆಯಾಗುತ್ತದೆ. ದೇಹದಲ್ಲಿ ಜೀರ್ಣಕ್ರಿಯೆ, ಹೀರಿಕೊಳ್ಳುವಿಕೆ ಅಥವಾ ಕೊಬ್ಬಿನ ಅಣುಗಳ ಧಾರಣಶಕ್ತಿ (ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ) ಕಡಿಮೆಯಾದಾಗ ದೇಹದಲ್ಲಿ ಕೊರತೆ ಉಂಟಾಗುತ್ತದೆ. ಉದಾಹರಣೆಗೆ, ಕ್ರೋನ್ಸ್ ಕಾಯಿಲೆ ಅಥವಾ ಸಿಸ್ಟಿಕ್ ಫೈಬ್ರೋಸಿಸ್ ಅಥವಾ ಪೌಷ್ಠಿಕಾಂಶದ ಆಹಾರದ ಕೊರತೆ.

ಬಿ. ಆನುವಂಶಿಕ ಅಂಶಗಳು
ಅಬೆಟಾಲಿಪೊಪ್ರೊಟಿನೆಮಿಯಾದಂತಹ ಅಪರೂಪದ ಕಾಯಿಲೆಗಳು ಸಹ ದೇಹದಲ್ಲಿ ಕೊಬ್ಬನ್ನು ಹೀರಿಕೊಳ್ಳುವ ಶಕ್ತಿಯ ಕುಗ್ಗುವಿಕೆಗೆ ಕಾರಣವಾಗುತ್ತವೆ. ಇದರಿಂದಾಗಿ, ವಿಟಮಿನ್ E ನಂತಹ ಜೀವಸತ್ವಗಳು ಕಡಿಮೆಯಾಗುತ್ತವೆ.
ಅವಧಿಗಗೆ ಮುಂಚೆ ಜನಿಸಿದ ಶಿಶುಗಳು ವಿಟಮಿನ್ E ಕೊರತೆಯನ್ನು ಹೊಂದಿರಬಹುದು. ಇದು ವರ್ಣದ್ರವ್ಯದ ರೆಟಿನೋಪತಿ ಮತ್ತು ದೃಷ್ಟಿಗೋಚರ ಕ್ಷೇತ್ರದ ಸಂಕೋಚನವನ್ನು ಉಂಟುಮಾಡುವ ಮೂಲಕ ಅವರ ದೃಷ್ಟಿ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

ವಿಟಮಿನ್ E ಕೊರತೆ:
1. ವಿಟಮಿನ್ E ಕೊರತೆಯು ದೇಹದ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ
2. ವಿಟಮಿನ್ E ಕೊರತೆಯು ನರಮಂಡಲದಲ್ಲಿ ಈ ಕೆಳಗಿನ ಸಮಸ್ಯೆಗಳಿಗೆ ಕಾರಣವಾಗಬಹುದು
• ಬಾಹ್ಯ ನರವ್ಯಾಧಿ: ನೋವು ಅಥವಾ ಜುಮ್ಮೆನಿಸುವಿಕೆ, ಮರಗಟ್ಟುವಿಕೆ ಅಥವಾ ಕೈಕಾಲುಗಳಲ್ಲಿ ಸಂವೇದನೆಯ ನಷ್ಟ
• ಅಟಾಕ್ಸಿಯಾ: ಸಮನ್ವಯ ಅಥವಾ ಸಮತೋಲನದ ಕೊರತೆ
• ಅಸ್ಥಿಪಂಜರ/ ಸ್ನಾಯುಗಳ ದೌರ್ಬಲ್ಯ: ಕ್ಷೀಣತೆ ಮತ್ತು ಸ್ನಾಯುಗಳ ದೌರ್ಬಲ್ಯ
• ದೃಷ್ಟಿ ಮೇಲೆ ಪರಿಣಾಮ ಬೀರುವ ಕಣ್ಣಿನ ರೆಟಿನೋಪತಿ
• ಕಾರ್ಡಿಯಾಕ್ ಆರ್ರಿತ್ಮಿಯಾ
• ಚರ್ಮಕ್ಕೆ ಅಕಾಲಿಕವಾಗಿ ವಯಸ್ಸಾಗುವುದು

ವಿಟಮಿನ್ E ನ ಅತಿಯಾದ ಸೇವನೆಯಿಂದ ಉಂಟಾಗುವ ಪರಿಣಾಮಗಳು:
ವಿಟಮಿನ್ E ಯ ಹೆಚ್ಚಿನ ಸೇವನೆಯು ರಕ್ತದಲ್ಲಿನ ಹೆಪ್ಪುಗಟ್ಟುವಿಕೆಯ ಕಾರ್ಯವಿಧಾನಕ್ಕೆ ಅಡ್ಡಿಯುಂಟು ಮಾಡಬಹುದು ಮತ್ತು ಕೆಲವರಲ್ಲಿ ಇದು ಹೆಚ್ಚಿನ ರಕ್ತಸ್ರಾವಕ್ಕೆ ಕಾರಣವಾಗುತ್ತದೆ.

ಇತರೆ ಔಷಧಿಗಳೊಂದಿಗೆ ವಿಟಮಿನ್ E ಯ ಹೊಂದಾಣಿಕೆ/ ಪ್ರತಿಪರಿಣಾಮ/ ಪ್ರತಿಕ್ರಿಯೆ
ವಿಟಮಿನ್ E, ಪ್ರತಿಕಾಯ ಔಷಧಗಳು ಅಥವಾ ವಾರ್ಫರಿನ್ ನಂತಹ ಪ್ಲೇಟ್‌ಲೆಟ್ ವಿರೋಧಿ ಔಷಧಿಗಳೊಂದಿಗೆ ಪ್ರತಿಕ್ರಿಯಿಸಬಹುದು ಮತ್ತು ಈ ಔಷಧಿಗಳನ್ನು ಸೇವಿಸುವ ಜನರಲ್ಲಿ ರಕ್ತ ಹೆಪ್ಪುಗಟ್ಟುವ ಸಾಮರ್ಥ್ಯವನ್ನು ಅಡ್ಡಿಪಡಿಸಬಹುದು.
ಹೆಚ್ಚಿನ ಕೊಬ್ಬಿನಾಂಶ ಹೊಂದಿರುವ ಜನರು ಸ್ಟ್ಯಾಟಿನ್ ಅಥವಾ ನಿಯಾಸಿನ್ ನೊಂದಿಗೆ ವಿಟಮಿನ್ E ಯನ್ನು ತೆಗೆದುಕೊಂಡರೆ, ಪರಸ್ಪರ ಕ್ರಿಯೆಯು ನಿಯಾಸಿನ್ ಪರಿಣಾಮವನ್ನು ಕಡಿಮೆ ಮಾಡುತ್ತದೆ.
ವಿಟಮಿನ್ K ಯೊಂದಿಗೆ ವಿಟಮಿನ್ E ಯನ್ನು ಸೇವಿಸುವುದರಿಂದ ವಿಟಮಿನ್ E ನ ಪರಿಣಾಮ ಕಡಿಮೆಯಾಗುತ್ತದೆ.
ಕೀಮೋಥೆರಪಿ ಅಥವಾ ರೇಡಿಯೊಥೆರಪಿ ಚಿಕಿತ್ಸೆಗಳ ಅವಧಿಯಲ್ಲಿ ವಿಟಮಿನ್ E ಸೇವನೆಯು ಪರಿಣಾಮಕಾರಿತ್ವವನ್ನು ಕಡಿಮೆ ಮಾಡುತ್ತದೆ ಎಂದು ತಿಳಿದುಬಂದಿದೆ

ರೋಗನಿರ್ಣಯ
ಸಾಮಾನ್ಯವಾಗಿ ಕಡಿಮೆ ಆಲ್ಫಾ-ಟೊಕೊಫೆರಾಲ್ ಮಟ್ಟ ಅಥವಾ ಕಡಿಮೆ ಅನುಪಾತದ ಸೀರಮ್ ಆಲ್ಫಾ-ಟೊಕೊಫೆರಾಲ್ ಸಮಸ್ಯೆಯನ್ನು ಸೀರಮ್ ಲಿಪಿಡ್ಗಳ ಮಾಪನದೊಂದಿಗೆ ಕಂಡುಹಿಡಿದು ರೋಗವನ್ನು ನಿರ್ಧರಿಸಲಾಗುತ್ತದೆ. ಕೆಲವೊಮ್ಮೆ ಅಬೆಟಾಲಿಪೊಪ್ರೋಟಿನೆಮಿಯಾ ಸಮಸ್ಯೆಯುಳ್ಳ ಮಗುವಿನಲ್ಲಿ ಪತ್ತೆಹಚ್ಚಲು ಸಾಧ್ಯವಾಗದಷ್ಟು ಸೀರಮ್ ಆಲ್ಫಾ-ಟೊಕೊಫೆರಾಲ್ ಮಟ್ಟವನ್ನು ಹೊಂದಿರಬಹುದು.

ಚಿಕಿತ್ಸೆ ಬಾಯಿಯ ಮೂಲಕ ನೀಡಲಾಗುವ ವಿಟಮಿನ್ E ಲಪೂರಕಗಳು ದೇಹದಲ್ಲಿ ವಿಟಮಿನ್ ನ ಕೊರತೆಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಪರಿಣಾಮಕಾರಿ ಎಂದು ಕಂಡುಬಂದಿದೆ. ಆದರೆ, ಮಾಲಾಬ್ಸರ್ಪ್ಷನ್ ಸಿಂಡ್ರೋಮ್ಗಳ ಕೊರತೆಗೆ ಮೂಲ ಕಾರಣವನ್ನು ಕಂಡುಹಿಡಿದು ಸೂಕ್ತ ಚಿಕಿತ್ಸೆ ನೀಡಲು ಕ್ರಮಗಳನ್ನು ತೆಗೆದುಕೊಳ್ಳಬೇಕು.

ಘೋಷಣೆ: ಮೇಲಿನ ಮಾಹಿತಿಯು ಅರಿವು ಮತ್ತು ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರವೇ ಹೊರತು, ಯಾವುದೇ ದೇಹಸ್ಥಿತಿಯ ರೋಗನಿರ್ಣಯ ಅಥವಾ ಚಿಕಿತ್ಸೆಗಾಗಿ ಬಳಸಲಾಗುವುದಿಲ್ಲ. ಯಾವುದೇ ಸಂದೇಹ ಅಥವಾ ಪ್ರಶ್ನೆಗಳಿದ್ದಲ್ಲಿ ದಯವಿಟ್ಟು ವೈದ್ಯರನ್ನು ಸಂಪರ್ಕಿಸಿ, ಸಮಾಲೋಚಿಸಿ.

ಉಲ್ಲೇಖಗಳು
1. https://www.mayoclinic.org/drugs-supplements-vitamin-e/art-20364144
2. https://ods.od.nih.gov/factsheets/VitaminE-HealthProfessional/
3. https://ods.od.nih.gov/factsheets/VitaminE-Consumer/
Picture of Dr C P Ravikumar

Dr C P Ravikumar

CONSULTANT – PEDIATRIC NEUROLOGY
Aster CMI Hospital, Bangalore